ಮನೆಮಂದಿಯೆಲ್ಲಾ ಕೂತು ನೋಡುಬಹುದಾದ ಚಿತ್ರ “ಗೋವಿಂದ ಗೋವಿಂದ”

 ಮನೆಮಂದಿಯೆಲ್ಲಾ ಕೂತು ನೋಡುಬಹುದಾದ ಚಿತ್ರ “ಗೋವಿಂದ ಗೋವಿಂದ”

ಚಿತ್ರ: ಗೋವಿಂದ ಗೋವಿಂದ


ನಿರ್ದೇಶನ: ತಿಲಕ್‌

ನಿರ್ಮಾಣ: ಶೈಲೇಂದ್ರ ಬಾಬು, ರವಿ ಆರ್‌. ಗರಣಿ, ಕಿಶೋರ್‌ ಮಧುಗಿರಿ

ತಾರಾಗಣ: ಸುಮಂತ್‌ ಶೈಲೇಂದ್ರ, ಭಾವನಾ ಮೆನನ್‌, ಕವಿತಾ ಗೌಡ, ರೂಪೇಶ್‌ ಶೆಟ್ಟಿ, ಪವನ್‌, ಕಡ್ಡಿಪುಡಿ ಚಂದ್ರು, ವಿಜಯ್‌ ಚೆಂಡೂರ್‌. ಅಚ್ಯುತ್‌, ಅಜಯ್‌ ಘೋಷ್‌.

ಛಾಯಾಗ್ರಹಣ: ಕೆ.ಎನ್‌ ಚಂದ್ರಶೇಖರ್‌

ಸಂಗೀತ: ಹಿತನ್‌.

ಸಿನಿಮಾಗಳು ಪ್ರೇಕ್ಷಕರಿಗೆ ಇಷ್ಟವಾಗಬೇಕಾದರೆ ಪ್ರತಿ 20 ನಿಮಿಷಕ್ಕೊಮ್ಮೆ ಅದ್ಭುತವಾದ ಸೀನ್‌ಗಳಿರಬೇಕು ಎನ್ನುವ ಮಾತಿದೆ. ಅದನ್ನೇ ದೃಷ್ಟಿಯಲ್ಲಿಟ್ಟುಕೊಂಡು ಒಂದಷ್ಟು ಸಿನಿಮಾಗಳು ತಯಾರಾಗುತ್ತವೆ. ಹಾಗೆ ತಯಾರದ ತೆಲುಗಿನ ‘ಬ್ರೊಚುವಾರೆವರು’ ಸಿನಿಮಾ ಕನ್ನಡದಲ್ಲಿ ‘ಗೋವಿಂದ ಗೋವಿಂದ’ ಹೆಸರಿನಲ್ಲಿ ಬಿಡುಗಡೆಯಾಗಿದೆ. ಅಲ್ಲಿ ಎಷ್ಟು ಲವಲವಿಕೆಯಿಂದ ಸಿನಿಮಾ ಮಾಡಿ, ಯಶಸ್ವಿಯಾಗಿದ್ದರೋ, ಇಲ್ಲಿಯೂ ಅಷ್ಟೇ ಲವಲವಿಕೆಯಿಂದ ಸಿನಿಮಾ ಮಾಡಿದ್ದಾರೆ ನಿರ್ದೇಶಕ ತಿಲಕ್‌.

ಈ ಸಿನಿಮಾವನ್ನು ಕನ್ನಡದ ನೇಟಿವಿಟಿಗೆ ತಕ್ಕಂತೆ ಅಚ್ಚುಕಟ್ಟಾಗಿ ತೆರೆಗೆ ತರಲಾಗಿದೆ. ಯಾವುದೇ ದೃಶ್ಯದಲ್ಲಿಯೂ ಬೋರ್‌ ಹೊಡೆಯುತ್ತದೆ ಎನ್ನುವಂತಿಲ್ಲ. ಕುಟುಂಬ ಸಮೇತ ಕೂತು ಸಿನಿಮಾವನ್ನು ನೋಡಬಹುದು.

ಕಥೆ ಎರಡು ಬೇರೆ ಬೇರೆ ಟ್ರ್ಯಾಕ್‌ಗಳಲ್ಲಿನಡೆಯುತ್ತದೆ. ಸಿನಿಮಾವೊಂದನ್ನು ನಿರ್ದೇಶನ ಮಾಡಬೇಕು ಎಂಬ ಕನಸಿರುವ ಯುವಕ ಶ್ರೀನಿವಾಸ್‌ (ರೂಪೇಶ್‌ ಶೆಟ್ಟಿ), ಜನಪ್ರಿಯ ನಟಿಯಾದ ಪದ್ಮಾವತಿ (ಭಾವನಾ ಮೆನನ್‌)ಗೆ ಕಥೆಯನ್ನುಹೇಳುವುದು ಒಂದು ಟ್ರ್ಯಾಕ್‌. ಕಾಲೇಜಿನ ಉಡಾಳ ಗುಂಪಿನದ್ದು ಮತ್ತೊಂದು ಟ್ರ್ಯಾಕ್‌. ಕಾಲೇಜು ಗುಂಪಿನಲ್ಲಿ ಸುಮಂತ್‌, ಕವಿತಾ ಗೌಡ, ಪವನ್‌, ವಿಜಯ್‌ ಚೆಂಡೂರ್‌ ಇದ್ದಾರೆ.

ಫಸ್ಟ್‌ ಹಾಫ್‌ನಲ್ಲಿ ಕಾಲೇಜು ಹುಡುಗರ ಆಟ, ಕವಿತಾ ಗೌಡ ಅವರ ಕಿಡ್ನಾಪ್‌ ಹೀಗೆ ವೇಗವಾಗಿ ಕಥೆ ಸಾಗುತ್ತದೆ. ಸೆಕೆಂಡ್‌ ಹಾಫ್‌ನಲ್ಲಿ ಸಿನಿಮಾದ ಕಥೆ ಬೇರೆಯದ್ದೇ ಲೆವೆಲ್‌ ನಲ್ಲಿ ನಡೆಯುತ್ತದೆ. ಅದರಲ್ಲೂ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಸಿಗುವ ಟ್ವಿಸ್ಟ್‌ ಪ್ರೇಕ್ಷಕನನ್ನು ಸೀಟಿನ ತುದಿಗೆ ಕರೆತರುತ್ತದೆ. ವಿಭಿನ್ನ ಶೈಲಿಯ ನಿರೂಪಣೆಯಿದಾಗಿ ಇಡೀ ಸಿನಿಮಾ ಎಂಗೇಜಿಂಗ್‌ ಎನಿಸುತ್ತದೆ.

ಓದುವ ವಯಸ್ಸಿನಲ್ಲಿ ಜವಬ್ದಾರಿ ಎಂಬುದನ್ನು ಬೆಳೆಸಿಕೊಳ್ಳಬೇಕು ಎಂಬಂತಹ ಸಂದೇಶವನ್ನು ಸಿನಿಮಾ ಹೇಳುತ್ತದೆ.

ಇಡೀ ಸಿನಿಮಾ ನಿಂತಿರುವುದು ಸಂಕಲನ ಮತ್ತು ಚಿತ್ರಕಥೆಯ ಮೇಲೆ. ಸಿನಿಮಾಟೋಗ್ರಫಿಯೂ ಇವೆರೆಡಕ್ಕೆ ಬೆನ್ನೆಲುಬಾಗಿ ನಿಂತಿದೆ. ಪ್ರದೀಪ್ ವರ್ಮ ಅವರ ಹಿನ್ನಲೆ ಸಂಗೀತ ಚಿತ್ರಕ್ಕೆ ಕಳೆ ಕಟ್ಟಿದಂತೆ. ಆದರೆ, ಹಿತನ್ ಅವರ ಸಂಗೀತದಲ್ಲಿ ಮೂಡಿಬಂದ ಹಾಡುಗಳಲ್ಲಿ ಕೇವಲ ಒಂದು ಹಾಡು ಇಷ್ಟವಾಗುತ್ತೆ.

ಸುಮಂತ್‌ ಶೈಲೇಂದ್ರ ನಟನೆ ಚೆನ್ನಾಗಿದೆ,. ಕಾಲೇಜು ಓದುವ ಹುಡುಗನಾಗಿ ಇಷ್ಟವಾಗುತ್ತಾರೆ.ಅವರ ಡಬ್ಬಿಂಗ್ ಸುಧಾರಿಸಿದೆ. ನಿರ್ದೇಶಕನಾಗಬೇಕು ಎಂಬ ಕನಸಿರುವ ಯುವಕನಾಗಿ ರೂಪೇಶ್‌ ಶೆಟ್ಟಿಯದ್ದು ಗಮನ ಸೆಳೆಯುವ ನಟನೆ. ತಮಗೆ ಸಿಕ್ಕಿರುವ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡಿರುವ ರೂಪೇಶ್‌ ಶೆಟ್ಟಿ ಸ್ಯಾಂಡಲ್‌ವುಡ್‌ ನ ಭರವಸೆಯ ನಟರಾಗುತ್ತಾರೆ. ಉಳದಿಂತೆ ಭಾವನಾ ಮೆನನ್‌ ಮತ್ತು ಕವಿತಾ ಗೌಡ ಚೆಂದವಾಗಿ ನಟಿಸಿದ್ದಾರೆ. ಪವನ್‌, ವಿಜಯ್‌ ಚೆಂಡೂರ್‌, ಶೋಭ್‌ರಾಜ್‌, ಅಚ್ಯುತ್‌ ಸೇರಿದಂತೆ ಎಲ್ಲರೂ ಕಥೆಯ ಜತೆಗೆ ಪ್ರಯಾಣ ಮಾಡಿದ್ದಾರೆ.

ಮನೆ ಮಂದಿ ಎಲ್ಲರೂ ಕೂತು ನೋಡುವಂತಹ ಫ್ಯಾಮಿಲಿ ಎಂಟರ್‌ಟೇನರ್‌ ಸಿನಿಮಾವಾಗಿ ಗೋವಿಂದ ಗೋವಿಂದ ನಿಲ್ಲುತ್ತದೆ.

ರೇಟಿಂಗ್‌: 3.5/5


Digiqole ad

Sunil H C

Leave a Reply