2021 ರಲ್ಲಿ ಬಿಗ್ ಬಜೆಟ್ ಪ್ಯಾನ್‌ ಇಂಡಿಯಾ ಸಿನಿಮಾ ನಿರ್ಮಿಸಲಿರುವ ಉದಯ್‌ ಮೆಹ್ತಾ

 2021 ರಲ್ಲಿ ಬಿಗ್ ಬಜೆಟ್ ಪ್ಯಾನ್‌ ಇಂಡಿಯಾ ಸಿನಿಮಾ ನಿರ್ಮಿಸಲಿರುವ ಉದಯ್‌ ಮೆಹ್ತಾ

‘ಬಚ್ಚನ್’, ‘ಕೃಷ್ಣನ್ ಲವ್ ಸ್ಟೋರೀ’, ‘ಸಿಂಗ’, ‘ಬ್ರಹ್ಮಚಾರಿ’ ಸೇರಿದಂತೆ ಸಾಕಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಉದಯ್‌ ಮೆಹ್ತಾ ಈಗ ಹುಲಿಯನ್ನು ಆಧಾರವಾಗಿಟ್ಟುಕೊಂಡು ಪ್ಯಾನ್‌ ಇಂಡಿಯಾ ಸಿನಿಮಾ ಮಾಡುತ್ತಿದ್ದಾರೆ.


ಮಹಾರಾಷ್ಟ್ರದ ಕಾಡೊಂದರಲ್ಲಿ ನರ ಭಕ್ಷಕಳಾಗಿ ಕಾಣಿಸಿಕೊಂಡಿದ್ದ ಅವನಿ ಹುಲಿಯನ್ನು ಆಧಾರವಾಗಿಟ್ಟುಕೊಂಡು ಉದಯ್‌ ಮೆಹ್ತಾ ಕಥೆ ಬರೆದಿದ್ದಾರೆ. ಈ ಹಿಂದೆ ಬ್ರಹ್ಮಚಾರಿ ಚಿತ್ರದಲ್ಲಿ ಕಥೆಗಾರರಾಗಿ ಬದಲಾಗಿದ್ದ ಅವರು ಈ ಚಿತ್ರಕ್ಕೂ ಕಥೆ ಬರೆದಿದ್ದಾರೆ. ವಿಶೇಷ ಎಂದರೆ ಈ ಚಿತ್ರದಲ್ಲಿ VFX ಹೆಚ್ಚಾಗಿರಲಿದ್ದು, ಬಜೆಟ್‌ ಕೂಡಾ ದೊಡ್ಡದಾಗಿರುತ್ತದೆ. ಉದಯ್‌ ಮೆಹ್ತಾ ಬರೆದ ಕಥೆಗೆ ಬಿ ಎಂ ಗಿರಿರಾಜ್‌ ನಿರ್ದೇಶನ ಮಾಡಲಿದ್ದಾರೆ.

ಪ್ಯಾನ್‌ ಇಂಡಿಯಾ ಸಿನಿಮಾವಾದ್ದರಿಂದ ದಕ್ಷಿಣ ಭಾರತದ ಖ್ಯಾತ ನಟರು ಚಿತ್ರದಲ್ಲಿರಲಿದ್ದಾರಂತೆ. ಕಾಲ್ಪನಿಕ ಮತ್ತು ಫ್ಯಾಂಟಸಿ ಎರಡು ಸೇರಿ ಈ ಕಥೆಯನ್ನು ಹೆಣೆದಿದ್ದಾರೆ ಉದಯ್‌ ಮಹ್ತಾ.

ಸದ್ಯಕ್ಕೆ ಅವರು ಧ್ರುವ ಸರ್ಜಾ ಮತ್ತು ನಂದಕಿಶೋರ್‌ ಅವರ ಕಾಂಬಿನೇಶನ್‌ನಲ್ಲಿ ಸಿನಿಮಾವೊಂದನ್ನು ಮಾಬೇಕಿರುವುದರಿಂದ ಅದು ಮುಗಿದ ಮೇಲೆ ‘ಅವನಿ’ ಕಥೆಯನ್ನು ತೆರೆ ಮೇಲೆ ತರಲಿದ್ದಾರೆ. ಗಿರಿರಾಜ್‌ ಕೂಡಾ ರವಿಚಂದ್ರನ್‌ ಜತೆ ಸಿನಿಮಾವೊಂದನ್ನು ಮಾಡಬೇಕಿದೆ. ಅದಾದ ಮೇಲೆ ಅವನಿಯತ್ತ ಬರಲಿದ್ದಾರೆ ಅವರು. ಅಷ್ಟೊತ್ತಿಗೆ ಸಿನಿಮಾದ ಬೇರೆ ಬೇರೆ ಕೆಲಸಗಳನ್ನು ಮುಗಿಸಿಕೊಳ್ಳಲು ಪ್ಲಾನ್‌ ಮಾಡಿಕೊಂಡಿದ್ದಾರೆ. ಸಂಭಾಷಣೆಯನ್ನು ಬೆಲ್‌ ಬಾಟಮ್‌ ಖ್ಯಾತಿಯ ರಘು ನಿಡುವಳ್ಳಿ ಬರೆಯಲಿದ್ದಾರೆ.

ಒಟ್ಟಾರೆ ಕನ್ನಡದಲ್ಲೊಂದು ಫ್ಯಾಂಟಸಿ ಸಿನಿಮಾ ಬರಲಿದೆ ಆದರೆ ಅದಕ್ಕೆ 2021ರವರೆಗೂ ಕಾಯಬೇಕಿದೆ.


Digiqole ad

Sunil H C

Leave a Reply