ತೆರೆ ಮೇಲೆ ‘ದಮಯಂತಿ’ಯ ಅಬ್ಬರ – ಚಿತ್ರ ವಿಮರ್ಶೆ

 ತೆರೆ ಮೇಲೆ ‘ದಮಯಂತಿ’ಯ ಅಬ್ಬರ – ಚಿತ್ರ ವಿಮರ್ಶೆಚಿತ್ರ: ದಮಯಂತಿ

ನಿರ್ದೇಶನ: ನವರಸನ್‌

ನಿರ್ಮಾಣ: ನವರಸನ್‌

ಸಂಗೀತ: ಗಣೇಶ್‌ ನಾರಾಯಣ್‌

ಸಿನಿಮಾಟೋಗ್ರಫಿ: ಪಿ ಕೆ ಎಚ್‌ ದಾಸ್‌

ತಾರಗಣ: ರಾಧಿಕಾ ಕುಮಾರಸ್ವಾಮಿ, ಗಿರೀಶ್‌, ತಬಲಾ ನಾಣಿ,ಮತ್ತಿತರರು.

ಹಾರರ್‌ ಸಿನಿಮಾಗಳೆಂದರೆ ಹೆಚ್ಚಾಗಿ ಭಯ ಹುಟ್ಟಿಸುವ ಸಿನಿಮಾಗಳೇ ಇರುತ್ತದೆ ಆದರೆ ಅವು ಒಂದೇ ವರ್ಗದ ಜನರಿಗೆ ಇಷ್ಟವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಹಾರರ್‌ ಜತೆಗೆ ಕಾಮಿಡಿಯನ್ನು ಬೆರೆಸಿ ಬೇರೆ ಬೇರೆ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯುತ್ತಿದೆ ಚಿತ್ರತಂಡ. ಆ ಸಾಲಿಗೆ ದಮಯಂತಿ ಸಹ ಸೇರುತ್ತದೆ.

ಈ ಸಿನಿಮಾದಲ್ಲಿ ರಿಯಾಲಿಟಿ ಶೋದ ಕಾನ್ಸೆಪ್ಟ್‌ ಇಟ್ಟುಕೊಂಡು ಅದಕ್ಕೊಂದು ಚೆಂದದ ಕಾಮಿಡಿ ಹಾರರ್‌ನ್ನು ಸೃಷ್ಟಿಸಿದ್ದಾರೆ ನಿರ್ದೇಶಕ ನವರಸನ್‌. ರಿಯಾಲಿಟಿ ಶೋ ದ ನಿರ್ದೇಶಕನೊಬ್ಬನಿಗೆ ಅರ್ಜೆಂಟ್‌ ಹಣದ ಅವಶ್ಯಕತೆ ಇರುತ್ತದೆ. ಅದಕ್ಕಾಗಿ ಅವನ ಬಳಿ ಇರುವ ದೊಡ್ಡ ಬಂಗಲೆಯನ್ನು ಮಾರಾಟ ಮಾಡಲು ಹೋಗುತ್ತಾನೆ. ಆ ಸಮಯದಲ್ಲಿ ಅದು ದೆವ್ವದ ಬಂಗಲೆಯನ್ನು ಯಾರು ತೆಗೆದುಕೊಳ್ಳುವುದಿಲ್ಲ. ಆಗ ತನ್ನ ಕ್ರಿಯೇಟಿವ್‌ ಐಡಿಯಾ ಮಾಡಿ ಆ ಬಂಗಲೆಯನ್ನು ಆತ ಮಾರಾಟ ಮಾಡಲು ಯೋಚಿಸುತ್ತಾನೆ. ಆ ಕ್ರಿಯೇಟಿವ್‌ ಐಡಿಯಾ ಏನು, ಈ ಬಂಗಲೆಯ ಕಥೆಯೇನು, ಈ ರಿಯಾಲಿಟಿ ಶೋ ನಿರ್ದೇಶಕನಿಗೂ ದಮಯಂತಿಗೂ ಹೇಗೆ ಸಂಬಂಧ ಎಂಬುದನ್ನು ಸಿನಿಮಾ ಮಂದಿರದಲ್ಲಿ ನೋಡಬಹುದು. ಅದೇ ಚಿತ್ರದ ಕುತೂಹಲ ಕಾರಿ ಅಂಶ.

ನಿರ್ದೇಶಕ ನವರಸನ್‌ ಆಯ್ಕೆ ಮಾಡಿಕೊಂಡಿರುವ ಕಥೆ ಬಹಳ ಚೆನ್ನಾಗಿದೆ ಆದರೆ ಈಗಾಗಲೇ ರಿಯಾಲಿಟಿ ಶೋ ಕಾನ್ಸೆಪ್ಟ್‌ ಬೇರೆ ರೀತಿಯಲ್ಲಿ ತೆರೆ ಮೇಲೆ ಬಂದಿರುವುದರಿಂದ ಹೊಸ ತನದ ಕಥೆಯನ್ನು ಬರೆದುಕೊಳ್ಳಬಹುದಿತ್ತೇನೊ ಅನಿಸುತ್ತದೆ.  ಆದರೆ ಚಿತ್ರಕಥೆಯನ್ನು ರೋಚಕವಾಗಿಸುವ ಮೂಲಕ ಸಿನಿಮಾವನ್ನು ನೋಡಿಸಿಕೊಳ್ಳುವಂತೆ ಮಾಡಿದ್ದಾರೆ. ಜತೆಗೆ ಮೇಕಿಂಗ್‌ಗೂ ಒತ್ತು ನೀಡಿದ್ದಾರೆ. ಚಿತ್ರದಲ್ಲಿನ ಡಬಲ್ ಮೀನಿಂಗ್ ಡೈಲಾಗ್ಸ್ ಸ್ವಲ್ಪ ಹೆಚ್ಚಾಯಿತು ಎನಿಸುತ್ತದೆ.

ಇನ್ನು ರಾಧಿಕಾ ಕುಮಾರಸ್ವಾಮಿ ಅಂದು ಪಾತ್ರದಲ್ಲಿಯೇ ಮಿಂದು ಎದ್ದಿದ್ದಾರೆ. ಉಳಿದಂತೆ  ಗಿರೀಶ್‌ ಶಿವಣ್ಣ, ಮಿತ್ರಾ, ತಬಲಾ ನಾಣಿ ಸೇರಿದಂತೆ ಎಲ್ಲ ಕಲಾವಿದರು ತಮ್ಮ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.

ದಮಯಂತಿ ಸಿನಿಮಾ ಸಾಕಷ್ಟು ಹೊಸ ಹೊಸ ವಿಷಯಗಳನ್ನು ಹೇಳುತ್ತದೆ ಅದನ್ನು ತೆರೆ ಮೇಲೆ ನೋಡಬೇಕು. ಇನ್ನು ಹಾರರ್‌ ಸಿನಿಮಾ ಇಷ್ಟಪಡುವವರಿಗೆ ಈ ದಮಯಂತಿ ಖಂಡಿತಾ ಇಷ್ಟವಾಗುತ್ತದೆ. ಜತೆಗೆ ಫ್ಯಾಮಿಲಿ ಕೂಡ ನೋಡಬಹುದು.

ರೇಟಿಂಗ್ – 3.25/5


Digiqole ad

Sunil H C

Leave a Reply