ಚಿತ್ರ: ಗುಬ್ಬಿ ಮೇಲೆ ಬ್ರಹ್ಮಾಸ್ತ್ರ

ನಿರ್ದೇಶನ: ಸುಜಯ್ ಶಾಸಿ

ನಿರ್ಮಾಪಕ: ಚಂದ್ರಶೇಖರ್.ಟಿ. ಆರ್

ಸಂಗೀತ: ಮಣಿಕಾಂತ್ ಕದ್ರಿ

ಕ್ಯಾಮೆರಾ : ಸುನಿತ್ ಹಲಗೇರಿ

ತಾರಾಗಣ: ರಾಜ್ ಬಿ ಶೆಟ್ಟಿ, ಕವಿತಾ ಗೌಡ, ಸುಜಯ್ ಶಾಸ್ತ್ರಿ, ಪ್ರಮೊದ್ ಶೆಟ್ಟಿ, ಶೋಭ್‌ರಾಜ್ ಮತ್ತಿತರರು.

ಕಾಮಿಡಿ ಸಿನಿಮಾಗಳನ್ನು ಮಾಡುವುದು ಹೇಗೆ ಎನ್ನುವವರಿಗೆ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಸಿನಿಮಾದ ಮೂಲಕ ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಸುಜಯ್‌ ಶಾಸ್ತ್ರಿ.

ಅವರು ಎಲ್ಲೇ ಹೋದರು ಇದೊಂದು ಕಂಪ್ಲೀಟ್‌ ಎಂಟರ್‌ಟೇನಿಂಗ್‌ ಸಿನಿಮಾ ಇದರಲ್ಲಿ ಯಾವುದೇ ಸಂದೇಶವಾಗಲಿ, ಸೆಂಟಿಮೆಂಟ್‌ ದೃಶ್ಯಗಳಾಗಲಿ ಇಲ್ಲ ಜನ ಒಮ್ಮೆ ಚಿತ್ರಮಂದಿರಕ್ಕೆ ಬಂದರೆ ನಕ್ಕು ರಿಲ್ಯಾಕ್ಸ್‌ ಆಗಿ ಹೊರ ಹೋಗುತ್ತಾರೆ ಎಂದು ಹೇಳಿದ್ದರು. ಅದರಂತೆ ಅವರು ಸಿನಿಮಾ ಮಾಡಿದ್ದಾರೆ.ಸಿನಿಮಾದ ಹೆಸರೇ ಹೇಳುವಂತೆ ನಾಯಕನ ಮೇಲೆ ಎಲ್ಲರೂ ಅಸ್ತ್ರ ಬಿಡುತ್ತಿರುತ್ತಾರೆ, ಆ ಅಸ್ತ್ರಗಳನ್ನು ಆತ ಹೇಗೆ ತಪ್ಪಿಸಿಕೊಳ್ಳುತ್ತಾನೆ. ಹೀಗೆ ತಪ್ಪಿಸಿಕೊಳ್ಳುವಾಗ ಆಗುವ ಘಟನೆಗಳು ಪ್ರೇಕ್ಷಕನನ್ನು ಹೇಗೆ ನಕ್ಕು ನಗಿಸುತ್ತವೆ ಎಂಬುದೇ ಸಿನಿಮಾದ ಕಥೆ. ಇದೊಂದು ಪಕ್ಕಾ ಹಾಸ್ಯಮಯ ಚಿತ್ರ ಹಾಗಾಗಿ ಇಲ್ಲಿ ಅದರ ಕಥೆಯನ್ನು ಹೇಳುವುದಕ್ಕಿಂತ ಒಮ್ಮೆ ಚಿತ್ರಮಂದಿರಕ್ಕೆ ಹೋಗಿ ಅದನ್ನು ನೋಡಿದರೇ ಚಂದ.

ಒಂದು ಮೊಟ್ಟೆಯ ಕಥೆ ಮೂಲಕ ಕನ್ನಡ ಜನರಿಗೆ ಬಹಳ ಇಷ್ಟವಾಗಿದ್ದ ನಟ ರಾಜ್‌ ಬಿ ಶೆಟ್ಟಿ ಇಲ್ಲಿಯೂ ತಮ್ಮ ಮುಗ್ಧ ನಟನೆಯ ಮೂಲಕ ನಗಿಸುವುದರ ಜತೆಗೆ ಪ್ರೇಕ್ಷಕರನ್ನು ತಮ್ಮತ್ತ ಸೂಜಿಗಲ್ಲಿನಂತೆ ಸೆಳೆಯುತ್ತಾರೆ. ಅವರು ನಟಿಸಿಲ್ಲ, ಬದಲಿಗೆ ಪಾತ್ರವೇ ಆಗಿದ್ದಾರೆ. ಹೀಗೆ ಅನ್ನಿಸುವುದು ನಿರ್ದೇಶಕ ಸುಜಯ್‌ ಶಾಸ್ತ್ರಿಯವರ ಪಾತ್ರ.

ಇನ್ನು ಪ್ರಮೋದ್‌ ಶೆಟ್ಟಿ ಈ ಸಿನಿಮಾದ ಅಚ್ಚರಿ. ಶೋಭರಾಜ್‌, ಅರುಣಾ ಬಾಲರಾಜ್‌, ಮಂಜುನಾಥ್‌ ಹೆಗಡೆ, ನಾಯಕಿ ಕವಿತಾ ಗೌಡ, ಬಾಬು ಹೀರಣ್ಣಯ್ಯ ಎಲ್ಲರೂ ಓವರ್‌ ಆ್ಯಕ್ಟಿಂಗ್‌ ಮಾಡಿದ್ದಾರೆ. ಆದರೆ ಅದೆಲ್ಲವೂ ಸ್ಕ್ರಿಪ್ಟ್‌ಗಾಗಿ ಮತ್ತು ಪ್ರೇಕ್ಷಕರನ್ನು ನಗಿಸಲು ಎಂಬುದನ್ನು ಆಗಾಗ ನಿರ್ದೇಶಕರು ನೆನಪಿಸುವಂತೆ ಚಿತ್ರಕಥೆ ಮಾಡಿದ್ದಾರೆ.

ಒಂದು ಸಾಮಾನ್ಯ ಕಥೆಗೆ ಉತ್ತಮವಾದ ಚಿತ್ರಕಥೆ ಮತ್ತು ಹಾಸ್ಯ ದೃಶ್ಯಗಳಿದ್ದರೆ ಸಿನಿಮಾ ಯಾವುದೇ ತಂತ್ರಜ್ಞಾನವನ್ನು ಹೆಚ್ಚಾಗಿ ಬೇಡುವುದಿಲ್ಲ, ಅದು ಗುಬ್ಬಿ ಮೇಲೆ ಬ್ರಹ್ಮಾಸ್ತ್ರದಲ್ಲಿಯೂ ಪ್ರೂವ್‌ ಆಗಿದೆ.

ಸಿನಿಮಾಟೋಗ್ರಫರ್‌ ಸುನೀತ್‌ ಹಲಗೇರಿ ಮತ್ತು ಸಂಗೀತ ನಿರ್ದೇಶಕ ಮಣಿಕಾಂತ್‌ ಕದ್ರಿಯವರ ಕೆಲಸಗಳು ಸಿನಿಮಾಗೆ ಪೂರಕವಾಗಿವೆ. ಒಟ್ಟಿನ್ಲಲಿ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಒಂದೊಳ್ಳೆ ಫ್ಯಾಮಿಲಿ ಮತ್ತು ಕಾಮಿಡಿ ಎಂಟರ್‌ಟೇನರ್‌ ಈ ವಾರಂತ್ಯಾಕ್ಕೆ ನಕ್ಕು ನಗಲು ಒಮ್ಮೆ ಚಿತ್ರಮಂದಿರಕ್ಕೆ ಹೋಗಬಹುದು.

ರೇಟಿಂಗ್: 3.5/5


Leave a Reply