“ಭರಾಟೆ” ಆಕ್ಷ್ಯನ್ ಟ್ರೈಲರ್ ಗೆ ಸಿಕ್ಕಿತು ‘ಭರ್ಜರಿ’ ರೆಸ್ಪಾನ್ಸ್
- By Sunil H C
- Category: News
- No comment
- Hits: 514
ಭರ್ಜರಿ ಚೇತನ್ ಮತ್ತು ಶ್ರೀಮುರುಳಿ ಕಾಂಬಿನೇಶನ್ನ ‘ಭರಾಟೆ’ ಸಿನಿಮಾ ಬಿಡುಗಡೆಗೂ ಮುನ್ನ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇಂದು ಬೆಳಗ್ಗೆ ಈ ಚಿತ್ರದ ಆ್ಯಕ್ಷನ್ ಟ್ರೇಲರ್ ಬಿಡುಗಡೆಯಾಗಿದ್ದು, ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಮಂದಿ ಅದನ್ನು ನೋಡಿದ್ದಾರೆ.
ಸಾಯಿಕುಮಾರ್, ರವಿಶಂಕರ್, ಅಯ್ಯಪ್ಪ ಶರ್ಮಾ ಮುಖ್ಯ ಖಳರಾಗಿ ನಟಿಸಿದ್ದು, ಈ ಟ್ರೇಲರ್ನಲ್ಲಿ ಅವರು ಸಹ ಮುರುಳಿ ಜತೆ ಅಬ್ಬರಿಸಿದ್ದಾರೆ.
ಭರ್ಜರಿ, ಬಹದ್ದೂರ್ ಮೂಲಕ ಸ್ಟಾರ್ ನಿರ್ದೇಶಕರಾಗಿರುವ ಚೇತನ್ಕುಮಾರ್ ಭರಾಟೆ ಮೂಲಕ ಹ್ಯಾಟ್ರಿಕ್ ನಿರ್ದೇಶಕರಾಗಲಿದ್ದಾರೆ. ಈಗ ಬಿಡುಗಡೆಯಾಗಿರುವ ಟ್ರೇಲರ್ ತುಂಬಾ ಭಾರಿ ಆ್ಯಕ್ಷನ್ ಮತ್ತು ಖಡಕ್ ಡೈಲಾಗ್ಗಳ ಸುರಿಮಳೆಯೇ ಇದೆ.
ಇನ್ನೂ ವಿಶೇಷ ಎಂದರೆ ಈ ಟ್ರೇಲರ್ ಬಿಡುಗಡೆ ಕಾರ್ಯಕ್ರಮವನ್ನು ಕನ್ನಡ ಚಿತ್ರರಂಗದ ನಾಯಕ ನಟರಾದ ದುನಿಯಾ ವಿಜಯ್, ಧನಂಜಯ, ವಿಕ್ಕಿ, ನೀನಾಸಂ ಸತೀಶ್, ಧನ್ವೀರ್, ಯುವರಾಜ್ಕುಮಾರ್, ನಿರ್ದೇಶಕರಾದ ಹರಿಸಂತೋಷ್, ಪವನ್ ಒಡೆಯರ್, ಸುನಿ, ಸತ್ಯಪ್ರಕಾಶ್, ನಿರ್ಮಾಪಕರಾದ ಕೆ ಪಿ ಶ್ರೀಕಾಂತ್, ಉದಯ್ ಮೆಹ್ತಾ, ನಾಗೇಶ್ ಕುಮಾರ್ ಸೇರಿದಂತೆ ಸಾಕಷ್ಟು ಮಂದಿ ಬಿಡುಗಡೆ ಮಾಡಿದರು.
ಈ ಕಾರ್ಯಕ್ರಮಕ್ಕೆ ಸಾಯಿ ಸಹೋದರರು ಸಹ ಬಂದಿದ್ದರು. ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಸೂಪರ್ ಹಿಟ್ ಆಗಿದ್ದು, ಈ ಟ್ರೇಲರ್ ಕೂಡಾ ಹಿಟ್ ಲೀಸ್ಟ್ ಸೇರಿದ್ದು, ಚಿತ್ರಕ್ಕಾಗಿ ಅಭಿಮಾನಿಗಳು ಕಾಯುವಂತಾಗಿದೆ.