ಕಲರ್ಸ್ ಕನ್ನಡದಲ್ಲಿ ಈ ವಿಕೇಂಡ್ನಿಂದ ಕೋಟ್ಯಧಿಪತಿ ಆರಂಭ
- By Sunil H C
- Category: News
- No comment
- Hits: 464
ಟಿವಿ ವಾಹಿನಿಯ ಖ್ಯಾತ ಕ್ವಿಜ್ ಶೋ ಕೋಟ್ಯಧಿಪತಿ ಇದೇ ಶನಿವಾರ ಅಂದರೆ ಜೂನ್ 22 ರಿಂದ ಆರಂಭವಾಗಲಿದೆ. ಈ ಶೋ ಶನಿವಾರ ಮತ್ತು ಭಾನುವಾರ ರಾತ್ರಿ 9 ರಿಂದ 10ರವರೆಗೂ ಪ್ರಸಾರವಾಗಲಿದೆ.
‘ಕನ್ನಡದ ಕೋಟ್ಯಧಿಪತಿ ರಿಯಾಲಿಟಿ ಶೋ ನಾನು ಮೂರನೇ ಬಾರಿ ನಿರೂಪಣೆ ಮಾಡುತ್ತಿದ್ದೇನೆ. ಹಿಂದಿಯ ಕೆಬಿಸಿ ನಮ್ಮ ತಂದೆಯವರಿಗೆ ಸಿಕ್ಕಾಪಟ್ಟೆ ಫೇವರಿಟ್. ಹಾಗಾಗಿ ನನಗೆ ಈ ಶೋ ಮೇಲೆ ಒಂದು ಸೆಂಟಿಮೆಂಟ್ ಇದೆ. ಅಲ್ಲದೆ ನನ್ನ ಸಪೋರ್ಟ್ ಗೆ ನಮ್ಮ ತಾಯಿ ನಿಂತಿದ್ದರು, ಈಗಲೂ ಅವರಿದ್ದಾರೆ. ಇನ್ನು ನಮ್ಮ ಅಣ್ಣಂದಿರು ಯಾವಾಗಲೂ ನನ್ನ ಜತೆಯಲ್ಲಿ ನಿಲ್ಲುತ್ತಾರೆ. ಇದೊಂದು ಅದ್ಭುತ ಶೋ. ಸಾಮಾನ್ಯರು ಹಣ ಗೆಲ್ಲುವುದನ್ನು ಮತ್ತು ಗೆದ್ದಾಗ ಅವರ ಮುಖದಲ್ಲಿರುವ ಖುಷಿಯನ್ನು ನೋಡುವುದೇ ಒಂದು ದೊಡ್ಡ ಖುಷಿ’ಎಂದು ಪುನೀತ್ರಾಜ್ಕುಮಾರ್ ಹೇಳಿದರು.