ಹಾರರ್‌ ಮೂಲಕ ಹಾಸ್ಯದ ಹೊನಲು – ಮನೆ ಮಾರಾಟಕ್ಕಿದೆ – ಚಿತ್ರ ವಿಮರ್ಶೆ

 ಹಾರರ್‌ ಮೂಲಕ ಹಾಸ್ಯದ ಹೊನಲು – ಮನೆ ಮಾರಾಟಕ್ಕಿದೆ – ಚಿತ್ರ ವಿಮರ್ಶೆ


ಚಿತ್ರ: ಮನೆ ಮಾರಾಟ್ಟಕ್ಕಿದೆ


ನಿರ್ದೇಶಕ: ಮಂಜು ಸ್ವರಾಜ್‌

ನಿರ್ಮಾಣ: ಎಸ್‌ ವಿ ಬಾಬು

ಸಂಗೀತ:  ಅಭಿಮಾನ್‌ ರಾಯ್‌ 

ತಾರಾಗಣ: ಚಿಕ್ಕಣ್ಣ, ಕುರಿ ಪ್ರತಾಪ್‌, ರವಿಶಂಕರ್‌ ಗೌಡ, ಶ್ರುತಿ ಹರಿಹರನ್‌, ಶಿವರಾಮ್‌ ಮತ್ತಿತರರು.

ಹಾರರ್‌ ಸಿನಿಮಾಗಳಲ್ಲಿ ಭಯ ಪಡಿಸುವ ಜತೆಯಲ್ಲಿ ಹಾಸ್ಯವನ್ನು ಬೆರೆಸಿದರೆ ಸಿನಿಮಾ ಎಲ್ಲರಿಗೂ ಇಷ್ಟವಾಗುತ್ತದೆ. ಅದನ್ನು ಅರಿತಿರುವ ನಿರ್ದೇಶಕರು ಇತ್ತೀಚೆಗೆ ಈ ಪ್ರಯತ್ನವನ್ನು ಮಾಡುತ್ತಿದ್ದಾರೆ. ಈ ಸಾಲಿಗೆ ಹೊಸ ಸೇರ್ಪಡೆ ಮನೆ ಮರಾಟ್ಟಕ್ಕಿದೆ. 

ಸಾಮಾನ್ಯವಾಗಿ ಹಾರರ್‌ ಸಿನಿಮಾಗಳಲ್ಲಿ ಲಾಜಿಕ್‌ ಇರುವುದಿಲ್ಲ. ಈ ಚಿತ್ರದಲ್ಲಿಯೂ ಅಷ್ಟೇ, ನೀವು ಯಾವುದೇ ಲಾಜಿಕ್‌ ಹುಡುಕುವಂತಿಲ್ಲ, ಆದರೆ ಭರಪೂರ ಮನರಂಜನೆಯನ್ನು ಮಾತ್ರ ನಿರೀಕ್ಷೆ ಮಾಡಬಹುದು. 

ರಾಘವ, ರಾಜ, ರಾಮ, ರಘುಪತಿ ಹೀಗೆ ನಾಲ್ವರ ಕಥಾನಕವೇ ಈ ಚಿತ್ರ. ಇದರಲ್ಲಿ ಮೂರು ಜನಕ್ಕೆ ಹಣದ ಅವಶ್ಯಕತೆ ಇರುತ್ತದೆ. ಅದಕ್ಕೆ ಒಂದು ದೆವ್ವದ ಮನೆಯಲ್ಲಿವಾಸ ಮಾಡಿದ್ರೆ ಹಣ ಸಿಗುತ್ತದೆ ಎನ್ನುವ ಆಫರ್‌ ಅವರಿಗೆ ಸಿಗುತ್ತದೆ. ಅದರಂತೆ ಅವರೆಲ್ಲರೂ ಆ ಮನೆಗೆ ಎಂಟ್ರಿ ಕೊಡುತ್ತಾರೆ. ಆಮೇಲಿನದ್ದು ಪ್ರೇಕ್ಷಕರಿಗೆ ಭರ್ಜರಿ ಹಾಸ್ಯದ ರಸದೌತಣ.ಅವರು ಆ ಮನೆಯಲ್ಲಿ ವಾಸವಾಗಿರುತ್ತಾರ, ಅಲ್ಲಿರುವುದು ದೆವ್ವನಾ ಏನು ಎಂಬುದಕ್ಕೆ ಚಿತ್ರ ನೋಡಿದರೆ ಒಳ್ಳೆಯದು. 

ತೆಲುಗು ಚಿತ್ರವೊಂದರ ರಿಮೇಕ್‌ ಆಗಿದ್ದರೂ ನಿರ್ದೇಶಕರು ಕನ್ನಡದ ನೇಟಿವಿಟಿಗೆ ತಕ್ಕಂತೆ ಚಿತ್ರಕಥೆ ಬರೆದಿದ್ದಾರೆ. ಪ್ರತಿ ದೃಶ್ಯವನ್ನು ಮನರಂಜನೆಯಿಂದಲೇ ತುಂಬಿಸಿದ್ದಾರೆ. ಅದರಲ್ಲಿ ಸೆಕೆಂಡ್‌ ಹಾಫ್‌ನಲ್ಲಿ ಪ್ರೇಕ್ಷಕ ಸೀಟಿನ ಮೇಲೆ ಕುಳಿತು ನಗುವುದೊಂದನ್ನು ಬಿಟ್ಟು ಬೇರೆ ಏನು ಮಾಡುವುದಿಲ್ಲ.ಅದಕ್ಕೆ ಇಂಬು ನೀಡುವಂತೆ ಪ್ರತಿಯೊಬ್ಬ ಕಲಾವಿದರು ತಮ್ಮ ಚಾಕಚಕ್ಯತೆ ಮೆರೆದಿದ್ದಾರೆ. ಕುರಿ ಪ್ರತಾಪ್‌, ಚಿಕ್ಕಣ್ಣ, ಸಾಧುಕೋಕಿಲಾ, ರವಿಶಂಕರ್‌, ಶ್ರುತಿ ಹರಿಹರನ್‌ ಎಲ್ಲರೂ ತಮ್ಮ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿದ್ದಾರೆ. 

ಹಾರರ್‌ ಸಿನಿಮಾ ಎಂದರೆ ಭಯ ಪಡುತ್ತಿದ್ದ ಜನ ಈ ಸಿನಿಮಾ ನೋಡಿ ಖಂಡಿತಾ ಬಿದ್ದು ಬಿದ್ದು ನಗುತ್ತಾರೆ. ಅದಂತೂ ಪಕ್ಕಾ.!!

ರೇಟಿಂಗ್ – 3.5/5.


Digiqole ad

Sunil H C

Leave a Reply