ವಿಷ್ಣು ಸರ್ಕಲ್ – ಚಿತ್ರ ವಿಮರ್ಶೆ

 ವಿಷ್ಣು ಸರ್ಕಲ್ – ಚಿತ್ರ ವಿಮರ್ಶೆ

ನಿರ್ದೇಶಕ: ಲಕ್ಷ್ಮೀ ದಿನೇಶ್‌


ನಿರ್ಮಾಣ: ಆರ್‌ ಬಿ

ಸಂಗೀತ: ಶ್ರೀ ವತ್ಸತಾರಾಗಣ: ಗುರುರಾಜ ಜಗ್ಗೇಶ್‌, ದಿವ್ಯಾಗೌಡ, ದತ್ತಣ್ಣ, ಅರುಣಾ ಬಾಲರಾಜ್‌, ಸಂಗೀತಾ

ಸಾಹಸಸಿಂಹ ವಿಷ್ಣು ವರ್ಧನ್‌ ಅವರ ಹೆಸರನ್ನು ಇಟ್ಟುಕೊಂಡು ಮಾಡಿರುವ ಸಾಕಷ್ಟು ಸಿನಿಮಾಗಳೂ ದೊಡ್ಡ ಮಟ್ಟದಲ್ಲಿ ಗೆದ್ದಿವೆ. ಆ ಹೆಸರಿಗೆ ಒಂದು ಸೆಳೆತ ಇದೆ. ಈ ವಾರ ಬಿಡುಗಡೆಯಾಗಿರುವ ವಿಷ್ಣು ಸರ್ಕಲ್‌ ಕೂಡಾ ತನ್ನ ಟೈಟಲ್‌ನಿಂದಲೇ ಗಮನ ಸೆಳೆದಿತ್ತು. ಜತೆಗೆ ಜಗ್ಗೇಶ್‌ ಅವರ ಹಿರಿಯ ಪುತ್ರ ಗುರು ನಟಿಸಿದ್ದಾರೆ ಎಂಬ ಕಾರಣಕ್ಕೂ ಅದು ಸದ್ದು ಮಾಡಿತ್ತು.

ನಾಯಕ ನಟ ವಿಷ್ಣು [ಗುರು ರಾಜ] ವಿಷ್ಣುವರ್ಧನ್‌ ಅವರ ಅಪ್ಪಟ ಅಭಿಮಾನಿ ಜತೆಗೆ ಸಿನಿಮಾದಲ್ಲಿ ಬರುವ ಎಲ್ಲ ನಾಯಕಿಯರಿಗೂ ಇತ ಲವರ್‌. ಹೌದು ವಿಷ್ಣುಗೆ ಆಗಾಗ ಲವ್‌ ಫೆಲ್ಯೂರ್‌ ಆಗುತ್ತಿರುತ್ತದೆ ಆದಾಗಲೆಲ್ಲ ಆತ ಕುಡಿತಕ್ಕೆ ದಾಸನಾಗಿ ಮನೆಯವರಿಂದ ಬಯ್ಯಿಸಿಕೊಳ್ಳುತ್ತಿರುತ್ತಾನೆ. ಆಮೇಲೆ ಮತ್ತೊಬ್ಬ ನಾಯಕಿ ಸಿಕ್ಕಾಗ ಆಕೆಯ ಜತೆ ಪ್ರೇಮದಲ್ಲಿ ಬೀಳುತ್ತಾನೆ. ಇಂತವನ ಬದುಕಿನ ಚಿತ್ತಾರವೇ ಈ ವಿಷ್ಣು ಸರ್ಕಲ್‌. ಈ ಸಿನಿಮಾದ ಕಥೆ ನಡೆಯುವುದು ಮತ್ತು ನಾಯಕ ಇರುವ ಜಾಗ ವಿಷ್ಣು ಸರ್ಕಲ್‌ ಆಗಿರತ್ತದೆ. ಹಾಗಾಗಿ ಸಿನಿಮಾಗೆ ವಿಷ್ಣು ಸರ್ಕಲ್‌ ಎಂಬ ಟೈಟಲ್‌ ಬಂದಿದೆ.

ಇನ್ನು ಲಕ್ಷ್ಮೀ ದಿನೇಶ್‌ ಒಳ್ಳೆ ಕಥೆ ಮಾಡಿಕೊಂಡಿದ್ದು, ಇನ್ನಷ್ಟು ಪರಿಣಾಮಕಾರಿಯಾಗಿ ಚಿತ್ರೀಕರಿಸಬಹುದಿತ್ತು. ಜತೆಗೆ ಕಲಾವಿದರು ಸಹ ತಮ್ಮ ಶ್ರಮವನ್ನು ಇನ್ನಷ್ಟು ಹಾಕಬಹುದಿತ್ತು ಎನ್ನುವ ಭಾವನೆ ಬರುತ್ತದೆ. ಸಂಗೀತದಲ್ಲಿ ಒಂದು ಹಾಡು ಕೇಳಬಹುದು. ಉಳಿದಂತೆ ಸಿನಿಮಾಟೋಗ್ರಫಿ ಚೆನ್ನಾಗಿದೆ.

ನಾಯಕ ಗುರುರಾಜ ತಮ್ಮ ಪಾತ್ರವನ್ನು ಅವಗಾಹನೆ ಮಾಡಿಕೊಂಡು ನಟಿಸಿದ್ದಾರೆ. ನಾಯಕಿಯರು ಸಹ ಹಾಗೆ ಬಂದು ಹೀಗೆ ಹೋಗುತ್ತಾರೆ. ಈಗಿನ ಯುವಕರು ಕಥೆಯನ್ನು ಪೇಲವವಾಗಿ ಮಾಡಿಕೊಂಡರು ಚಿತ್ರಕಥೆಯನ್ನು ರೋಚಕತೆಯೊಂದಿಗೆ ಮಾಡಿರುತ್ತಾರೆ. ಆದರೆ ನಿರ್ದೇಶಕರು ಇಲ್ಲಿ ಎರಡನ್ನೂ ತಕ್ಕ ಮಟ್ಟಿಗೆ ಬ್ಯಾಲೆನ್ಸ್ ಮಾಡಿದ್ದಾರೆ ಎನ್ನುವುದು ಖುಷಿ ಕೊಡೋ ವಿಚಾರ.

ಒಂದಷ್ಟು ಹೊಸ ಪ್ರಯೋಗಗಳನ್ನು ಒಪ್ಪಿಕೊಳ್ಳುವ ನಿಟ್ಟಿನಲ್ಲಿ ವಿಷ್ಣು ಸರ್ಕಲ್‌ ಹೊಸ ಕಾನ್ಸೆಪ್ಟ್‌ನ್ನು ಜನರಿಗೆ ಹೇಳಲು ಹೊರಟಿರುವ ಕಾರಣಕ್ಕಾದರೂ ಒಮ್ಮೆ ಸಿನಿಮಾವನ್ನು ನೋಡಬಹುದು.

ರೇಟಿಂಗ್ – 3/5


Digiqole ad

Sunil H C

Leave a Reply