ರಾಂಧವ – ಚಿತ್ರ ವಿಮರ್ಶೆ – ಸಿನಿಲೋಕ

 ರಾಂಧವ – ಚಿತ್ರ ವಿಮರ್ಶೆ – ಸಿನಿಲೋಕ

ಚಿತ್ರ: ರಾಂಧವ
ನಿರ್ದೇಶನ: ಸುನೀಲ್‌ ಆಚಾರ್ಯ
ನಿರ್ಮಾಣ: ಸನತ್‌ಕುಮಾರ್‌
ಸಂಗೀತ: ಶಶಾಂಕ್‌ ಶೇಷಗಿರಿ
ತಾರಾಗಣ: ಭುವನ್‌, ಅರವಿಂದ್‌, ಜಹಾಂಗೀರ್‌


ಇತ್ತೀಚಿನ ದಿನಗಳಲ್ಲಿ ಭಾರತೀಯ ಚಿತ್ರರಂಗದ ಗಮನ ಸೆಳೆಯುತ್ತಿರುವ ಸಿನಿಮಾಗಳೆಂದರೆ ಒಂದು ಕಂಪ್ಲೀಟ್‌ ಮಾಸ್‌ ಮತ್ತೊಂದು ಹಾರರ್‌ , ಥ್ರಿಲ್ಲರ್‌ ಸಬ್ಜೆಕ್ಟ್‌ಗಳು. ಈ ರೀತಿಯ ಸಿನಿಮಾಗಳಿಂದ ಪ್ರೇಕ್ಷಕರನ್ನು ಸೆಳೆಯಬಹುದು ಎಂಬುದು ಸಿನಿಮಾ ಮೇಕರ್ಸ್‌ಗೆ ಚೆನ್ನಾಗಿ ಗೊತ್ತಾಗಿದೆ. ಹಾಗಾಗಿ ಅಂತಹದ್ದೇ ಸಿನಿಮಾಗಳ ಮೂಲಕ ಒಂದಷ್ಟು ಪ್ರೇಕ್ಷಕರನ್ನು ತಮ್ಮತ್ತ ಈಸಿಯಾಗಿ ಸೆಳೆಯುತ್ತಿದ್ದಾರೆ. ಇಂತಹ ಸಿನಿಮಾಗಳ ಸಾಲಿಗೆ ಈ ವಾರದ ರಾಂಧವ ಸಹ ಸೇರುತ್ತದೆ.

ಹೆಣ್ಣಿನ ಆಕ್ರಂದನದ ರೀತಿ ಕೂಗುವ ಗೂಬೆಯ ಸುತ್ತ ಈ ಸಿನಿಮಾದ ಕಥೆ ಇದೆ. ಇದರ ಜತೆಗೆ ಒಂದು ವರ್ಷಗಳ ದ್ವೇಷದ ಉರಿಯೂ ಈ ಸಿನಿಮಾದ ಕಥೆಯಲ್ಲಿದೆ. ರಾಬರ್ಟ್‌ [ಭುವನ್‌] ಪಕ್ಷಿಗಳ ಬಗ್ಗೆ ರಿಸರ್ಚ್‌ ಮಾಡಿ ಡಾಕ್ಯುಮೆಂಟರಿ ಮಾಡುವ ವ್ಯಕ್ತಿ. ಈ ರಾಬರ್ಟ್‌ ಗೂಬೆಯನ್ನು ಹುಡುಕಿಕೊಂಡು ಒಡೆಯನ ಸಮುದ್ರ ಎಂಬ ಊರಿಗೆ ಹೋಗುತ್ತಾನೆ. ಅಲ್ಲಿ ನಡೆಯುವ ಒಂದಷ್ಟು ವಿಷಯಗಳೇ ಸಿನಿಮಾದ ಜೀವಾಳ. ರಾಬರ್ಟ್‌ ಆ ಊರಿಗೆ ಹೋದಾಗ ಅಲ್ಲಿ ಆತನಿಗೆ ಪ್ರೀತಿಯಾಗುತ್ತದೆ, ಒಂದೆರೆಡು ಕೊಲೆಗಳಾಗುತ್ತದೆ ಇದೆಲ್ಲವೂ ಏನು, ಮತ್ತು ರಾಬರ್ಟ್‌ ಎಂಬುದು ಸಿನಿಮಾದ ನಾಯಕನ ಹೆಸರಾದರೆ ರಾಂಧವ ಎಂದರೇನು ಎಂಬುದಕ್ಕೆ ಸಿನಿಮಾ ನೋಡಬೇಕು.

ನಿರ್ದೇಶಕ ಸುನೀಲ್‌ ಆಚಾರ್ಯ ಬಹಳ ರಿಸರ್ಚ್‌ ಮಾಡಿ ಈ ಕಥೆಯನ್ನು ಮಾಡಿದ್ದಾರೆ. ಅದಕ್ಕೆ ತಕ್ಕಂತೆ ಅವರು ಚಿತ್ರೀಕರಣ ಸಹ ಮಾಡಿದ್ದಾರೆ. ಅವರಿಗೆ ಸಾಥ್‌ ನೀಡಿರುವುದು ಸಂಗೀತ ನಿರ್ದೇಶಕ ಶಶಾಂಕ್‌ ಶೇಷಗಿರಿ ಮತ್ತು ಸಿನಿಮಾಟೋಗ್ರಫರ್‌.

ಇನ್ನು ನಾಯಕ ಭುವನ್‌ ಮೊದಲ ಪ್ರಯತ್ನದಲ್ಲಿಯೇ ಸಿಕ್ಸರ್‌ ಬಾರಿಸಿದ್ದು, ಫೈಟಿಂಗ್‌, ಆ್ಯಕ್ಟಿಂಗ್‌ ಎಲ್ಲದರಲ್ಲಿಯೂ ಗೆದ್ದಿದ್ದಾರೆ. ಜಹಾಂಗೀರ್‌ ಪಾತ್ರಕ್ಕೆ ಮಾತಿನ ತೂಕ ಕೊಂಚ ಹೆಚ್ಚಾಯಿತು. ಅರವಿಂದ್‌, ಮಂಜುನಾಥ್‌ ಹೆಗಡೆ, ವಾಣಿಶ್ರೀ ಮತ್ತು ಇಬ್ಬರು ನಾಯಕಿಯರು ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ನಾಯಕನಷ್ಟೇನು ನಾಯಕಿಯರಿಗೆ ಗಮನ ಸೆಳೆಯುವಂತಹ ಪಾತ್ರವಿಲ್ಲ. ಇನ್ನು ಒಂದಷ್ಟು ಸಣ್ಣ ಪುಟ್ಟ ತಪ್ಪುಗಳಿವೆ ಆದರೆ ಹೊಸಬರು ಸಿನಿಮಾ ಎಂಬ ಮಾರ್ಜಿನ್‌ ನೀಡಿ ಒಮ್ಮೆ ನೋಡಬಹುದು.

ರೇಟಿಂಗ್‌ : 3/5


Digiqole ad

Sunil H C

Leave a Reply