ಹಾರರ್‌ ಕಥೆಯಲ್ಲಿ ‘ನವರಾತ್ರಿ’ ವೈಭವ – ಚಿತ್ರ ವಿಮರ್ಶೆ

 ಹಾರರ್‌ ಕಥೆಯಲ್ಲಿ ‘ನವರಾತ್ರಿ’ ವೈಭವ – ಚಿತ್ರ ವಿಮರ್ಶೆ

ಚಿತ್ರ: ನವರಾತ್ರಿ


ನಿರ್ದೇಶಕ: ಲಕ್ಷ್ಮೀ ಕಾಂತ ಚೆನ್ನ

ನಿರ್ಮಾಣ: ಸಾಮಾನ್ಯ ರೆಡ್ಡಿ ವಂಶಿ

ತಾರಾಗಣ: ತ್ರಿವಿಕ್ರಮ್‌, ಕಿಚ್ಚ ವೆಂಕಟ್‌, ಹೃದಯ ಅವಂತಿ, ಪ್ರಣಯ್‌ ರಾಯ್‌.

ಇತ್ತೀಚಿನ ದಿನಗಳಲ್ಲಿ ಹೊಸಬರಿಗೆ ಹಾರರ್‌ ಮತ್ತು ಥ್ರಿಲ್ಲರ್‌ ಸಿನಿಮಾಗಳು ಉತ್ತಮ ಆಯ್ಕೆಗಳಾಗುತ್ತಿವೆ. ಅಂತಹವುಗಳ ಸಾಲಿಗೆ ಈ ನವರಾತ್ರಿ ಸಹ ಸೇರುತ್ತದೆ.

ದೆವ್ವ ಇದೆ ಎನ್ನಲಾಗಿರುವ ನಿರ್ಮಾಣ ಹಂತದಲ್ಲಿರುವ ಕಟ್ಟಡವನ್ನು ಓನರ್‌ ಯಾವ ಬೆಲೆಗಾದರೂ ಸರಿ ಮಾರಾಟ ಮಾಡಬೇಕು ಎನ್ನುವ ಹೊತ್ತಿನಲ್ಲಿ ನಡೆಯುವ ಟ್ವಿಸ್ಟ್‌ ಮತ್ತು ಟರ್ನ್‌ಗಳೇ ಈ ನವರಾತ್ರಿ ಸಿನಿಮಾದ ಕಥೆಯಾಗಿದೆ. ಆದರೆ ಓನರ್‌ ಆ ಮನೆಯನ್ನು ಮಾರಾಟ ಮಾಡುತ್ತಾರೋ ಇಲ್ಲವೋ ಎಂಬುದನ್ನು ಸಿನಿಮಾ ಮಂದಿರದಲ್ಲಿಯೇ ನೋಡಬೇಕು.

ಈ ರೀತಿಯ ಹಾರರ್‌ ಸಿನಿಮಾಗಳು ಇತ್ತೀಚೆಗೆ ಯಥೇಚ್ಛವಾಗಿ ಬರುತ್ತಿವೆ. ಆದರೆ ನವರಾತ್ರಿ ಗಮನ ಸೆಳೆಯುವುದು ಈ ಕಥೆಗೆ ದೇವರನ್ನು ಲಿಂಕ್‌ ಮಾಡಿರುವುದಕ್ಕೆ. ಎರಡು ಗಂಟೆಗಳ ಅವಧಿಯಲ್ಲಿ ಸಿನಿಮಾ ಎಷ್ಟು ಹೆದರಿಸುತ್ತದೆ ಎಂದರೆ ಹಾರರ್‌ ಸಿನಿಮಾ ನೋಡದವರು ಖಂಡಿತಾ ಬೆಚ್ಚಿ ಬೀಳುತ್ತಾರೆ.

ಹೆದರಿಸುವ ಜತೆ ಜತೆಗೆ ನಗಿಸುತ್ತಾ ಹೋಗುವುದಿರಂದಿ ನವರಾತ್ರಿ ಒಂದು ರೀತಿಯಲ್ಲಿ ಹಾರರ್‌ ಕಾಮಿಡಿ ಎನ್ನಬಹುದು. ಅಡಲ್ಟ್‌ ಕಾಮಿಡಿಯನ್ನು ಸ್ವಲ್ಪ ಕಡಿಮೆ ಮಾಡಬಹುದಿತ್ತು. ಚಿತ್ರದ ಮೊದಲಾರ್ಧದ ಕೆಲವು ಸೀನ್‌ಗಳು ಬಾಲಿಶ ಎನಿಸುತ್ತವೆ, ಇಂಟರ್ವಲ್ ಟ್ವಿಸ್ಟ್ ಚೆನ್ನಾಗಿದೆ.

ನಾಯಕ ನಟ ತ್ರಿವಿಕ್ರಮ್‌ ತಮ್ಮ ಮೊದಲ ಬಿಗ್‌ಸ್ಕ್ರೀನ್‌ ಅಪಿಯರೆನ್ಸ್‌ನಲ್ಲಿ ಶ್ರಮ ಹಾಕಿ ನಟಿಸಿದ್ದಾರೆ. ಮತ್ತು ಅವರು ಇನ್ನೂ ಉತ್ತಮ ಕಥೆಗಳನ್ನು ಆಯ್ಕೆ ಮಾಡಿಕೊಂಡರೆ ಒಳ್ಳೊಳ್ಳೆ ಸಿನಿಮಾ ಮಾಡಬಹುದು. ಇನ್ನುಳಿದಂತೆ ಕಿಚ್ಚ ವೆಂಕಟ್‌,ನಾಯಕಿ ಹೃದಯ ಸೇರಿದಂತೆ ಎಲ್ಲರೂ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.

ನವರಾತ್ರಿಯಲ್ಲಿ ದೆವ್ವ, ದೇವರು, ಕಾಮಿಡಿ ಎಲ್ಲವೂ ಇರುವುದರಿಂದ ಹಾರರ್‌ ಸಿನಿಮಾ ಪ್ರಿಯರಿಗೆ ಇದು ಇಷ್ಟವಾಗುತ್ತದೆ. ಒಟ್ಟಿನಲ್ಲಿ ನವರಾತ್ರಿ ಹಬ್ಬದ ಟೈಮ್‌ನಲ್ಲಿ ಬಿಡುಗಡೆಯಾಗಿರುವ ನವರಾತ್ರಿ ಸಿನಿಮಾ ಉತ್ತಮ ಪ್ರಯತ್ನ ಎನ್ನಬಹುದು.

ರೇಟಿಂಗ್ – 3/5


Digiqole ad

Sunil H C

Leave a Reply