ಒನ್‌ ಲವ್‌ ಟು ಸ್ಟೊರಿ – ಚಿತ್ರ ವಿಮರ್ಶೆ

 ಒನ್‌ ಲವ್‌ ಟು ಸ್ಟೊರಿ – ಚಿತ್ರ ವಿಮರ್ಶೆ

ಚಿತ್ರ: ಒನ್‌ ಲವ್‌ ಟು ಸ್ಟೊರಿ
ನಿರ್ದೇಶಕ: ವಸಿಷ್ಠ ಬಂಟನೂರು
ಸಂಗೀತ: ಸಿದ್ಧಾರ್ಥ್‌
ತಾರಾಗಣ: ಸಂತೋಷ್‌, ಮಧುಗೌಡ, ಆದ್ಯಾ ಮತ್ತು ಪ್ರಕೃತಿಗೌಡ.


ಸ್ಯಾಂಡಲ್‌ವುಡ್‌ನಲ್ಲಿ ಪ್ರತಿ ವಾರ ಏನಿಲ್ಲವೆಂದರೂ ಒಂದಾದರೂ ಹೊಸಬರು ಸಿನಿಮಾ ರಿಲೀಸ್‌ ಆಗುತ್ತವೆ. ಅದರಲ್ಲಿ ಕೆಲವಷ್ಟೇ ಗಮನ ಸೆಳೆಯುತ್ತವೆ ಆ ಸಾಲಿಗೆ ಒನ್‌ ಲವ್‌ 2 ಸ್ಟೋರಿ ಸೇರುತ್ತದೆ. ಈ ವಾರ ಬಿಡುಗಡೆಯಾಗಿರುವ ಈ ಸಿನಿಮಾ ಕಂಪ್ಲೀಟ್‌ ಹೊಸಬರ ಚಿತ್ರವಾಗಿದೆ.

ಪ್ರತಿಭಾವಂತ ನಿರ್ದೇಶಕರು ಸ್ಯಾಂಡಲ್‌ವುಡ್‌ನಲ್ಲಿ ಹೆಸರು ಮಾಡಲು ಬಹಳ ಕಷ್ಟಪಡುತ್ತಾರೆ. ವಸಿಷ್ಠ ಬಂಟನೂರು ಅವರ ಕಷ್ಟವನ್ನು ತೆರೆ ಮೇಲೆ ತರಲು ಕಷ್ಟಪಟ್ಟಿದ್ದಾರೆ. ನಿರ್ದೇಶಕರ ಕಷ್ಟದ ಜತೆ ಕಲಾವಿದರ ಕಷ್ಟಗಳು ಸಹ ಇದೆ. ಒಂದಷ್ಟು ಹೊಸ ಆಲೋಚನೆಗಳ ಮೂಲಕ ಗಮನ ಸೆಳೆಯುವ ಕಥೆಯನ್ನು ತೆರೆ ಮೇಲೆ ತಂದಿರುವ ನಿರ್ದೇಶಕರು, ಜತೆಗೆಒಂದು ಲವ್‌ ಸ್ಟೋರಿಯನ್ನು ಹೇಳಿದ್ದಾರೆ. ಅವರು ಎತ್ತಿಕೊಂಡಿರುವ ಕಥೆ ಚೆನ್ನಾಗಿದೆ ಸ್ಕ್ರೀನ್‌ ಪ್ಲೇ ಇನ್ನಷ್ಟು ಟೈಟ್‌ ಆಗಿದ್ದಿದ್ದರೆ ಸಿನಿಮಾ ಒಂದಷ್ಟು ವೇಗವಾಗಿ ಇನ್ನಷ್ಟು ಚೆನ್ನಾಗಿರುತ್ತಿತ್ತು.

ನಿರ್ದೇಶಕ ಕನಸಿಗೆ ಸಾಥ್‌ ನೀಡಿರುವುದು ಸಂಗೀತ ನಿರ್ದೇಶಕ ಸಿದ್ಧಾರ್ಥ್‌. ಅವರು ನೀಡಿರುವ ಟ್ಯೂನ್‌ಗಳನ್ನು ಗಮನ ಸೆಳೆಯುವಂತೆ ಚಿತ್ರೀಕರಿಸಿದ್ದಾರೆ ಸಿನಿಮಾಟೋಗ್ರಫರ್‌ ಅನಿಲ್‌ಕುಮಾರ್‌. ಕಲಾವಿದರಾದ ಸಂತೋಷ್‌, ಮಧುಗೌಡ, ಆದ್ಯಾ ಮತ್ತು ಪ್ರಕೃತಿಗೌಡ ಎಲ್ಲರೂ ವಸಿಷ್ಠ ಬಂಟನೂರು ಅವರ ಕಲ್ಪನೆಗೆ ತಕ್ಕಂತೆ ನಟಿಸಿದ್ದಾರೆ.

ಇಡಿ ಸಿನಿಮಾದಲ್ಲಿ ಚಿತ್ರಕಥೆಯ ಮೂಲಕ ಗಮನ ಸೆಳೆದರು ಅದು ಇನ್ನಷ್ಟು ಚುರುಕಾಗಿರಬಹುದಾಗಿತ್ತು ಎಂದು ಸಹ ಅನಿಸುತ್ತದೆ. ಇನ್ನುಸಿನಿಮಾ ನಿರ್ದೇಶಕರು ಮತ್ತು ಕಲಾವಿದರ ಬಗ್ಗೆ ಇರುವುದರಿಂದ ನಿರ್ದೇಶಕರ ಪಾತ್ರ ಹೆಚ್ಚು ಕಾಣಿಸುತ್ತದೆ. ಆದರೆ ಇದನ್ನು ವಸಿಷ್ಠ ತಮ್ಮನ್ನೇ ತಲೆಯಲ್ಲಿಟ್ಟುಕೊಂಡೇ ಬರೆದುಕೊಂಡಿದ್ದಾರೆ ಎನಿಸುತ್ತದೆ. ಜತೆಗೆ ಕ್ಲೈಮ್ಯಾಕ್ಸ್‌ನಲ್ಲಿ ಇನ್ನೊಂದಿಷ್ಟು ಕುಸುರಿ ಕೆಲಸ ಅಗತ್ಯ ಇತ್ತು ಅನಿಸುತ್ತದೆ. ಹೊಸಬರಾದ್ದಾರಿಂದ ಒಂದಷ್ಟು ತಪ್ಪುಗಳನ್ನು ಸೈಡಿಗಿಟ್ಟು ಸಿನಿಮಾವನ್ನು ಒಮ್ಮೆ ನೋಡಬಹುದು.

ರೇಟಿಂಗ್ – 3/5.


Digiqole ad

Sunil H C

Leave a Reply