ಉಡುಂಬಾ – ಚಿತ್ರ ವಿಮರ್ಶೆ – ಸಿನಿಲೋಕ

 ಉಡುಂಬಾ –  ಚಿತ್ರ ವಿಮರ್ಶೆ – ಸಿನಿಲೋಕ

ಚಿತ್ರ: ಉಡುಂಬಾ
ನಿರ್ದೇಶನ: ಶಿವರಾಜ್‌
ನಿರ್ಮಾಣ: ಹನುಮಂತರಾವ್‌, ವೆಂಕಟ ಶಿವರೆಡ್ಡಿ
ಸಂಗೀತ: ವಿನೀತ್‌ ರಾಜ್‌
ತಾರಾಗಣ: ಪವನ್‌ ಶೌರ್ಯ, ಚಂದ್ರಕಲಾ, ಶರತ್‌ ಲೋಹಿತಾಶ್ವ ಮತ್ತಿತರರು.


ಹೀರೋ ಸೆಂಟ್ರಿಕ್‌ ಸಿನಿಮಾಗಳ ಸಾಕಷ್ಟು ಬಂದಿವೆ, ಆದರೆ ಎಲ್ಲವೂ ಗಮನ ಸೆಳೆಯುವುದಿಲ್ಲ. ಈ ವಾರ ಬಿಡುಗಡೆಯಾಗಿರುವ ಉಡುಂಬಾ ಸಿನಿಮಾ ಆ ವಿಚಾರದಲ್ಲಿ ಹೊಸಬರ ಚಿತ್ರವಾದರೂ ಗಮನ ಸೆಳಯುತ್ತದೆ.

ಶಿವ[ನಾಯಕ] ಅನಾಥ ಹುಡುಗ, ತನ್ನ ಪ್ರೀತಿಯ ಹುಡುಗಿ ಮತ್ತವರ ಸ್ನೇಹಿತರ ಜತೆ ಇರುತ್ತಾನೆ. ಆದರೆ ಆತನ ಹಿನ್ನೆಲೆ ಅವನಿಗೆ ತಿಳಿದಾಗ ಆಗುವ ಬದಲಾವಣೆಯೇ ಈ ಉಡುಂಬಾ ಚಿತ್ರ.

ಉಡುಂಬಾ ಕಂಪ್ಲೀಟ್‌ ಕಮರ್ಷಿಯಲ್ ಎಂಟರ್‌ಟೇನರ್‌ ಆಗಿರುವ ಕಾರಣಕ್ಕೆ ಸಿನಿಮಾದಲ್ಲಿ ಮಾಸ್‌ ಪ್ರೇಕ್ಷಕರು ಇಷ್ಟಪಡುವಂತಹ ಫೈಟ್ಸ್‌, ಹಾಡುಗಳು, ಹಾಸ್ಯದ ದೃಶ್ಯಗಳು ಎಲ್ಲವೂ ಇದೆ. ನಿರ್ದೇಶಕರು ಸಿನಿಮಾದ ಫಸ್ಟ್‌ ಹಾಫ್‌ನ್ನು ವೇಗವಾಗಿ ತೆಗೆದುಕೊಂಡು ಹೋಗುವುದರಿಂದ ಇಂಟರ್‌ವೆಲ್‌ ಯಾವಾಗ ಬಂತು ಎಂಬುದೇ ಗೊತ್ತಾಗುವುದಿಲ್ಲ.ಆದರೆ ಸೆಕೆಂಡ್‌ ಹಾಫ್‌ ಕೊಂಚ ಎಳೆದಂತೆ ಅನಿಸುತ್ತದೆ. ಇಡೀ ಸಿನಿಮಾ ಒಂದೊಳ್ಳೆ ಕಮರ್ಷಿಯಲ್‌ ಚಿತ್ರ ನೋಡಿದಂತೆ ಭಾಸವಾಗುವುದರಿಂದ ಮಾಸ್‌ ಪ್ರೇಕ್ಷಕರಿಗೆ ಇಷ್ಟವಾಗಬಹುದು.

ನಾಯಕ ನಟ ಪವನ್‌ ಶೌರ್ಯ ತಮ್ಮ ಫೈಟ್ಸ್‌ ಮತ್ತು ಡಾನ್ಸ್‌ನಿಂದ ಗಮನ ಸೆಳೆಯುತ್ತಾರೆ. ನಟನಯಲ್ಲಿ ಇನ್ನೊಂದಿಷ್ಟು ತಯಾರಿ ಮಾಡಿಕೊಂಡರೆ ಇಂಡಸ್ಟ್ರಿಗೆ ಒಳ್ಳೆ ಹೀರೋ ಆಗಬಹುದು. ಇನ್ನು ಚಂದ್ರಕಲಾ ಮೋಹನ್‌ ಮತ್ತು ಶರತ್‌ ಲೋಹಿತಾಶ್ವ ಪಾತ್ರಗಳಲ್ಲಿ ಮಿಂದು ಎದ್ದಿದ್ದಾರೆ. ಉಳಿದಂತೆ ಇರ್ಫಾನ್‌, ನಾಯಕಿ ಚಿರಶ್ರೀ ಅಂಚನ್‌ ಎಲ್ಲರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ಒಂದಷ್ಟು ಮೈನೆಸ್‌ ಪಾಯಿಂಟ್‌ಗಳು ಸಿನಿಮಾದಲ್ಲಿದೆ, ಇಷ್ಟಾದರೂ ಸಿನಿಮಾ ಮಾಸ್‌ ಪ್ರಿಯರಿಗೆ ಪಕ್ಕಾ ಇಷ್ಟವಾಗುತ್ತದೆ.

ರೇಟಿಂಗ್ – 3/5


Digiqole ad

Sunil H C

Leave a Reply