ಕನ್ನಡದಲ್ಲಿ ಸಿದ್ಧವಾಗಿದೆ ವಿಶೇಷವಾದ ‘ಅಘೋರ’ ಸಿನಿಮಾ

 ಕನ್ನಡದಲ್ಲಿ ಸಿದ್ಧವಾಗಿದೆ ವಿಶೇಷವಾದ ‘ಅಘೋರ’ ಸಿನಿಮಾ


ಸ್ಯಾಂಡಲ್ ವುಡ್ ನಲ್ಲಿ ಈಗಾಗಲೇ ಹಾರರ್, ಮಾದರಿಯ ಸಸ್ಪೆನ್ಸ್, ಥ್ರಿಲ್ಲರ್, ಬ್ಲ್ಯಾಕ್ ಮ್ಯಾಜಿಕ್ ಮುಂತಾದ ಕಥೆ ಒಳಗೊಂಡ ಸಾಕಷ್ಟು ಸಿನಿಮಾಗಳು ಬಂದು ಹೋಗಿದ್ದು, ಇದೀಗ ಈ ಎಲ್ಲಕ್ಕಿಂತ ವಿಭಿನ್ನವಾದ ಸಿನಿಮಾವೊಂದು ಸದ್ದಿಲ್ಲದೆ ಸಿದ್ದವಾಗಿದೆ. ಹೌದು ಈ ವಿಶ್ವವು ನಮಗೆ ಭೂಮಿ, ಗಾಳಿ, ಬೆಂಕಿ, ನೀರು, ಆಕಾಶ ನೀಡಿದೆ. ಪ್ರಕೃತಿಯು ಪ್ರತಿ ಸಮಯ ಮತ್ತು ಋತುಗಳಲ್ಲಿ ತನ್ನದೇ ಆದ ಕೆಲವು ಬದಲಾವಣೆಗಳನ್ನು ನೀಡುತ್ತದೆ. ಆದರೆ ಈ ಪ್ರಕೃತಿಯ ಸೃಷ್ಟಿಕರ್ತ ಯಾರು ಮತ್ತು ರಕ್ಷಕ ಯಾರು? ಹಾಗೆಯೇ ಹಿಂತಿರುಗುವ ಶಕ್ತಿ ಮತ್ತು ಶಕ್ತಿಯನ್ನು ಉತ್ಪಾದಿಸುವ ಪ್ರತಿಯೊಂದು ಕ್ರಿಯೆಯನ್ನು ಗಣನೆಗೆ ತೆಗೆದುಕೊಳ್ಳುವವರು ಯಾರು? ಎಂಬ ಆಲೋಚನೆಗಳ ಮೇಲೆ ಸಿದ್ಧವಾಗಿರುವ ಸಿನಿಮಾವೇ ‘ಅಘೋರ’.

ಕನ್ನಡಕ್ಕೆ ಅಘೋರ ವಿಶೇಷವಾದ ಸಿನಿಮಾ ಎನ್ನಬಹುದು. ಯಾಕೆ ಅಂತಿರಾ? ಇದರಲ್ಲಿ ನಾವು ದೇವರೆಂದು ಕರೆಯುವ ಅದೃಶ್ಯ ಶಕ್ತಿಯನ್ನು ಅರ್ಥಮಾಡಿಕೊಳ್ಳಬಹುದಾ! ಎಂಬ ಅಂಶಗಳ ಮೇಲೆ ಬೆಳಕು ಚೆಲ್ಲಲಾಗಿದೆ. ಈ ಚಿತ್ರದಲ್ಲಿ ಆಕಾಶ, ಭೂಮಿ, ಪ್ರಕೃತಿ, ಅಗ್ನಿ ಪಾತ್ರಗಳಾಗಿ ಐದು ಅಂಶಗಳನ್ನು ತಮ್ಮದೇ ಆದ ವ್ಯಕ್ತಿತ್ವವುಳ್ಳ, ಪ್ರಕೃತಿಯ ಪರಸ್ಪರ ಅವಲಂಬನೆಯ ಕಥೆಯನ್ನು ಹೆಣೆಯಲಾಗಿದೆ. ನಾವು ಪ್ರಕೃತಿಯೊಂದಿಗೆ ಏಕೆ ಬದುಕಬೇಕು ಮತ್ತು ಸಾವು ಏಕೆ ಅನಿವಾರ್ಯ. ಸಾವು ಯಾರಿಂದ, ಯಾವಾಗ, ಹೇಗೆ ಬರುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಆದರೆ ನಾವು ಎಷ್ಟೇ ಪ್ರಯತ್ನಿಸಿದರೂ ಅದು ನಮ್ಮ ಕರ್ಮದಿಂದ ಈಗಾಗಲೇ ನಿರ್ಧರಿಸಲ್ಪಟ್ಟಿದೆ. ಅದು ಕರ್ಮದ ರೀತಿಯಲ್ಲಿ ಸಂಭವಿಸುತ್ತದೆ. ಹೇಗೆ, ಯಾವಾಗ ಮತ್ತು ಏಕೆ ಎಲ್ಲವೂ ನಮ್ಮ ಕರ್ಮದ (ಮಾಡುವ) ಪ್ರತಿಕ್ರಿಯೆಯಾಗಿದೆ.


ಇದಕ್ಕೆ ಒಂದು ಸಣ್ಣ ಉದಾಹರಣೆ ಎಂದರೆ! ‘ರಾಮಾಯಣದಲ್ಲಿ ಶ್ರೀರಾಮನು ವಂಚನೆಯ ಮೂಲಕ ವಾಲಿಯನ್ನು ಕೊಲ್ಲುತ್ತಾನೆ ಮತ್ತು ಮಹಾಭಾರತದ ಸಮಯದಲ್ಲಿ ಶ್ರೀರಾಮನು ಕೃಷ್ಣನಾಗಿ ಮರುಜನ್ಮ ಪಡೆದಾಗ ವಾಲಿ ಬೇಡನಾಗಿ ಹುಟ್ಟಿ ಶ್ರೀಕೃಷ್ಣನನ್ನೆ ಅಂತ್ಯಗೋಳಿಸುತ್ತಾನೆ.’ ದೇವರಾಗಲಿ ಅಥವಾ ಮನುಷ್ಯನಾಗಲಿ, ಕಾಲ (ಕರ್ಮ) ಯಾರನ್ನು ಬಿಡುವುದಿಲ್ಲ ಎಂಬುದು ಈ ಚಿತ್ರದ ಕಥಾ ಸಾರಾಂಶ.

ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಹಿರಿಯ ನಟ ಅವಿನಾಶ್ ಅಘೋರಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದ ತಾರಾಗಣದಲ್ಲಿ ಅಶೋಕ್, ಪುನೀತ್ ಗೌಡ, ರಚನಾ, ದ್ರವ್ಯ ಶೆಟ್ಟಿ ಇದ್ದು, ಈ ಚಿತ್ರವನ್ನು ಪ್ರಮೋದ್ ರಾಜ್ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಕವಿರತ್ನ ನಾಗೇಂದ್ರ ಪ್ರಸಾದ್ ಸಂಗೀತವಿದೆ.

ಇತ್ತೀಚೆಗೆ ಬಿಡುಗಡೆಗೊಂಡ ಚಿತ್ರದ ಟ್ರೇಲರ್ ಗೆ ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿದ್ದು, ಚಿತ್ರ ಶೀಘ್ರದಲ್ಲೇ ತೆರೆಗೆ ಬರಲಿದೆ. ಪುನೀತ್ ಗೌಡ ಅವರು ಈ ಚಿತ್ರವನ್ನು ಮೋಕ್ಷ ಸಿನಿಮಾಸ್ ಬ್ಯಾನರ್ ಮೂಲಕ ನಿರ್ಮಿಸಿದ್ದಾರೆ.


Digiqole ad

Sunil H C

Leave a Reply