ನನ್ನ ಪ್ರಕಾರ – ಚಿತ್ರ ವಿಮರ್ಶೆ – ಸಿನಿಲೋಕ
- By Sunil H C
- Category: Movie Reviews
- No comment
- Hits: 723
ಚಿತ್ರ : ನನ್ನ ಪ್ರಕಾರ
ನಿರ್ಮಾಣ : ಗುರುರಾಜ್ ಎಸ್
ನಿರ್ದೇಶಕ : ವಿನಯ್ ಬಾಲಾಜಿ
ಕ್ಯಾಮೆರಾ : ಮನೋಹರ್ ಜೋಶಿ
ಸಂಗೀತ : ಅರ್ಜುನ್ ರಾಮು
ತಾರಾಗಣ : ಕಿಶೋರ್, ಪ್ರಿಯಾಮಣಿ, ಮಯೂರಿ, ಪ್ರಮೋದ್ ಶೆಟ್ಟಿ, ಪ್ರಮೋದ್ ಶೆಟ್ಟಿ, ನಿರಂಜನ್ ದೇಶಪಾಂಡೆ, ಗಿರಿಜಾ ಲೋಕೇಶ್.
ಅವರ ಅವರ ಪ್ರಕಾರವೇ ಇರುವ ನನ್ನ ಪ್ರಕಾರ :
ಸಸ್ಪೆನ್ಸ್ ಥ್ರಿಲ್ಲರ್ ಜಾನರ್ನ ಸಿನಿಮಾಗಳಲ್ಲಿ ಬಹು ಮುಖ್ಯವಾದ ಅಂಶ, ಪ್ರೇಕ್ಷಕನನ್ನು ಸೀಟಿನ ತುದಿಗೆ ಕೂರಿಸಿ ಕಥೆ ಹೇಳುವುದು. ಅದನ್ನು ಮಾಡಿದರೆ ನಿರ್ದೇಶಕ ಗೆದ್ದಂತೆ. ಈ ವಾರ ಬಿಡುಗಡೆಯಾಗಿರುವ ನನ್ನ ಪ್ರಕಾರ ಸಿನಿಮಾದಲ್ಲಿ ಅದೇ ಆಗಿದೆ.
ಚೊಚ್ಚಲ ನಿರ್ದೇಶಕ ವಿನಯ್ ಬಾಲಾಜಿ ಪ್ರತಿ ದೃಶ್ಯದಲ್ಲಿಯೂ ಪ್ರೇಕ್ಷಕನನ್ನು ತನ್ನ ಕಥೆಯೊಳಗೆ ಕರೆದುಕೊಂಡು ಹೋಗಿ ಅವರ ಪ್ರಕಾರ ಅರ್ಥ ಮಾಡಿಸಿದ್ದಾರೆ. ಹಾಗಾಗಿ ಸಿನಿಮಾ ವಿಭಿನ್ನವಾಗಿ ಮತ್ತು ವಿಶಿಷ್ಟವಾಗಿ ಕಾಣುತ್ತದೆ.
ಕಾರೊಂದು ಹೊತ್ತಿ ಅರ್ಧ ಉರಿದಿರುತ್ತದೆ. ಅದರಲ್ಲಿ ಒಂದು ಮೃತ ದೇಹ ಸಿಗುತ್ತದೆ. ಇದು ಆತ್ಮಹತ್ಯೆಯೋ, ಕೊಲೆಯೋ,ಅಪಘಾತವೋ ಎಂಬುದನ್ನು ಬೇಧಿಸುವುದೇ ನನ್ನ ಪ್ರಕಾರದ ಕಥೆ. ಇದನ್ನು ಉತ್ತಮವಾಗಿ ಪ್ರೇಕ್ಷಕರಿಗೆ ಸುಲಭವಾಗಿ ಅರ್ಥವಾಗುವಂತೆ ಹೇಳುತ್ತಾ ಹೊಗಿದ್ದಾರೆ ನಿರ್ದೇಶಕರು. ಅದನ್ನು ಸಿನಿಮಾ ಮಂದಿರದಲ್ಲಿ ನೋಡಿದರೇನೇ ಚೆಂದ.
ನಿರ್ದೇಶಕರು ಇಡೀ ಸಿನಿಮಾದ ಚಿತ್ರಕಥೆಯನ್ನು ಹೆಣೆಯುವ ವಿಚಾರದಲ್ಲಿ ಬುದ್ದಿವಂತಿಕೆಯನ್ನು ತೋರಿಸಿದ್ದಾರೆ. ಸಿನಿಮಾದ ಎಷ್ಟೋ ಸನ್ನಿವೇಶಗಳನ್ನು ಹೆಣೆದಿರುವ ರೀತಿ ವಿನಯ್ ಅವರಲ್ಲಿರುವ ವೃತ್ತಿಪರತೆ ಎದ್ದು ಕಾಣುತ್ತದೆ. ಇನ್ನು ಅವರು ಕಲಾವಿದರ ಆಯ್ಕೆಯಲ್ಲಿಯೂ ಗೆದ್ದಿದ್ದಾರೆ. ನಗಿಸಲಿಕ್ಕೆಂದೇ ಮಾಡಿದ ಕೆಲವು ದೃಶ್ಯಗಳು ವರ್ಕ್ ಔಟ್ ಆಗಿಲ್ಲ.
ಸಾವಿನ ರಹಸ್ಯ ಭೇದಿಸಲು ಹೊರಡುವ ತನಿಖಾಧಿಕಾರಿಯ ಪಾತ್ರದಲ್ಲಿ ಕಿಶೋರ್ ಉತ್ತಮವಾಗಿ ನಟಿಸಿದ್ದಾರೆ. ಅವರ ನೋಟ ಎಷ್ಟು ತೀವ್ರವಾಗಿದೆ ಎಂದರೆ ಅದರಲ್ಲಿಯೇ ಅವರೆಷ್ಟು ಪರ್ಫೆಕ್ಟ್ ನಟ ಎಂಬುದು ಗೊತ್ತಾಗುತ್ತದೆ. ಇವರಂತೆಯೇ ಪ್ರಿಯಾಮಣಿ, ಪ್ರಮೋದ್ ಶೆಟ್ಟಿ, ಮಯೂರಿ, ನಿರಂಜನ್, ಗಿರಿಜಾ ಲೋಕೇಶ್, ಅರ್ಜುನ್ ಯೋಗಿ ಹೀಗೆ ಎಲ್ಲರೂ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಇನ್ನು ಮನೋಹರ್ ಜೋಷಿಯವರ ಸಿನಿಮಾಟೋಗ್ರಫಿ ಕೂಡಾ ಮೆಚ್ಚುವಂತಹದ್ದು.
ಒಟ್ಟಿನಲ್ಲಿ ನನ್ನ ಪ್ರಕಾರ ಒಂದೊಳ್ಳೆ ಎಕ್ಸ್ಪಿರಿಯನ್ಸ್ ಎನ್ನಬಹುದು.
ರೇಟಿಂಗ್ : 3.5/5