ಫೆಬ್ರವರಿ 25ಕ್ಕೆ ಥಿಯೇಟರ್‌ಗೆ ಬರುತ್ತಿದ್ದಾನೆ ಅಘೋರ. ರಿಲೀಸ್‌ಗೆ ಸಾಥ್ ನೀಡಿದ ಕೆ.ಆರ್.ಜಿ ಸ್ಟುಡಿಯೋ

 ಫೆಬ್ರವರಿ 25ಕ್ಕೆ ಥಿಯೇಟರ್‌ಗೆ ಬರುತ್ತಿದ್ದಾನೆ ಅಘೋರ.  ರಿಲೀಸ್‌ಗೆ ಸಾಥ್ ನೀಡಿದ ಕೆ.ಆರ್.ಜಿ ಸ್ಟುಡಿಯೋ

ಈಗಾಗಲೇ ೧೬ಕ್ಕೂ ಹೆಚ್ಚು ಅಂತರಾಷ್ಟಿçÃಯ ಫಿಲ್ಮ ಫೆಸ್ಟಿವಲ್ ಗಳಲ್ಲಿ ಪ್ರದರ್ಶನ ಕಂಡು ೩೨ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ‘ಅಘೋರ’ ಎಂಬ ಸಿನಿಮಾ ಇದೀಗ ಥಿಯೇಟರ್‌ನಲ್ಲಿ ಬಿಡುಗಡೆಯಾಗಲು ತಯಾರಾಗಿದೆ. ಚಿತ್ರ ಇದೇ ಫೆಬ್ರವರಿ ೨೫ರಂದು ರಾಜ್ಯಾದ್ಯಂತ ಕೆ.ಆರ್.ಜಿ ಸ್ಟುಡಿಯೋ ಮುಖೇನ ತೆರೆಗೆ ಬರಲಿದೆ. ಈಗಾಗಲೇ ಟ್ರೇಲರ್‌ನಿಂದ ಕುತೂಹಲ ಮೂಡಿಸಿರುವ ಈ ಚಿತ್ರವನ್ನು ಕೆ.ಆರ್.ಜಿ ಸ್ಟುಡಿಯೋನ ಕಾರ್ತಿಕ್ ಗೌಡ ಯೋಗಿ ಜಿ ರಾಜ್ ವಿತರಣೆ ಮಾಡುತ್ತಿರುವುದು ತಂಡಕ್ಕೆ ಹೊಸ ಚೈತನ್ಯ ತುಂಬಿದೆ. ಚಂದನವನದಲ್ಲಿ ಸಾಕಷ್ಟು ಹಾರರ್, ಸಸ್ಪೆನ್ಸ್, ಥ್ರಿಲ್ಲರ್, ಬ್ಲ್ಯಾಕ್ ಮ್ಯಾಜಿಕ್ ಸಿನಿಮಾಗಳು ಬಂದಿರಬಹುದು ಆದರೆ, ಅಘೋರ ಆ ಎಲ್ಲಾ ಸಿನಿಮಾಗಳಿಗಿಂತ ವಿಭಿನ್ನ ಎನ್ನಬಹುದು. ಹೌದು ಈ ವಿಶ್ವವು ನಮಗೆ ಭೂಮಿ, ಗಾಳಿ, ಬೆಂಕಿ, ನೀರು, ಆಕಾಶ ನೀಡಿದೆ. ಪ್ರಕೃತಿಯು ಪ್ರತಿ ಸಮಯ ಮತ್ತು ಋತುಗಳಲ್ಲಿ ತನ್ನದೇ ಆದ ಕೆಲವು ಬದಲಾವಣೆಗಳನ್ನು ನೀಡುತ್ತದೆ. ಆದರೆ ಈ ಪ್ರಕೃತಿಯ ಸೃಷ್ಟಿಕರ್ತ ಯಾರು ಮತ್ತು ರಕ್ಷಕ ಯಾರು? ಹಾಗೆಯೇ ಹಿಂತಿರುಗುವ ಶಕ್ತಿ ಮತ್ತು ಶಕ್ತಿಯನ್ನು ಉತ್ಪಾದಿಸುವ ಪ್ರತಿಯೊಂದು ಕ್ರಿಯೆಯನ್ನು ಗಣನೆಗೆ ತೆಗೆದುಕೊಳ್ಳುವವರು ಯಾರು? ಎಂಬ ಆಲೋಚನೆಗಳ ಮೇಲೆ ಸಿದ್ಧವಾಗಿರುವ ಸಿನಿಮಾವೇ ‘ಅಘೋರ’.


ಕನ್ನಡಕ್ಕೆ ಅಘೋರ ವಿಶೇಷವಾದ ಸಿನಿಮಾ ಎನ್ನಬಹುದು. ಯಾಕೆ ಅಂತಿರಾ? ಇದರಲ್ಲಿ ನಾವು ದೇವರೆಂದು ಕರೆಯುವ ಅದೃಶ್ಯ ಶಕ್ತಿಯನ್ನು ಅರ್ಥಮಾಡಿಕೊಳ್ಳಬಹುದಾ! ಎಂಬ ಅಂಶಗಳ ಮೇಲೆ ಬೆಳಕು ಚೆಲ್ಲಲಾಗಿದೆ. ಈ ಚಿತ್ರದಲ್ಲಿ ಆಕಾಶ, ಭೂಮಿ, ಪ್ರಕೃತಿ, ಅಗ್ನಿ ಪಾತ್ರಗಳಾಗಿ ಐದು ಅಂಶಗಳನ್ನು ತಮ್ಮದೇ ಆದ ವ್ಯಕ್ತಿತ್ವವುಳ್ಳ, ಪ್ರಕೃತಿಯ ಪರಸ್ಪರ ಅವಲಂಬನೆಯ ಕಥೆಯನ್ನು ಹೆಣೆಯಲಾಗಿದೆ. ನಾವು ಪ್ರಕೃತಿಯೊಂದಿಗೆ ಏಕೆ ಬದುಕಬೇಕು ಮತ್ತು ಸಾವು ಏಕೆ ಅನಿವಾರ್ಯ. ಸಾವು ಯಾರಿಂದ, ಯಾವಾಗ, ಹೇಗೆ ಬರುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಆದರೆ ನಾವು ಎಷ್ಟೇ ಪ್ರಯತ್ನಿಸಿದರೂ ಅದು ನಮ್ಮ ಕರ್ಮದಿಂದ ಈಗಾಗಲೇ ನಿರ್ಧರಿಸಲ್ಪಟ್ಟಿದೆ. ಅದು ಕರ್ಮದ ರೀತಿಯಲ್ಲಿ ಸಂಭವಿಸುತ್ತದೆ ಎಂಬ ಅಂಶಗಳ ಮೇಲೆ ಸಿನಿಮಾ ತಯಾರಾಗಿದೆ.

ಮೋಕ್ಷ ಸಿನಿಮಾಸ್ ಬ್ಯಾನರ್ ಮುಖೇನ ನಿರ್ಮಾಣವಾಗಿರುವ ಅಘೋರಕ್ಕೆ ಪುನೀತ್ ಎಮ್ ಎನ್ ಬಂಡವಾಳ ಹೂಡಿದ್ದಾರೆ. ಚಿತ್ರವನ್ನು ಪ್ರಮೋದ್ ರಾಜ್ ಎಂಬ ಪ್ರತಿಭೆ ನಿರ್ದೇಶಿಸಿದ್ದು, ಇವರು ಈ ಮೊದಲು ಕನ್ನಡದ ಸಾಕಷ್ಟು ಸಿನಿಮಾಗಳಿಗೆ ನೃತ್ಯ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಚಿತ್ರಕ್ಕೆ ಶರತ್ ಜಿ ಕುಮಾರ್ ಛಾಯಾಗ್ರಹಣ, ಡಾಕ್ಟರ್ ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಸಂಗೀತ, ವೆಂಕಟೇಶ್ ಯುಡಿವಿ ಸಂಕಲನವಿದೆ. ಪ್ರಮುಖ ಪಾತ್ರದಲ್ಲಿ ಹಿರಿಯ ನಟ ಅವಿನಾಶ್ ಅಘೋರಿಯಾಗಿ ಕಾಣಿಸಿಕೊಂಡಿದ್ದು, ಉಳಿದ ತಾರಾಗಣದಲ್ಲಿ ಅಶೋಕ ಶರ್ಮ, ಪುನೀತ್ ಗೌಡ, ರಚನಾ ದಶರಥ, ದೃವ್ಯಾ ಶೆಟ್ಟಿ ಮುಂತಾದವರು ಇದ್ದಾರೆ.


Digiqole ad

Sunil H C

Leave a Reply