ಎಂ.ಎಸ್.ಆರ್ ಪ್ರೊಡಕ್ಷನ್ ಲಾಂಛನದಲ್ಲಿ ಅಕ್ಷಯ್ ಸಮರ್ಥ ಅವರು ನಿರ್ಮಿಸಿರುವ ದಶರಥ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಎಂ.ಎಸ್.ರಮೇಶ್ ನಿರ್ದೇಶನದ ಈ ಚಿತ್ರದ ನಾಯಕರಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯಿಸಿದ್ದಾರೆ. ಸೋನಿಯ ಅಗರವಾಲ್, ಅಭಿರಾಮಿ, ರಂಗಾಯಣ ರಘು, ಶೋಭ್‍ರಾಜ್, ಅವಿನಾಶ್, ಮೇಘಶ್ರೀ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ರವಿಚಂದ್ರನ್ ಅವರು ಈ ಚಿತ್ರದಲ್ಲಿ ವಕೀಲರಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಜಬರ್ದಸ್ತ್ ಸಂಬಾಷಣೆಗಳಿವೆ.

ಗುರುಕಿರಣ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಜಿ.ಎಸ್.ವಿ ಸೀತಾರಾಂ ಅವರ ಛಾಯಾಗ್ರಹಣವಿದೆ. ಯು.ಡಿ.ವೆಂಕಟೇಶ್ ಸಂಕಲನ, ಮದನ್ – ಹರಿಣಿ, ಕಲೈ, ಭೂಷ ನೃತ್ಯ ನಿರ್ದೇಶನ ಹಾಗೂ ಗಣೇಶ್(ಹೈದರಾಬಾದ್) ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.


Leave a Reply