‘ದಶರಥ’ ಚಿತ್ರ ವಿಮರ್ಶೆ – ಸಿನಿಲೋಕ

 ‘ದಶರಥ’ ಚಿತ್ರ ವಿಮರ್ಶೆ – ಸಿನಿಲೋಕ

ಚಿತ್ರ: ದಶರಥ


ತಾರಾಗಣ: ರವಿಚಂದ್ರನ್‌, ಸೋನಿಯಾ ಅಗರ್‌ವಾಲ್‌, ಅಭಿರಾಮಿ, ಮೇಘಶ್ರೀ ಮತ್ತಿತರರು

ನಿರ್ದೇಶನ: ಎಂ ಎಸ್‌ ರಮೇಶ್‌

ನಿರ್ಮಾಣ: ಅಕ್ಷಯ್‌

ಸಂಗೀತ: ಗುರುಕಿರಣ್‌

ತಮ್ಮ ಖಡಕ್‌ ಡೈಲಾಗ್‌ಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹೆಸರು ಮಾಡಿರುವ ನಿರ್ದೇಶಕ ಎಂ ಎಸ್‌ ರಮೇಶ್‌ ಬಹಳ ದಿನಗಳ ನಂತರ ನಿರ್ದೇಶನ ಮಾಡಿರುವ ದಶರಥ ಈ ವಾರ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ರವಿಚಂದ್ರನ್‌ ಸಹ ಬಹಳ ವರ್ಷಗಳ ನಂತರ ಲಾಯರ್‌ ಪಾತ್ರದಲ್ಲಿ ನಟಿಸಿದ್ದಾರೆ. ರವಿಚಂದ್ರನ್‌ ತನ್ನ ಮಗಳನ್ನು ಕಾಪಾಡಿಕೊಳ್ಳಲು ಮಾಡುವ ಹೋರಾಟವೇ ದಶರಥದ ಕಥೆ.

ಈ ಹಿಂದೆ ಬಿಡುಗಡೆಯಾಗಿದ್ದ ದೃಶ್ಯ ಸಿನಿಮಾವನ್ನು ಹೋಲುವ ದಶರಥ ತನ್ನ ವಿಶಿಷ್ಟ ಶೈಲಿಯ ನಿರೂಪಣೆಯಿಂದ ಗಮನ ಸೆಳೆಯುತ್ತದೆ. ಎಂದಿನಂತೆ ಸಿನಿಮಾದಲ್ಲಿ ರಮೇಶ್‌ ಅವರು ಬರೆದಿರುವ ಖಡಕ್‌ ಡೈಲಾಗ್‌ಗಳಿವೆ. ಕೋರ್ಟ್ ಹಾಲ್ ನಲ್ಲಿ ನಡೆಯುವ ಸನ್ನಿವೇಶಗಳು ಚಪ್ಪಾಳೆ ಗಿಟ್ಟಿಸುತ್ತವೆ.

ನಾಯಕಿಯರಾದ ಅಭಿರಾಮಿ ಮತ್ತು ಸೋನಿಯಾ ಅಗರ್‌ವಾಲ್‌ ತಮ್ಮ ನಟನೆಯಿಂದ ಇಷ್ಟವಾಗುತ್ತಾರೆ. ಆದರೆ ರವಿಚಂದ್ರನ್‌ ಫ್ಲ್ಯಾಶ್‌ಬ್ಯಾಕ್‌ನಲ್ಲಿ ಹೇಗಿರುತ್ತಾರೋ, ಪ್ರಸೆಂಟ್‌ನಲ್ಲಿಯೂ ಹಾಗೆ ಇರುತ್ತಾರೆ ಇದೊಂದನ್ನು ನಿರ್ದೇಶಕರು ಗಮನಿಸಬೇಕಿತ್ತು. ಮೇಘಶ್ರೀ ಅವರ ನಟನೆ ಕೂಡಾ ಚೆನ್ನಾಗಿದೆ ಮತ್ತು ಅವರಿಗೆ ಈ ಸಿನಿಮಾದಲ್ಲಿ ಸ್ಕ್ರೀನ್‌ ಸ್ಪೇಸ್‌ ಸ್ವಲ್ಪ ಜಾಸ್ತಿಯೇ ಇದೆ.

ಇಡೀ ಸಿನಿಮಾದ ಕಥೆ ಎಲ್ಲೋ ನೋಡಿದ ಹಾಗೆ ಅನಿಸುತ್ತದೆ, ಜತೆಗೆ ಕೆಲ ಹಳೇ ಸಿನಿಮಾಗಳ ದೃಶ್ಯಗಳನ್ನು ಹೋಲುವ ಒಂದಷ್ಟು ಸೀನ್‌ಗಳಿವೆ ಇವೆಲ್ಲವನ್ನು ಬಿಟ್ಟರೆ ರವಿಚಂದ್ರನ್‌ ಅಭಿಮಾನಿಗಳು ರವಿಚಂದ್ರನ್‌ ಅವರನ್ನು ಬೇರೆಯದ್ದೇ ಅವತಾರದಲ್ಲಿ ನೋಡಬಹುದು. ಫ್ಯಾಮಿಲಿ ಲಾಯರ್‌ ದಶರಥನ ದರ್ಶನಕ್ಕೆ ಕೊಟ್ಟ ಕಾಸಿಗೆ ಮೋಸವಿಲ್ಲ.

ರೇಟಿಂಗ್‌: 3/5


Digiqole ad

Sunil H C

Leave a Reply