ಶಿಕ್ಷಣ ವ್ಯವಸ್ಥೆಯ ನೈಜ ಅನಾವರಣ “ಕಾಳಿದಾಸ ಕನ್ನಡ ಮೇಷ್ಟ್ರು” – ಚಿತ್ರ ವಿಮರ್ಶೆ

 ಶಿಕ್ಷಣ ವ್ಯವಸ್ಥೆಯ ನೈಜ ಅನಾವರಣ “ಕಾಳಿದಾಸ  ಕನ್ನಡ ಮೇಷ್ಟ್ರು” – ಚಿತ್ರ ವಿಮರ್ಶೆ

ಕನ್ನಡ ಚಿತ್ರ: ಕಾಳಿದಾಸ ಕನ್ನಡ ಮೇಷ್ಟ್ರು


ನಿರ್ದೇಶನ: ಕವಿರಾಜ್‌

ನಿರ್ಮಾಣ: ಉದಯ್‌ ಕುಮಾರ್‌

ತಾರಾಗಣ: ಜಗ್ಗೇಶ್‌, ಮೇಘನಾ ಗಾಂವ್ಕರ್‌, ಅಂಬಿಕಾ, ತಬಲಾ ನಾಣಿ, ಯತಿರಾಜ್‌, ಉಷಾ ಭಂಡಾರಿ, ಬಾಲ ನಟ ಓಂ, ಆರ್ಯ ಇತರರು

ಸಂಗೀತ: ಗುರು ಕಿರಣ್‌

ಛಾಯಾಗ್ರಹಣ: ಗುಂಡ್ಲುಪೇಟೆ ಸುರೇಶ್‌.

ಜಗ್ಗೇಶ್‌ ಅವರಂಥ ನಟರನ್ನು ಇಟ್ಟುಕೊಂಡು ಗಂಭೀರ ವಿಷಯವನ್ನು ಹೇಳಬಹುದು ಎಂಬುದನ್ನು ನಿರ್ದೇಶಕರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಈ ವಾರ ಬಿಡುಗಡೆಯಾಗಿರುವ ಕಾಳಿದಾಸ ಕನ್ನಡ ಮೇಷ್ಟ್ರು ಸಿನಿಮಾದಲ್ಲಿಯೂ ಸಹ ನಿರ್ದೇಶಕ ಕವಿರಾಜ್‌ ಗಂಭಿರ ವಿಷಯವನ್ನು ಹೇಳಿದ್ದಾರೆ. ಜತೆಗೆ ಅದನ್ನು ಮನರಂಜನಾತ್ಮಕವಾಗಿ ಹೇಳಿ ಅದನ್ನು ಪ್ರೇಕ್ಷಕರಿಗೆ ತಲುಪಿಸಿದ್ದಾರೆ.

ಈ ಸಿನಿಮಾದಲ್ಲಿ ಸರ್ಕಾರಿ ಶಾಲೆಯ ಕನ್ನಡ ಶಿಕ್ಷಕನೊಬ್ಬನ ಮನೆಯ ಕಥೆಯನ್ನು ಸಮಾಜದ ಕಥೆಯನ್ನಾಗಿ ಬಹಳ ವಿಶೇಷವಾಗಿ ಹೇಳಲಾಗಿದೆ. ತನ್ನ ಶಾಲೆಯ ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕನಿಗೆ ತನ್ನ ಮಗನನ್ನು ಕಾನ್ವೆಂಟ್‌ನಲ್ಲಿ ಓದಿಸಬೇಕು ಎಂಬ ಒತ್ತಡಕ್ಕೆ ಆತ ಸಿಲುಕುತ್ತಾನೆ. ಆ ನಂತರ ಆತನ ಬದುಕಿನಲ್ಲೆ ಏನಾಗುತ್ತದೆ, ಇಂತಹದ್ದೆ ಎಷ್ಟೋ ಮನೆಯಲ್ಲಿ ಇದೆ ಎಂಬುದೇ ಸಿನಿಮಾದ ಕಥೆ. 

ಇದರ ಜತೆಯಲ್ಲಿ ಪೋಷಕರ ಕನಸುಗಳಿಗಾಗಿ ಮಕ್ಕಳಿಗೆ ಆಗುವ ಒತ್ತಡಗಳೇನು, ಶಿಕ್ಷಣ ವ್ಯವಸ್ಥೆಯ ಇನ್ನೊಂದು ಮುಖವನ್ನು ಅನಾವರಣಗೊಳಿಸಲಾಗಿದೆ. ಜತೆಗೆ ಶಿಕ್ಷಣ ವ್ಯವಸ್ಥೆಯ ದಂಧೆಯನ್ನು ಸಹ ತೋರಿಸಲಾಗಿದೆ. ಸಿನಿಮಾದ ಫಸ್ಟ್‌ ಹಾಫ್‌ ಮನರಂಜನೆಯ ಫುಲ್‌ ಮೀಲ್ಸ್‌,ಸೆಕೆಂಡ್‌ ಹಾಫ್‌ನಲ್ಲಿ ಪ್ರೇಕ್ಷಕನಿಗೆ ಮನರಂಜನೆಯ ಜತೆಗೆ ಸಂದೇಶವೂ ಇದೆ. ಇಂತಹ ಗಂಭೀರ ಕಥೆಯನ್ನು ಹೇಳುವಾಗ ಮನರಂಜನೆ ಕಳೆದು ಹೋಗುತ್ತದೆ ಆದರೆ ನಿರ್ದೇಶಕರು ಆ ವಿಚಾರದಲ್ಲಿ ಎಚ್ಚರಿಕೆಯಿಂದ ಗಮನ ಹರಿಸಿದ್ದು, ಸಿನಿಮಾ ಎಲ್ಲಿಯೂ ತಾಳ ತಪ್ಪದಂತೆ ನೋಡಿಕೊಂಡಿದ್ದಾರೆ. ಸಿನಿಮಾ ಒಂದು ಉತ್ತಮ ಸಂದೇಶದೊಂದಿಗೆ ಕೊನೆಯಾಗಿದ್ದು, ಪ್ರತಿಯೊಬ್ಬ ಕನ್ನಡಿಗನೂ ನೋಡಲೇಬೇಕಾದ ವರ್ಗಕ್ಕೆ ಈ ಸಿನಿಮಾ ಸೇರುತ್ತದೆ.

ನಟ ಜಗ್ಗೇಶ್‌ ಮತ್ತೊಮ್ಮೆ ತಾವೊಬ್ಬ ಅದ್ಭುತ ನಟ ಎಂಬುದನ್ನು ತೋರಿಸಿದ್ದಾರೆ. ಮೇಘನಾ ಗಾಂವ್ಕರ್‌ ಮೊದಲ ಬಾರಿಗೆ ಬೇರೆ ರೀತಿಯ ಪಾತ್ರ ಮಾಡಿದ್ದು ಮಿಂಚಿದ್ದಾರೆ. ಇನ್ನು ಬಾಲ ನಟರು ಸಿನಿಮಾದ ಮುಖ್ಯ ಜೀವಾಳ ಅವರೆಲ್ಲರೂ ತಮ್ಮ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ.

ರೇಟಿಂಗ್ – 3.5/5


Digiqole ad

Sunil H C

Leave a Reply