ವರಮಹಾಲಕ್ಷ್ಮೀ ಹಬ್ಬಕ್ಕೆ ಕೆಂಪೇಗೌಡ-2 ಬಿಡುಗಡೆ

 ವರಮಹಾಲಕ್ಷ್ಮೀ ಹಬ್ಬಕ್ಕೆ ಕೆಂಪೇಗೌಡ-2 ಬಿಡುಗಡೆ

ನಾಲ್ಕು ವರ್ಷಗಳ ನಂತರ ತೆರೆ ಮೇಲೆ ಕೆಂಪೇಗೌಡನಾಗಿ ಅಬ್ಬರಿಸಲು ಬರುತ್ತಿದ್ದಾರೆ ಕೋಮಲ್‌. ಅದಕ್ಕೆ ದಿನಾಂಕ ಸಹ ನಿಗದಿಯಾಗಿದ್ದು, ಇದೇ ವರಮಹಾಲಕ್ಷ್ಮೀ ಹಬ್ಬಕ್ಕೆ ಕರ್ನಾಟಕದದ್ಯಾಂತೆ ಕೆಂಪೇಗೌಡ -2 ಬಿಡುಗಡೆಯಾಗುತ್ತಿದೆ.


ಇಷ್ಟು ದಿನ ಬರೀ ಕಾಮಿಡಿ ಮಾಡಿಕೊಂಡಿದ್ದ ಕೋಮಲ್‌ ಮೊದಲ ಬಾರಿಗೆ ಆ್ಯಕ್ಷನ್‌ ಸಬ್ಜೆಕ್ಟ್‌ನಲ್ಲಿ ನಟಿಸಿದ್ದು, ಈ ಸಿನಿಮಾ ಇದೇ ಆಗಸ್ಟ್‌ 9ಕ್ಕೆ ತೆರೆ ಮೇಲೆ ಬರುತ್ತದೆ. ಆಗಸ್ಟ್ 9ಕ್ಕೆ ವರಮಹಾಲಕ್ಷ್ಮೀ ಹಬ್ಬ, ಶನಿವಾರ ಎರಡನೇ ಶನಿವಾರ, ಭಾನುವಾರ ರಜೆ ಸೋಮವಾರ ಬಕ್ರೀದ್‌ ಹಬ್ಬ ಹೀಗೆ ಸಾಲು ಸಾಲು ರಜಾ ಇರುವ ಸಮಯದಲ್ಲಿ ಕೆಂಪೇಗೌಡ-2 ಬಿಡುಗಡೆಯಾಗುತ್ತಿರುವುದು ಕೋಮಲ್‌ ಅಭಿಮಾನಿಗಳಲ್ಲಿ ಖುಷಿ ತಂದಿದೆ.

ಈ ಗಾಗಲೇ ಬಿಡುಗಡೆಯಾಗಿರುವ ಸಿನಿಮಾದ ಟ್ರೇಲರ್‌ ಮತ್ತು ಹಾಡುಗಳು ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ’ಈ ಸಿನಿಮಾದಲ್ಲಿ ಭಾರತೀಯ ಚಿತ್ರರಂಗದಲ್ಲಿ ಇದುವರೆಗೂ ನೋಡದ ಒಂದು ಸಬ್ಜೆಕ್ಟ್‌ ಇದ್ದು, ಅದು ಖಂಡಿತಾ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ’ ಎನ್ನುತ್ತಾರೆ ಕೋಮಲ್‌.

ಈ ಸಿನಿಮಾವನ್ನು ನಿರ್ಮಾಪಕ ಶಂಕರೇಗೌಡ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಕ್ರಿಕೆಟಿಕ ಶ್ರೀಶಾಂತ್‌, ಲೂಸ್‌ ಮಾದ ಯೋಗಿ, ಸುಚೇಂದ್ರ ಪ್ರಸಾದ್‌ ಸೇರಿದಂತೆ ಸಾಕಷ್ಟು ಮಂದಿ ನಟಿಸಿದ್ದಾರೆ. ಒಟ್ಟಿನಲ್ಲಿ ಈ ಬಾರಿಯ ವರಮಹಾಲಕ್ಷ್ಮೀ ಹಬ್ಬಕ್ಕೆ ಕೋಮಲ್‌ ತೆರೆ ಮೇಲೆ ಪೊಲೀಸ್‌ ಅಧಿಕಾರಿಯಾಗಿ ಪ್ರೇಕ್ಷಕರೆದುರು ಬರಲಿದ್ದಾರೆ.


Digiqole ad

Sunil H C

Leave a Reply