‘ಅವತಾರ ಪುರುಷ’ ಚಿತ್ರದಲ್ಲಿ 10 ಅವತಾರಗಳಲ್ಲಿ ನಟ ಶರಣ್

 ‘ಅವತಾರ ಪುರುಷ’ ಚಿತ್ರದಲ್ಲಿ 10 ಅವತಾರಗಳಲ್ಲಿ ನಟ ಶರಣ್

ಪುಷ್ಕರ್ ಫಿಲಂಸ್ ನಿರ್ಮಾಣದಲ್ಲಿ ಮೂಡಿಬಂದಿರುವ “ಅವತಾರ ಪುರುಷ” ಚಿತ್ರ ಡಿಸೆಂಬರ್ 10 ರಂದು ಬಿಡುಗಡೆಗೆ ಸಿದ್ದವಿದೆ. ಸಿಂಪಲ್ ಸೂನಿ ನಿರ್ದೇಶನದ ಈ ಚಿತ್ರದಲ್ಲಿ ನಾಯಕ ನಟ ಶರಣ್ ಅವರು ಸುಮಾರು 10 ಅವತಾರಗಳಲ್ಲಿ ಕಾಣಿಸಿಕೊಂಡಿದ್ದರಂತೆ. ಈ ವಿಷಯವನ್ನು ಸ್ವತಃ ಶರಣ್ ಅವರೇ ಮೊನ್ನೆ ನಡೆದ ಪತ್ರಿಕಾಗೋಷ್ಟಿಯಲ್ಲಿ ಹಂಚಿಕೊಂಡಿದ್ದಾರೆ.


“ನಾನು ಈವರೆಗೂ ಈ ರೀತಿಯ ಚಿತ್ರ ಮಾಡಿಲ್ಲ. ನನ್ನ ಈವರೆಗಿನ ಸಿನಿಪಯಣದಲ್ಲೇ ದೊಡ್ಡ ಬಜೆಟ್ ನ‌ ಚಿತ್ರವಿದು. ಇಂತಹ ಅದ್ದೂರಿ ಚಿತ್ರ ನಿರ್ಮಾಣಕ್ಕೆ ಮುಂದಾದ ನಿರ್ಮಾಪಕ ಪುಷ್ಕರ್ ಅವರ ಧೈರ್ಯ ಮೆಚ್ಚಲೇಬೇಕು. ಇನ್ನೂ ನಿರ್ದೇಶಕ‌ ಸಿಂಪಲ್ ಸುನಿ‌, ಹೆಸರಿಗೆ ಮಾತ್ರ ಸಿಂಪಲ್ ಅಲ್ಲ, ಅವರು ನಿಜವಾಗಲೂ ಸಿಂಪಲೆಸ್ಟ್ ಸುನಿ. ಅವರ ಕಾರ್ಯವೈಖರಿ ಬಗ್ಗೆ ಎಷ್ಟು ಹೇಳಿದರು ಕಡಿಮೆ. ಇನ್ನೂ ನಾಯಕಿ ಆಶಿಕಾ ರಂಗನಾಥ್ ಸೇರಿದಂತೆ ಈ ಚಿತ್ರದಲ್ಲಿ ನಟಿಸಿರುವ ಎಲ್ಲಾ ಕಲಾವಿದರ ಅಭಿನಯ‌ ಸೊಗಸಾಗಿ ‌ಮೂಡಿಬಂದಿದೆ. ನಾನು ಸುಮಾರು ಹತ್ತು ಅವತಾರಗಳಲ್ಲಿ ಕಾಣಿಸಬಹುದು. ಅದ್ಧೂರಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಚಿತ್ರ ಇದೇ ಡಿಸೆಂಬರ್ ಹತ್ತರಂದು ಬಿಡುಗಡೆಯಾಗಲಿದೆ, ನೋಡಿ ಹಾರೈಸಿ” ಎಂದರು ನಾಯಕ ಶರಣ್.

ಅವತಾರ ಪುರುಷ ಎರಡು ಭಾಗಗಳಲ್ಲಿ ತೆರೆಕಾಣಲಿದ್ದು, ಎರಡನೇ ಭಾಗ ‘ಅವತಾರ ಪುರುಷ- ಭಾಗ 1’ ಬಿಡುಗಡೆಯಾಗಿ 100 ದಿನಗಳ ನಂತರ ತೆರೆಗೆ ಬರಲಿದೆ ಎಂದು ನಿರ್ಮಾಪಕರಾದ ಪುಷ್ಕರ್ ತಿಳಿಸಿದರು.


Digiqole ad

Sunil H C

Leave a Reply