‘ಡಿ ಬಾಸ್ ಹುಡುಗ ಸುಭಾಶ್ ಚಂದ್ರ ನಿರ್ದೇಶನದ ಹೊಸ ಚಿತ್ರ.

 ‘ಡಿ ಬಾಸ್ ಹುಡುಗ ಸುಭಾಶ್ ಚಂದ್ರ ನಿರ್ದೇಶನದ ಹೊಸ ಚಿತ್ರ.

ಡಿ ಬಾಸ್ ಗರಡಿಯಲ್ಲಿ ಪಳಗಿರುವ ಹೊಸ ಪ್ರತಿಭೆ ಸುಭಾಶ್ ಚಂದ್ರ ತಮ್ಮ ಹೊಸ ಚಿತ್ರದ ನಿರ್ದೇಶನಕ್ಕೆ ಇಳಿದಿದ್ದಾರೆ.ಇದಕ್ಕೆ ಪಂಚತಂತ್ರ ಖ್ಯಾತಿಯ ವಿಹಾನ್ ಗೌಡ ಅವರನ್ನು ನಾಯಕನಾಗಿ ಆಯ್ಕೆ ಮಾಡಲಾಗಿದೆ.ಗ್ರೇಟ್ ಬ್ರೋಸ್ ಪಿಕ್ಚರ್ಸ್ ಸಂಸ್ಥೆಯಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ .


ಅವರು ಈ ಹಿಂದೆ ‘ಕುರುಕ್ಷೇತ್ರ ‘ಚಿತ್ರದಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.ಅದಷ್ಟೇ ಅಲ್ಲ ದರ್ಶನ ಅವರ ಅಫಿಷಿಯಲ್ ಫ್ಯಾನ್ ಪೇಜ್ ಡಿಕಂಪನಿಯ ಅಡ್ಮಿನ್ ಆಗಿಯೂ ಕಳೆದ ಒಂಬತ್ತು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ .ಹಾಗಾಗಿ ಸುಭಾಷ್ ಅವರ ಆಸಕ್ತಿ ನೋಡಿ ಸ್ವತಃ ದರ್ಶನ ಅವರೇ ಕುರುಕ್ಷೇತ್ರ ಚಿತ್ರದಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸಿದ್ದರು .
ಗ್ರೇಟ್ ಬ್ರೋಸ್ ಪಿಚರ್ಸ್ ಸಂಸ್ಥೆಯನ್ನು ಸುಭಾಷ್ ಅವರೇ ಹುಟ್ಟು ಹಾಕಿದ್ದಾರೆ .ಮಂಜುನಾಥ್ ಹಾಗು ರಾಜೇಂದ್ರ ಎಂ .ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದು ಜನವರಿಯಲ್ಲಿ ಮುಹೂರ್ತ ನಡೆಯಲಿದೆ .ಬೆಂಗಳೂರು ,ಮದ್ದುರೂ ,ದೊಡ್ಡಬಳ್ಳಾಪುರ ,ಮಡಿಕೇರಿ ಹಾಗೂ ರಾಮನಗರದ ಸುತ್ತಮುತ್ತ ಚಿತ್ರಿಕರಣ ನಡೆಸುವ ಉದ್ದೇಶ ಚಿತ್ರತಂಡಕ್ಕಿಕ್ಕಿದೆ .
ಇದೊಂದು 1990 -2019 ರವರೆಗೆ ನಡೆಯುವ ಬರಹಗಾರನೊಬ್ಬನ ಜೀವನ ಹಾಗೂ ಆತನ ಮುಂದಿನ ಪೀಳಿಗೆ ಸಮಾಜವನ್ನು ಹೇಗೆ ಎದುರಿಸುತ್ತದೆ ಎಂಬ ವಿಷಯವನ್ನು ಆಕ್ಷನ್ ಕಮ್ ಥ್ರಿಲ್ಲರ್ ಮೂಲಕ ಕಥೆ ಹೇಳಲಿದ್ದಾರಂತೆ ನಿರ್ದೇಶಕರು .ಪ್ರೀತಿಯ ಜೊತೆ ತಂದೆ -ಮಗನ ಸೆಂಟಿಮೆಂಟ್ ಕಥೆ ಕೂಡ ಈ ಚಿತ್ರದಲ್ಲಿದೆ .ಸದ್ಯಕ್ಕೆ ವಿಹಾನ್ ಗೌಡ ಚಿತ್ರದ ಹೀರೋ ನಾಯಕಿ ಸೇರಿದಂತೆ ಉಳಿದ ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ .ಸುರೇಶ್ ರಾಜ್ ಸಂಗೀತವಿದೆ


Digiqole ad

Nithyanand Amin

Leave a Reply