ಚಿತ್ರ: ಆ ದೃಶ್ಯ
ನಿರ್ದೇಶನ: ಶಿವಗಣೇಶ್‌
ನಿರ್ಮಾಪಕ: ಕೆ. ಮಂಜು
ಸಂಗೀತ: ಗೌತಮ್‌ ಶ್ರೀವಾತ್ಸವ್‌
ತಾರಾಗಣ: ರವಿಚಂದ್ರನ್‌, ಸಾಗರ್‌, ಚೈತ್ರಾ, ಅಜಿತ್‌, ಅಚ್ಯುತ್‌ಕುಮಾರ್‌ ಮತ್ತಿತರರು.

ಅದ್ಧೂರಿ ಸೆಟ್ಗಳು,ಕಿವಿಗೆ ಇಂಪು ನೀಡುವ ಗೀತೆಗಳು,ಹೃದಯಾಕಾರದ ಬಲೂನುಗಳು,ಬಣ್ಣಗಳು ,ಹಣ್ಣುಗಳು , ಹೆಣ್ಣುಗಳು ಮದ್ಯದಲ್ಲಿ ಸ್ಪುರದ್ರೂಪಿ ನಾಯಕ ಸುಂದರವಾದ ನಾಯಕಿ ಜೊತೆ ಕೂಡಿ ಹಾಡುತ್ತಾ ಹೆಜ್ಜೆಯಾಕುತ್ತಿದ್ದರೆ ಅದನ್ನು ರವಿಚಂದ್ರನ್ ಸಿನಿಮಾ ಎನ್ನುತ್ತೇವೆ..ಈ ಸೂತ್ರವನ್ನು ಮುಲಾಜಿಲ್ಲದೇ ಮುರಿದಿದ್ದೇ ಕೆಲ ವರ್ಷಗಳ ಹಿಂದೆ ತೆರೆಕಂಡು ಯಶಸ್ವಿಯಾದ “ದೃಶ್ಯ” ಸಿನಿಮಾ.ಮಧ್ಯಮ ವರ್ಗದ ಕುಟುಂಬದ ಹೆಣ್ಣುಮಗಳು ಶ್ರೀಮಂತ ಯುವಕನಿಂದ ತೊಂದರೆಗೊಳಗಾದಾಗ ಅನುಭವಿಸುವ ನೋವುಗಳು ಮತ್ತು ಅದಕ್ಕೆ ತಕ್ಕಂತೆ ಪರಿಹಾರಗಳನ್ನು ಕಂಡುಕೊಳ್ಳುವ ತಂದೆಯಾಗಿ ರವಿಚಂದ್ರನ್ ಮನೋಜ್ಞ ಅಭಿನಯ ನೀಡಿದ್ದರು. ಆ ಪಾತ್ರ ಇನ್ನೂ ಕಣ್ಣಿಗೆ ಕಟ್ಟಿದಂತಿರುವಾಗಲೇ ಆ ದೃಶ್ಯ ಎಂಬ ಹೆಸರಿನಲ್ಲಿ ರವಿಚಂದ್ರನ್‌ ಮತ್ತೊಮ್ಮೆ ತೆರೆ ಮೇಲೆ ಬಂದಿದ್ದಾರೆ. “ಆ ದೃಶ್ಯ” ಹಿಂದಿನ ‘ದೃಶ್ಯ’ಕ್ಕೂ ಸಂಬಂಧವಿಲ್ಲ ,ಹೆಸರಿಗೆ ” ಆ ” ಸೇರಿಸಿದ್ದಾರಷ್ಟೇ . ಇಲ್ಲಿ ರವಿಚಂದ್ರನ್ ಕೊಲೆ ಕೇಸನ್ನು ಭೇಧಿಸುವ ಖಡಕ್ ಪೋಲಿಸ್ ಅಧಿಕಾರಿಯ ಪಾತ್ರ ನಿರ್ವಹಿಸಿದ್ದಾರೆ , ಖಾಕಿ ಧರಿಸದೇ ಮಫ್ತಿಯಲ್ಲೇ ಮಿಂಚುವ ತನಿಖಾಧಿಕಾರಿಯಾಗಿದ್ದಾರೆ.

ಇದು ತಮಿಳಿನ ದೃವಂಗಳ್ ಪದಿನಾರು ಎಂಬ ಸಿನಿಮಾದ ಪಡಿಯಚ್ಚು , ನಿರ್ದೇಶಕ ಶಿವ ಗಣೇಶ್ ಮೂಲ ಸಿನಿಮಾಗೆ ದಕ್ಕೆಯಾಗದಂತೆ ನಿರ್ದೇಶಿಸಿ ನಿಷ್ಟೆ ತೋರಿದ್ದಾರೆ ‘. ಇಲ್ಲಿ ಕಥೆ, ಚಿತ್ರಕಥೆ ರೋಚಕ ದೃಶ್ಯವಾಗಿದೆ , ಹಿನ್ನೆಲೆ ಸಂಗೀತ ಪಾತ್ರದಾರಿಗಳು ಕೂಡಾ ದೃಶ್ಯವಾಗಿದ್ದಾರೆ. ಆದರೆ ಇನ್ನೊಂದಿಷ್ಟು ಮನರಂಜನೆಯ ಅವಶ್ಯಕತೆ ಇತ್ತು ಎನ್ನುವ ಭಾವನೆ ಅಲ್ಲಲ್ಲಿ ಮೂಡುತ್ತದೆ. ಸಿನಿಮಾದ ಕೊನೆಯಲ್ಲಿ ” ರಾಮಾಯಣವನ್ನು ರಾವಣನ ದೃಷ್ಟಿಯಲ್ಲಿ ನೋಡಿದರೆ ಹೇಗೆ ” ಎಂಬ ಸಂಭಾಷಣೆಯಿದೆ,ನಿಜವಾಗಿಯೂ ಈ ಮಾತು ಈ ಸಿನಿಮಾಗೆ ಅರ್ಥಗರ್ಭಿತವಾಗಿದೆ.

ಸೈಕೋ ಕಿಲ್ಲರ್‌ ಒಬ್ಬನನ್ನು ಬೆನ್ನತ್ತುತ್ತಿದ್ದೇವೆ ಎಂದು ಪ್ರೇಕ್ಷಕರಿಗೆ ಅಲ್ಲಲ್ಲಿ ಕನ್‌ಫ್ಯೂಸ್‌ ಮಾಡಿಸಿ ಟ್ವಿಸ್ಟ್‌ಗಳನ್ನು ನೀಡಲಾಗಿದೆ.ಯಶ್‌ ಶೆಟ್ಟಿ, ಸಾಗರ್‌, ಅರ್ಜುನ್‌, ಅಚ್ಯುತ್, ಸೇರಿದಂತೆ ಎಲ್ಲ ಕಲಾವಿದರು ಸಿನಿಮಾದ ಕಥೆಗೆ ತಕ್ಕಂತೆ ಸೂಟ್‌ ಆಗಿದ್ದಾರೆ.

ಯಾವುದೇ ವಲ್ಗಾರಿಟಿಯಿಲ್ಲದ ಕಾರಣ ಇದೊಂದು ಫ್ಯಾಮಿಲಿ ಸಿನಿಮಾ ಎನ್ನಬಹುದು ಜತೆಗೆ ಸಸ್ಪೆನ್ಸ್‌ ಥ್ರಿಲ್ಲರ್‌ ಮಾದರಿಯ ಸಿನಿಮಾಗಳನ್ನು ಇಷ್ಟಪಡುವವರು ಖಂಡಿತಾ ಮಿಸ್‌ ಮಾಡಬಾರದು.

ರೇಟಿಂಗ್‌: 3.5/5.


Leave a Reply