ಗಲ್ಲಾಪೆಟ್ಟಿಗೆಯಲ್ಲಿ ‘ಒಡೆಯ ‘ ನ ಅಬ್ಬರ

 ಗಲ್ಲಾಪೆಟ್ಟಿಗೆಯಲ್ಲಿ ‘ಒಡೆಯ ‘ ನ ಅಬ್ಬರ

ಡಿ ಬಾಸ್ ದರ್ಶನ್ ಅಭಿನಯಿಸಿರುವ ‘ಒಡೆಯ ‘ ಸಿನಿಮಾ ರಿಲೀಸ್ ಆಗಿದೆ.ಈ ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲವಿತ್ತು.ಈಗಾಗಲೇ ಟೀಸರ್,ಟ್ರೈಲರ್ ದಾಖಲೆಯ ವೀಕ್ಷಣೆ ಪಡೆದಿದ್ದು, ಹಾಡುಗಳು ಸೂಪರ್ ಹಿಟ್ ಆಗಿದ್ದವು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸಿನಿಮಾಗಳು ಒಂದಾದ ಮೇಲೊಂದರಂತೆ ಬಿಡುಗಡೆಯಾಗಿ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆ ಮಾಡುತ್ತಿದೆ .
ಇದಕ್ಕೂ ಮೊದಲು ಬಿಡುಗಡೆಯಾಗಿದ್ದ ಯಜಮಾನ, ಕುರುಕ್ಷೇತ್ರ ಉತ್ತಮ ಗಳಿಕೆ ಮಾಡಿತ್ತು .ಈಗ ಒಡೆಯ ಕೂಡ ಅದೇ ದಾಖಲೆಗೆ ಸೇರಬಹುದು ಎಂಬ ನಿರೀಕ್ಷೆ ಡಿ ಬಾಸ್ ಅಭಿಮಾನಿಗಳಲ್ಲಿತ್ತು.ಅದನ್ನು ಚಿತ್ರ ಹುಸಿಗೊಳಿಸದೆ ರೆಕಾರ್ಡ್ ಬ್ರೇಕಿಂಗ್ ಕಲೆಕ್ಷನ್ ಪಡೆದುಕೊಂಡಿದೆ.
ಸಂದೇಶ್ ಕಂಬೈನ್ಸ್ ಬ್ಯಾನರ್ ಅಲ್ಲಿ ಮೂಡಿಬಂದಿರುವ ‘ಒಡೆಯ ‘ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಕರೆಸಿಕೊಳ್ಳುವ ದರ್ಶನ ಅಭಿನಯಿಸಿರುವ ಈ ಚಿತ್ರ ಪಕ್ಕ ಮಾಸ್ ಚಿತ್ರ ಎನ್ನುವುದನ್ನು ಈಗಾಗಲೇ ಟ್ರೈಲರ್ ಸಾಬೀತು ಪಡಿಸಿದೆ.
ಆರಂಭದಿಂದಲೂ ಭಾರೀ ನಿರೀಕ್ಷೆ ಮೂಡಿಸಿದ್ಧ ‘ಒಡೆಯ ‘ ಡೈಲಾಗ್,ಹಾಡು, ಫೈಟ್ ಅಭಿಮಾನಿಗಳ ಮನ ಗೆದ್ದಿದ್ದು , ಮೊದಲ ದಿನವೇ ಗ್ರಾಂಡ್ ಓಪನಿಂಗ್ ಪಡೆದುಕೊಂಡಿದೆ.
ದರ್ಶನ್ ಜೊತೆಗೆ ಚಿತ್ರದಲ್ಲಿ ನಟಿ ಸನಾಹ ತಿಮ್ಮಯ್ಯ,ದೇವರಾಜ್, ರವಿಶಂಕರ್,ಶರತ್ ಲೋಹಿತಾಶ್ವ,ಚಿತ್ರ ಶೆಣೈ ಕಾಣಿಸಿಕೊಂಡ್ಡಿದ್ದಾರೆ.
ಇನ್ನು ಈ ಚಿತ್ರದಲ್ಲಿ ಸಾಧುಕೋಕಿಲ, ಚಿಕ್ಕಣ್ಣ,ತಬಲಾ ನಾಣಿ ಅವರೂ ಕಾಣಿಸಿಕೊಂಡಿದ್ದು ಭರಪೂರ ಮನರಂಜನೆಗೆ ಕೊರತೆಯಿಲ್ಲ ಎಂಬುದು ಚಿತ್ರ ನೋಡಿದವರ ಅಭಿಪ್ರಾಯ.
ಚಿತ್ರವು ಈ ಹಿಂದಿನ ಕನ್ನಡ ಚಿತ್ರಕ್ಕೆ ಓಪನಿಂಗ್ ಕಲೆಕ್ಷನ್ ಅನ್ನು ದಾಟಿದೆ ಎನ್ನಲಾಗುತಿದ್ದು ಅಧಿಕೃತ ಅಂಕಿ ಅಂಶ ಇನ್ನಷ್ಟು ಹೊರಬರಬೇಕಾಗಿದೆ.Digiqole ad

Nithyanand Amin

Leave a Reply