ಪರಂವಃ ಸ್ಪಾಟ್ಲೈಟ್ ನಿರ್ಮಾಣದ ಮೊದಲ ಚಿತ್ರ ‘ಸ್ಟ್ರಾಬೆರಿ’

 ಪರಂವಃ ಸ್ಪಾಟ್ಲೈಟ್ ನಿರ್ಮಾಣದ ಮೊದಲ ಚಿತ್ರ ‘ಸ್ಟ್ರಾಬೆರಿ’

ಶ್ರುತಿ ಹರಿಹರನ್ ಅಭಿನಯದ “ಸ್ಟ್ರಾಬೆರಿ” ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ.


ತಾಯಿ ಪ್ರೀತಿಯನ್ನು ಕಳೆದುಕೊಂಡ ಅಮೃತಾ ಅನ್ನುವ ಲೈಂಗಿಕ ಕಾರ್ಯಕರ್ತೆಯೊಬ್ಬಳು ಮತ್ತೊಮ್ಮೆ ಅಂಥ ಪ್ರೀತಿಯ ಭರವಸೆ ಸಿಕ್ಕಾಗ ಕಡಲನ್ನು ಸೇರಲು ಹೊರಟ ನದಿಯಂತೆ ಹೊರಡುವ ಕಥೆಯೇ ‘ಸ್ಟ್ರಾಬೆರಿ’.

ಶ್ರುತಿ ಹರಿಹರನ್ ಅವರು ಅಮೃತಾ ಅನ್ನುವ ಲೈಂಗಿಕ ಕಾರ್ಯಕರ್ತೆಯ ಪಾತ್ರವನ್ನು ನಿಭಾಯಿಸಿದರೆ ದಿಯಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ಮತ್ತು ಒಂದು ಮೊಟ್ಟೆಯ ಕಥೆ, ಬೀರ್ ಬಲ್ ಮತ್ತು ಗರುಡ ಗಮನ ವೃಷಭ ವಾಹನ ಚಿತ್ರಗಳಲ್ಲಿ ನಟಿಸಿರುವ ವಿನೀತ್ ಕುಮಾರ್ ಮತ್ತೆರಡು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮಂಗಳೂರಿನ ರಂಗಭೂಮಿಯಲ್ಲಿ ಪಳಗಿರುವ ವಿಜಯ್ ಮಯ್ಯ ಮತ್ತೊಂದು ವಿಶೇಷವಾದ ಜಾರ್ಜ್ ಎಂಬ ಪಾತ್ರದಲ್ಲಿ ನಟಿಸಿದ್ದಾರೆ.

ರಿವರ್ಸ್ ಸ್ಕ್ರೀನ್ ಪ್ಲೇನಲ್ಲಿ ಸಾಗುವ ಚಿತ್ರವನ್ನು ಅರ್ಜುನ್ ಲೂವಿಸ್ ಬರೆದು ನಿರ್ದೇಶಿಸಿದ್ದಾರೆ. ಸ್ವತಂತ್ರ ನಿರ್ದೇಶಕನಾಗಿ ಇದು ಇವರ ಚೊಚ್ಚಲ ಸಿನೆಮಾ.

ರಕ್ಷಿತ್ ಶೆಟ್ಟಿ ನಿರ್ಮಾಣದಲ್ಲಿ ಪರಂವಃ ಸ್ಪಾಟ್ಲೈಟ್ ಬ್ಯಾನರ್ ನ ಮೊದಲ ಸಿನೆಮಾ ಸ್ಟ್ರಾಬೆರಿ.

ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಕೊನೆಯ ಹಂತದಲ್ಲಿದ್ದು ಜೋಯೆಲ್ ಶಮನ್ ಡಿಸೋಜಾ ಛಾಯಾಗ್ರಹಣ, ಪ್ರಸಾದ್ ಕೆ ಶೆಟ್ಟಿ ಸಂಗೀತ, ರಾಹುಲ್ ವಸಿಷ್ಠ ಸಂಕಲನವಿದೆ.


Digiqole ad

Sunil H C

Leave a Reply