ಅಘೋರ – ಚಿತ್ರ ವಿಮರ್ಶೆ – ಸಿನಿಲೋಕ

 ಅಘೋರ – ಚಿತ್ರ ವಿಮರ್ಶೆ – ಸಿನಿಲೋಕ

ಚಿತ್ರ: ಅಘೋರ
ನಿರ್ದೇಶನ:ಎನ್‌ ಎಸ್‌ ಪ್ರಮೋದ್‌ ರಾಜ್‌
ನಿರ್ಮಾಣ: ಮೋಕ್ಷ ಸಿನಿಮಾಸ್‌
ಸಂಗೀತ: ವಿ ನಾಗೇಂದ್ರ ಪ್ರಸಾದ್‌
ಸಿನಿಮಾಟೋಗ್ರಫಿ: ಶರತ್‌ ಜಿ ಕುಮಾರ್‌
ಕಲಾವಿದರು: ಪುನೀತ್‌ ಗೌಡ,ದಿವ್ಯಾ ಶೆಟ್ಟಿ, ರಚನಾ ದಶರಥ್‌, ಅವಿನಾಶ್‌, ಅಶೋಕ್‌ ರಾಜ್‌ ಮತ್ತಿತರರು.


ಹಾರರ್‌ ಸಿನಿಮಾಗಳಲ್ಲಿ ಜನರನ್ನು ಬೆಚ್ಚಿ ಬೀಳಿಸಬೇಕು, ಸೀಟಿನ ತುದಿಗೆ ತರುವಂತಹ ದೃಶ್ಯಗಳನ್ನು ಕಟ್ಟಿಕೊಡಬೇಕು. ಆ ನಿಟ್ಟಿನಲ್ಲಿ ಈ ವಾರ ಬಿಡುಗಡೆಯಾಗಿರುವ ಅಘೋರ ಸಿನಿಮಾ ಪ್ರೇಕ್ಷಕರನ್ನು ಚಿತ್ರಮಂದಿರದಲ್ಲಿ ಹೆದರಿಸುವಲ್ಲಿ ತಕ್ಕ ಮಟ್ಟಿಗೆ ಗೆದ್ದಿದ್ದಾರೆ.

ನಾಯಕ ಆಕಾಶ್‌ (ಪುನೀತ್‌ ಗೌಡ) ಆತನ ಪತ್ನಿ ಪ್ರಕೃತಿ (ದಿವ್ಯಾ ಶೆಟ್ಟಿ) , ತಂಗಿ ಭೂಮಿ (ರಚನಾ ದಶರಥ್‌) ಮತ್ತು ಅಗ್ನಿ (ಅಶೋಕ್‌ ರಾಜ್‌] ಎಂಬ ಪಾತ್ರಗಳ ಸುತ್ತ ಸುತ್ತುವ ಈ ಕಥೆಯಲ್ಲಿ ಹಲವು ತಿರುವುಗಳು ಬರುತ್ತದೆ. ಪ್ರಕೃತಿಯಲ್ಲಿ ದೇವರು ಇದ್ದಾನೆ ದೆವ್ವವೂ ಇದೆ. ಅವುಗಳ ಅಸ್ತಿತ್ವದ ಬಗ್ಗೆ ಅಸಡ್ಡೆ ತೋರಲು ಹೋಗಬಾರದು. ಇಂತಹ ಅಸಡ್ಡೆಯಿಂದ ಸಮಸ್ಯೆಗಳು ಮನೆಯವರೆಗೂ ಹುಡುಕಿಕೊಂಡು ಬರುತ್ತವೆ ಎಂಬುದನ್ನು ನಿರ್ದೇಶಕ ಪ್ರಮೋದ್‌ ರಾಜ್‌ ವಿಭಿನ್ನವಾಗಿ ತೋರಿಸುವ ಪ್ರಯತ್ನ ಮಾಡಿದ್ದಾರೆ.

ಎಲ್ಲಾ ಹಾರರ್‌ ಸಿನಿಮಾಗಳನ್ನು ಜನ ಇಷ್ಟಪಡುವುದಿಲ್ಲ. ಅದರಲ್ಲೊಂದು ಕಥೆ ಇರಬೇಕು, ಅದಕ್ಕೆ ತಕ್ಕಂತಹ ಥ್ರಿಲ್ಲರ್‌ ಅಂಶಗಳು ಇರಬೇಕು. ಈ ಸಿನಿಮಾದಲ್ಲಿ ಅದೆಲ್ಲವೂ ಇದೆ. ಸಿನಿಮಾದ ನಾಲ್ಕು ಪ್ರಮುಖ ಪಾತ್ರಗಳು ಹೇಗೆ ಸಮಸ್ಯೆಗೆ ಸಿಲುಕಿಕೊಳ್ಳುತ್ತಾರೆ, ಅದರಿಂದ ಹೊರಬರಲು ಅವರು ಪಡುವ ಪಾಡು ನೋಡುಗನನ್ನು ಗಮನ ಸೆಳಯುತ್ತದೆ. ಲಾಜಿಕ್ ಹುಡುಕದೆ ಹೋದರೆ ಸಿನಿಮಾ ಅಲ್ಲಲ್ಲಿ ಖುಷಿ ಕೊಡುತ್ತದೆ.

ನಾಯಕ ಪುನೀತ್‌ ಗೌಡ ಮೊದಲ ಬಾರಿಗೆ ನಟಿಸಿದ್ದರೂ, ತನ್ನ ಕೆಲಸವನ್ನು ಅಚ್ಚುಕಟ್ಟಾಗಿಸಿದ್ದಾರೆ. ದೆವ್ವದ ಕಾಟಕ್ಕೆ ಸಿಲುಕಿ ಕಷ್ಟ ಅನುಭವಿಸುವ ಪಾತ್ರದಲ್ಲಿ ನಾಯಕಿಯರಾದ ದಿವ್ಯಾ ಶೆಟ್ಟಿ, ರಚನಾ ದಶರಥ್‌ ಅಭಿನಯ ಇಷ್ಟವಾಗುತ್ತದೆ. ಹಾಸ್ಯ ನಟನೆ ಮೂಲಕ ಪರಿಚಯವಾಗಿದ್ದ ಅಶೋಕ್‌ ರಾಜ್‌ ಈ ಚಿತ್ರದಲ್ಲಿನ ತಮ್ಮ ಪಾತ್ರದ ಮೂಲಕ ಜನರನ್ನು ಅಚ್ಚರಿ ಗೊಳಿಸುತ್ತಾರೆ. ಹಿರಿಯ ನಟ ಅವಿನಾಶ್‌ ನಟನೆ ಗಂಭೀರವಾಗಿದೆ.

ಮಾಮೂಲಿ ದೆವ್ವದ ಚಿತ್ರಗಳ ಸೂತ್ರವನ್ನೆ ಬಳಸಿ ಪ್ರೇಕ್ಷಕರನ್ನು ಹೆದರಿಸಲು ಪ್ರಯತ್ನಿಸಿದ್ದಾರೆ ನಿರ್ದೇಶಕರು. ನಿರ್ದೇಶಕರ ಈ ಪ್ರಯತ್ನಕ್ಕೆ ಸಂಗೀತ ನಿರ್ದೇಶಕ, ಸಿನಿಮಾಟೋಗ್ರಫರ್‌ ಕೆಲಸಗಳು ಸಾಥ್‌ ನೀಡಿದ್ದಾರೆ. ಸಿನಿಮಾದ ಮೇಕಪ್ ವಿಚಾರದಲ್ಲಿ ಇನ್ನೂ ಗಮನಹರಿಸಬಹುದಿತ್ತು. ಕೆಲವು ಕಡೆ ಕಂಟಿನ್ಯೂಟಿ ಮಿಸ್ ಹೊಡಿಯತ್ತೆ.

ಒಟ್ಟಾರೆ ಹಾರರ್‌ ಕಂಟೆಂಟ್‌ ಅನ್ನು ಸಿಕ್ಕಾಪಟ್ಟೆ ಇಷ್ಟಪಡುವವರು ಮತ್ತು ಹಾರರ್‌ ಸಿನಿಮಾ ಹೇಗಿರುತ್ತದೆ ಎಂದು ತಿಳಿದುಕೊಳ್ಳಲು ಆಸಕ್ತಿ ಇರುವವರು ‘ಅಘೋರ’ವನ್ನು ನೋಡಲು ಚಿತ್ರಮಂದಿರಕ್ಕೆ ಭೇಟಿ ನೀಡಬಹುದು.

ರೇಟಿಂಗ್‌: 3/5
 


Digiqole ad

Sunil H C

Leave a Reply