ಮಾರ್ಚ್ 21ಕ್ಕೆ ‘ರಾಬರ್ಟ್’ ಆಡಿಯೋ

 ಮಾರ್ಚ್ 21ಕ್ಕೆ ‘ರಾಬರ್ಟ್’ ಆಡಿಯೋ

ರಾಬರ್ಟ್ ಸಿನಿಮಾದ ಆಡಿಯೋ ಯಾವಾಗ ತೆರೆಗೆ ಬರುತ್ತೆ ಎಂದು ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಗುಡ್ ನ್ಯೂಸ್.  ಹೌದು, ಚಿತ್ರದ ಆಡಿಯೋ ಇದೇ ತಿಂಗಳು ಮಾರ್ಚ್ 21ಕ್ಕೆ ತೆರೆಗೆ ಬರುತ್ತಿದೆ.ಏಪ್ರಿಲ್ 9 ರಂದೇ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ.


ಕಲಬುರಗಿಯಲ್ಲಿ ಚಿತ್ರದ ಆಡಿಯೋ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.ಈಗಾಗಲೆ ಬಿಡುಗಡೆಯಾಗಿರುವ 2ಹಾಡುಗಳು ಸೂಪರ್ ಹಿಟ್ ಆಗಿದ್ದು ಬಿಡುಗಡೆಯಾದ ಮೂರೇ ದಿನದಲ್ಲಿ 16 ಲಕ್ಷಕ್ಕೂ  ಹೆಚ್ಚು ವ್ಯೂವ್ಸ್‌ನ್ನು ಪಡೆದಿದೆ.ಅರ್ಜುನ್ ಜನ್ಯ ಸಂಗೀತ ನಿರ್ದೇಶನದಲ್ಲಿ ನಾಗೇಂದ್ರ ಪ್ರಸಾದ್ ಬರೆದಿರುವ ಹಾಡು ಅಭಿಮಾನಿಗಳಿಗೆ ಹೊಸ ಕಿಕ್ ನೀಡಿದೆ.
ಸದ್ಯ ಚಿತ್ರದಿಂದ ಎಲ್ಲಾ ಹಾಡುಗಳು ಬಿಡುಗಡೆಗೆ ಸಜ್ಜಾಗಿದ್ದು, ಇದೇ ತಿಂಗಳ ಕೊನೆಯಲ್ಲಿ ಹಾಡುಗಳು ಅದ್ದೂರಿಯಾಗಿ ಮಾರುಕಟ್ಟೆಗೆ ಬರಲಿವೆ.ಬಿಡುಗಡೆಗೂ ಮುನ್ನವೇ ಚಿತ್ರ ಭಾರಿ ಮೊತ್ತಕ್ಕೆ ಮಾರಾಟವಾಗಿದ್ದು  ಈಗಲೇ ಗೆಲುವಿನ ಹಾದಿ ತುಳಿದಿದೆ.


Digiqole ad

Nithyanand Amin

Leave a Reply