ನೀರೆಯರಿಗೆ ಆತ್ಮವಿಶ್ವಾಸ ತುಂಬುವ ಫ್ಯಾಶನ್ ಷೋ

 ನೀರೆಯರಿಗೆ ಆತ್ಮವಿಶ್ವಾಸ ತುಂಬುವ ಫ್ಯಾಶನ್ ಷೋ


ಫ್ಯಾಶನ್ ಷೋ ಅಂದರೆ ಅಲ್ಲಿ ಅಂದ, ಚಂದ,ಶೇಪ್, ವಯಸ್ಸು ಮುಂತಾದವು ಇರುವವರನ್ನು ರ‍್ಯಾಂಪ್ ವಾಕ್‌ದಲ್ಲಿ ಭಾಗವಹಿಸಲು ಅರ್ಹತೆ ಕೊಡುವುದು ಸಾಮಾನ್ಯವಾಗಿದೆ. ಆದರೆ ಜ್ಯೋತ್ಸಾವೆಂಕಟೇಶ್ ಮತ್ತು ಸಬರೇಷ್ ಬಾಲಕೃಷ್ಣನಾಯ್ಡು ಸಾರಥ್ಯದ ಜಾಸ್ ಸ್ಟುಡಿಯೋದವರು ಇದೆಲ್ಲಾವನ್ನು ಪರಿಗಣಿಸದೆ, ’ಮಿಸ್ ಅಂಡ್ ಮಿಸಸ್ ಕರ್ನಾಟಕ 2021’ ಅಡಿಷನ್ ಸ್ಪರ್ಧೆಯಲ್ಲಿ ಪಾಲ್ಗೋಳಲು ಅವಕಾಶ ಮಾಡಿಕೊಟ್ಟಿದ್ದರು. ಇದಕ್ಕೆ ಯಾವುದೇ ರೀತಿಯ ನೊಂದಣಿ ಶುಲ್ಕವಿರುವುದಿಲ್ಲ. ಪ್ರಸಕ್ತ ಪಿಡುಗು ಬಂದಿರುವ ಸಂದರ್ಭದಲ್ಲಿ ಇವರುಗಳಿಗೆ ಬದುಕಿನಲ್ಲಿ ಆತ್ಮವಿಶ್ವಾಸ, ಪ್ರೋತ್ಸಾಹ ಹಾಗೆಯೇ ಯಾವ ರೀತಿ ಪ್ರತಿನಿಧಿಸಬೇಕು ಎಂಬುದರ ಧೈರ್ಯ ತುಂಬಲು ಇಂತಹ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಹಾಗೆಯೇ ಇವರುಗಳನ್ನು ಮಾಲೀಶ್ ಮಾಡಿ ಹೇಗೆ ಎದುರಿಸಬೇಕೆಂಬ ಮಾರ್ಗಗಳನ್ನು ತೋರಿಸಿ, ಜೂಮ್ ಲೈಟ್‌ಗೆ ತರುವಂತೆ ಮಾಡುವುದೇ ಸಂಸ್ಥೆಯ ಗುರಿಯಾಗಿದೆ.ಫ್ಯಾಶನ್ ಅಂಗಳದಲ್ಲಿ ಹೆಸರು ಮಾಡಿರುವ ಹತ್ತು ಮಂದಿ ಜ್ಯೂರಿಗಳಾಗಿದ್ದು, ಈ ಪೈಕಿ ಇಬ್ಬರು ಮಂಗಳಮುಖಿಯರುಗಳಾದ ನೀತೂ.ಆರ್.ಎಸ್ ಹಾಗೂ ಅಮಿತ್‌ಪಾಂಡ್ಯ ತೀರ್ಪುಗಾರರಾಗಿರುವುದು ಮತ್ತೋಂದು ಹಿರಿಮೆ ಎನ್ನಬಹುದು. ಬೆಂಗಳೂರು, ಮೈಸೂರು, ಮೂಡಬಿದಿರೆ, ತಿರುಪತಿ, ತ್ರಿಪುರ, ಶಿಲಾಂಗ್ ಇನ್ನು ಮುಂತಾದ ಸ್ಥಳಗಳಿಂದ 115 ಸ್ಪರ್ಧಿಗಳು ಆಗಮಿಸಿದ್ದರು. 60 ಮಿಸ್ ಸುಂದರಿಯರು, 55 ಮಿಸಸ್ ನೀರೆಯರು ಭಾಗವಹಿಸಿದ್ದರು. ಒಟ್ಟು 12 ರಂತೆ ಎರಡು ವಿಭಾಗಗಳಿಂದ ಆಯ್ಕಯಾಗಲಿರುವರು.

ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ ಗ್ರ್ಯಾಂಡ್ ರ‍್ಯಾಂಪ್ ವಾಕ್‌ದಲ್ಲಿ ಹಾಜರಾಗಲು ಸೌಲಭ್ಯ ಕಲ್ಪಿಸಲಾಗುವುದು. ನಟ ಅಭಯ್‌ವೀರ್, ಗಾಯಕಿ,ಮಜಾಭಾರತ್ ಖ್ಯಾತಿಯ ರೆಮೋ ಮುಂತಾದ ಗಣ್ಯರಗಳು ಅತಿಥಿಗಳಾಗಿ ಆಗಮಿಸಿ ಸ್ಪರ್ಧಿಗಳಿಗೆ ಉತ್ತೇಜನ ತುಂಬಿದರು.


Digiqole ad

Sunil H C

Leave a Reply