ಯೂತ್‌ಫುಲ್‌ & ಕಲರ್‌ಫುಲ್‌ ‘ಕಿಸ್‌’ – ಚಿತ್ರ ವಿಮರ್ಶೆ

 ಯೂತ್‌ಫುಲ್‌ & ಕಲರ್‌ಫುಲ್‌ ‘ಕಿಸ್‌’ – ಚಿತ್ರ ವಿಮರ್ಶೆ

ಚಿತ್ರ : ಕಿಸ್‌


ನಿರ್ದೇಶನ, ನಿರ್ಮಾಣ: ಎ.ಪಿ. ಅರ್ಜುನ್‌.
ತಾರಾಗಣ: ವಿರಾಟ್‌, ಶ್ರೀಲೀಲಾ, ಚಿಕ್ಕಣ್ಣ ಇತರರು.
ಛಾಯಾಗ್ರಹಣ: ಎ.ಜೆ. ಶೆಟ್ಟಿ
ಸಂಗೀತ: ಹರಿಕೃಷ್ಣ.

ಹೊಸ ನಾಯಕ ನಾಯಕಿಯರಿಗೆ ಕಲರ್‌ಫುಲ್‌ ಸಿನಿಮಾ ಮಾಡುವ ಮೂಲಕ ಹೆಚ್ಚಿನ ಖ್ಯಾತಿ ಗಳಿಸಿರುವ ಎ ಪಿ ಅರ್ಜುನ್‌ ಕಿಸ್‌ ಮೂಲಕ ಮತ್ತೊಂದು ಕ್ಯೂಟ್‌ ಜೋಡಿಯನ್ನು ಸ್ಯಾಂಡಲ್‌ವುಡ್‌ಗೆ ಪರಿಚಯಿಸಿದ್ದಾರೆ.

ಹೆಸರೇ ಹೇಳುವಂತೆ ಇದು ಪಕ್ಕಾ ಯೂತ್‌ಫುಲ್‌ ಸಿನಿಮಾ. ಜತೆಗೆ ಫ್ಯಾಮಿಲಿಯೂ ನೋಡಬಹುದು. ಇಡೀ ಸಿನಿಮಾದಲ್ಲಿ ಯಾವ ದೃಶ್ಯ ನೋಡಿದರೂ ಎಲ್ಲವೂ ಕಲರ್‌ಫುಲ್‌, ಕಲರ್‌ಫುಲ್‌. ಜತೆಗೆ ಈಗಿನ ಟ್ರೆಂಡ್‌ಗೆ ತಕ್ಕಂತೆ ಇರುವ ಕ್ಯೂಟ್‌ ಲವ್‌ ಸ್ಟೋರಿಯನ್ನು ಹೇಳಿದ್ದಾರೆ.ಒಬ್ಬ ರಿಚ್‌ ಹುಡುಗ [ ವಿರಾಟ್‌] ತಾನು ಅಂದುಕೊಂಡಿದ್ದನ್ನು ಮಾಡಿಯೇ ತೀರುತ್ತೇನೆ ಎನ್ನುವ ಹೊತ್ತಿನಲ್ಲಿ ಹಗಲುಗನಸು ಕಾಣೋ ನಾಯಕಿ [ ಶ್ರೀಲೀಲಾ] ಯೊಂದಿಗೆ ಅನಿರೀಕ್ಷಿತ ಭೇಟಿ, ಜಗಳ ನಂತರ ಲವ್‌ನಲ್ಲಿ ಬೀಳುತ್ತಾನೆ. ಅದು ಹೇಗೆ ಮತ್ತು ಈ ಪ್ರೀತಿಯಲ್ಲಿ ಬಿದ್ದ ಮೇಲೆ ಏನಾಗುತ್ತದೆ ಎಂಬುದೇ ಸಿನಿಮಾ.

ಸಿನಿಮಾದಲ್ಲಿರುವ ಎಲ್ಲ ಹಾಡುಗಳು ಮತ್ತು ದೃಶ್ಯಗಳು ಸಿಕ್ಕಾಪಟ್ಟೆ ಕಲರ್ಫುಲ್ ಆಗಿ ಬಂದಿದ್ದು, ನೋಡಿದ ತಕ್ಷಣ ಇಷ್ಟವಾಗುತ್ತವೆ. ಇದಕ್ಕೆ ಕಾರಣ ಎ ಜೆ ಶೆಟ್ಟಿ ಎಂಬ ಹೊಸ ಸಿನಿಮಾಟೋಗ್ರಫರ್‌. ಹರಿಕೃಷ್ಣ ಸಂಗೀತದಲ್ಲಿ ಮೂಡಿ ಬಂದಿರುವ ಎಲ್ಲ ಹಾಡುಗಳು ಈಗಾಗಲೇ ಹಿಟ್‌ ಆಗಿವೆ.

ಇಂದಿನ ಯುವಕ ಯುವತಿಯರ ಲೈಫ್‌ಸ್ಟೈಲ್‌, ಅವರ ಬದುಕಿನ ಉದ್ದೇಶ ಎಲ್ಲವೂ ಚಿತ್ರದಲ್ಲಿರುವುದರಿಂದ ಕಾಲೇಜು ಸ್ಟೂಡೆಂಟ್ಸ್‌ ಗೆ ಸಿನಿಮಾ ಖಂಡಿತಾ ಇಷ್ಟವಾಗುತ್ತದೆ. ಸಿನಿಮಾದ ಅವಧಿ ಕೊಂಚ ಹೆಚ್ಚಾಯಿತು ಎಂದೆನಿಸುತ್ತದೆ. ಸುಮಾರು 20ಕ್ಕೂ ಹೆಚ್ಚು ನಿಮಿಷದ ಕತ್ತರಿ ಹಾಕಿದ್ದರೆ, ಚಿತ್ರಕ್ಕೆ ಮತ್ತಷ್ಟು ವೇಗ ಸಿಗುತ್ತಿತ್ತು. ಚಿತ್ರದಲ್ಲಿ ಬರುವ ಬಹುತೇಕ ಸಂಭಾಷಣೆ ಹಿಡಿಸುತ್ತವೆ ಅದರಲ್ಲೂ ಕ್ಲೈಮ್ಯಾಕ್ಸ್ ನಲ್ಲಿ ಅರ್ಜುನ್ ಡೈಲಾಗ್ಸ್ ನಲ್ಲಿ ಸ್ಕೋರ್ ಮಾಡಿದ್ದಾರೆ.

ಇನ್ನು ಶ್ರೀಲೀಲಾ ಮತ್ತು ವಿರಾಟ್‌ ಕನ್ನಡ ಇಂಡಸ್ಟ್ರಿಗೆ ಕ್ಯೂಟ್‌ ನಾಯಕ ಮತ್ತು ನಾಯಕಿ.ಚಿಕ್ಕಣ್ಣ ಚಿತ್ರಕ್ಕೆ ಬೇಕಾದ ಕಾಮಿಡಿ ಟಚ್ ಕೊಟ್ಟಿದ್ದಾರೆ ಮತ್ತು ಪ್ರೇಕ್ಷಕರನ್ನು ನಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನುಳಿದಂತೆ ನಟಿಸಿರುವ ಎಲ್ಲ ಕಲಾವಿದರು ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.

ವಿಕೇಂಡ್‌ನಲ್ಲಿ ರಿಲ್ಯಾಕ್ಸ್‌ ಆಗಲು ‘ಕಿಸ್‌’ ನೋಡಬಹುದು.

ರೇಟಿಂಗ್ – 3.5/5


Digiqole ad

Sunil H C

Leave a Reply