ರುಸ್ತುಂ ಪಕ್ಕಾ ಅಕ್ಷ್ಯನ್ ಎಂಟರ್‌ಟೇನರ್ – ಚಿತ್ರ ವಿಮರ್ಶೆ – ಸಿನಿಲೋಕ

 ರುಸ್ತುಂ ಪಕ್ಕಾ ಅಕ್ಷ್ಯನ್ ಎಂಟರ್‌ಟೇನರ್ – ಚಿತ್ರ ವಿಮರ್ಶೆ – ಸಿನಿಲೋಕಚಿತ್ರ: ರುಸ್ತುಂ
ನಿರ್ದೇಶಕ: ರವಿವರ್ಮಾ
ತಾರಾಗಣ: ಡಾ.ಶಿವರಾಜ್‌ಕುಮಾರ್‌,, ವಿವೇಕ್‌ ಓಬೇರಾಯ್‌, ಶ್ರದ್ಧಾ ಶ್ರೀನಾಥ್‌,ರಚಿತಾ ರಾಮ್, ಮಯೂರಿ, ಮಹೇಂದ್ರನ್‌
ಸಂಗೀತ: ಅನೂಪ್‌ ಸೀಳಿನ್‌
ನಿರ್ಮಾಣ: ಜಯಣ್ಣ, ಬೋಗೇಂದ್ರ

ಟಗರು ಚಿತ್ರದ ನಂತರ ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್‌ ನಟನೆಯ ಯಾವುದೇ ಸಿನಿಮಾ ಖಡಕ್ ಮಾಸ್ ಸಿನಿಮಾ ಬಂದಿಲ್ಲ ಎಂಬ ಅಭಿಮಾನಿಗಳ ಕೊರಗಿಗೆ ರುಸ್ತುಂ ಉತ್ತರ ಎನ್ನಬಹುದು.

ಕನ್ನಡದಲ್ಲಿ ಸಾಕಷ್ಟು ದಕ್ಷ ಅಧಿಕಾರಿಗಳ ಚಿತ್ರ ಬಂದಿದೆ. ಅವುಗಳಲ್ಲಿ ಸಾಕಷ್ಟು ಸೂಪರ್‌ ಹಿಟ್‌ ಇನ್ನು ಕೆಲವೂ ಅಟ್ಟರ್‌ ಫ್ಲಾಪ್‌. ರುಸ್ತುಂ ಕೂಡ ಒಬ್ಬ ದಕ್ಷ ಪೊಲೀಸ್ ಅಧಿಕಾಯ ಕಥೆ ಹೊಂದಿದ್ದು, ಅಭಿಮಾನಿಗಳಿಗೆ ಖುಷಿ ಕೊಡುತ್ತದೆ.
ರುಸ್ತುಂ ಮೂವರ ಪ್ರಾಮಾಣಿಕ ಅಧಿಕಾರಿಗಳ ಕಥೆ. ಮೂವರು ಅಧಿಕಾರಿಗಳು ಒಬ್ಬನೇ ರಾಜಕಾರಣಿಯಿಂದ ಹೇಗೆ ತೊಂದರೆ ಅನುಭವಿಸುತ್ತಾರೆ, ಹೀಗೆ ಅನುಭವಿಸಿದ ತೊಂದರೆಗೆ ಅವರಲ್ಲಿ ಒಬ್ಬ ಅಧಿಕಾರಿ ಪರಿಹಾರ ಹೇಗೆ ಕಂಡು ಹಿಡಿದುಕೊಳ್ಳುತ್ತಾನೆ ಎಂಬುದೇ ಸಿನಿಮಾದ ಒನ್‌ ಲೈನ್‌ .

ಭಾರತೀಯ ಚಿತ್ರರಂಗದಲ್ಲಿ ಬೆಸ್ಟ್‌ ಆ್ಯಕ್ಷನ್‌ ಡೈರೆಕ್ಟರ್‌ ಎಂದೇ ಹೆಸರು ಮಾಡಿರುವ ರವಿವರ್ಮಾ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಭರಪೂರ ಮನರಂಜನೆ ಇದೆ. ಶಿವರಾಜ್‌ಕುಮಾರ್‌ ಅಂತೂ ಪ್ರತಿಯೊಂದು ಸೀನ್‌ನಲ್ಲಿಯೂ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡುತ್ತಾರೆ.

ವಿವೇಕ್‌ ಓಬೆರಾಯ್‌ ಕೂಡಾ ಉತ್ತಮವಾಗಿ ನಟಿಸಿದ್ದಾರೆ. ಇನ್ನು ಖಳ ನಟ ದಿವಂಗತ ಮಹೇಂದ್ರನ್‌ ಎಲ್ಲರೂ ನಾಚುಂತೆ ಕಣ್ಣಲ್ಲೇ ನಟಿಸುತ್ತಾರೆ. ಶ್ರದ್ಧಾ,ರಚಿತಾ,ಮಯೂರಿ ಮೂರು ಜನ ಸಿನಿಮಾದ ಕಥೆಗೆ ಪೂರಕವಾಗಿ ನಟಿಸಿದ್ದಾರೆ.

ಇಡೀ ಸಿನಿಮಾದಲ್ಲಿ ದೊಡ್ಡ ಹೈಲೈಟ್‌ ಅಂದರೆ ಸಿನಿಮಾಟೋಗ್ರಫಿ ಮತ್ತು ಸಂಗೀತ . ಮಹೇನ್‌ ಸಿಂಹ ಅವರು ತಮ್ಮ ಕ್ಯಾಮೆರಾ ಮೂಲಕ ಮ್ಯಾಜಿಕ್‌ ಮಾಡಿದರೆ, ಅನೂಪ್‌ ಹಿನ್ನೆಲ ಸಂಗೀತ ಮತ್ತು ಹಾಡುಗಳು ಎರಡರಲ್ಲಿಯೂ ಸಿಕ್ಸರ್‌ ಬಾರಿಸಿದ್ದಾರೆ. ಚಿತ್ರದಲ್ಲಿರುವ ಸೆಂಟಿಮೆಂಟ್ ಸನ್ನಿವೇಶಗಳು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ದೇವರೇ ದೇವರೇ ಹಾಡು ಸಿನಿಮಾ ಮುಗಿದ ನಂತರವೂ ನಿಮ್ಮನ್ನು ಆವರಿಸಿಕೊಳ್ಳುತ್ತದೆ.

ಕೊಂಚ ಲಾಜಿಕ್‌ ಮಿಸ್‌ ಹೊಡೆಯುತ್ತದೆ ಎನ್ನುವುದನ್ನು ಬಿಟ್ಟರೆ ಸಿನಿಮಾ ಪಕ್ಕಾ ಮಾಸ್‌ ಮಸಾಲೆ ತುಂಬಿದ ಎಂಟರ್‌ಟೇನರ್‌. ಪಂಚಿಂಗ್ ಡೈಲಾಗ್ ಗಳು ತುಂಬಾ ಇವೆ, ಆದರೆ ಹಿಂದಿಯಲ್ಲೇ ಜಾಸ್ತಿ ಇರುವುದು ಕೆಲವರಿಗೆ ಅರ್ಥವಾಗದೆ ಇರಬಹುದು ಎಂದುಕೊಂಡರೆ ಅದಕ್ಕೆ ಕನ್ನಡ ಸಬ್ ಟೈಟಲ್ಸ್ ಕೊಟ್ಟಿದ್ದಾರೆ ನಿರ್ದೇಶಕರು.

ರುಸ್ತುಂ ಚಿತ್ರದಲ್ಲಿ ಎಲ್ಲಾ ಕಮರ್ಷಿಯಲ್ ಎಲಿಮೆಂಟ್ಸ್ ಇವೆ. ಈ ವಿಕೇಂಡ್‌ಗೆ ಶಿವರಾಜ್‌ಕುಮಾರ್‌ ಅಭಿಮಾನಿಗಳು ಮಿಸ್‌ ಮಾಡದೇ ನೋಡುವಂತಹ ಚಿತ್ರ ಇದಾಗಿದೆ.

ರೇಟಿಂಗ್‌: 3.5/5


Digiqole ad

Sunil H C

Leave a Reply