ಡಿಯರ್ ಸತ್ಯ ಚಿತ್ರ ವಿಮರ್ಶೆ – ಸಿನಿಲೋಕ

 ಡಿಯರ್ ಸತ್ಯ ಚಿತ್ರ ವಿಮರ್ಶೆ – ಸಿನಿಲೋಕ

ಚಿತ್ರ: ಡಿಯರ್‌ ಸತ್ಯ
ನಿರ್ದೇಶನ: ಶಿವಗಣೇಶನ್‌
ನಿರ್ಮಾಣ: ಪರ್ಪರಾಕ್‌ ಎಂಟರ್‌ಟೇನರ್ಸ್‌
ಸಂಗೀತ: ಶ್ರೀಧರ್‌ ಸಂಭ್ರಮ್‌
ಸಿನಿಮಾಟೋಗ್ರಫಿ: ವಿನೋದ ಭಾರತಿ
ಕಲಾವಿದರು: ಆರ್ಯನ್‌ ಸಂತೋಷ್‌, ಆರ್ಚನಾ ಕೊಟ್ಟಿಗೆ, ಅರುಣಾ ಬಾಲರಾಜ್‌, ಅಶ್ವಿನ್‌ ರಾವ್‌ ಪಲ್ಲಕ್ಕಿ, ಅರವಿಂದ್‌, ಗುರುರಾಜ್‌ ಹೊಸಕೋಟೆ ಮತ್ತಿತರರು.


ರಿವೇಂಜ್‌ ಕಥೆಯಲ್ಲಿ ಸತ್ಯನ ಹುಡುಕಾಟ
 
ಸತ್ಯ ಎಂಬ ಹೆಸರು ಓಂ ಸಿನಿಮಾ ಬಿಡುಗಡೆಯಾದ ನಂತರದಿಂದ ಸ್ಯಾಂಡಲ್ವುಡ್‌ನಲ್ಲಿ ಜನಜನಿತವಾದ ಪಾತ್ರ. ಇದೊಂದೆ ಹೆಸರಿನ ಮೇಲೆ ಹಲವು ಸಿನಿಮಾಗಳು ಮೂಡಿ ಬಂದಿವೆ. ಈ ವಾರ ಬಿಡುಗಡೆಯಾಗಿರುವ ‘ಡಿಯರ್‌ ಸತ್ಯ’ ಸಹ ಅದೇ ಸಾಲಿಗೆ ಸೇರ್ಪಡೆಯಾಗಿದೆ.


ಈ ಡಿಯರ್‌ ಸತ್ಯದಲ್ಲಿ ಕಥೆಗಿಂತಲೂ ನಿರ್ದೇಶಕರು ಚಿತ್ರಕಥೆಯ ಮೇಲೆ ಕೆಲಸ ಮಾಡಿದ್ದಾರೆ. ಒಂದು ಸಾಮಾನ್ಯ ರಿವೇಂಜ್‌ ಕಥೆಯನ್ನು ನಾನ್‌ ಲಿನಿಯರ್‌ ಸ್ಕ್ರೀನ್‌ ಪ್ಲೇ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ. ಈ ರೀತಿ ಹೇಳುವಾಗ ಅಲ್ಲಲ್ಲಿ ಪ್ರಯಾಸ ಪಟ್ಟಿರುವುದು ಎದ್ದು ಕಾಣುತ್ತದೆ.
ತನ್ನವರನ್ನು ಕಳೆದುಕೊಂಡು ಜೈಲಿನಲ್ಲಿದ್ದ ಸತ್ಯ ಹೊರಗಡೆ ಬಂದು ಸೇಡು ತೀರಿಸಿಕೊಳ್ಳುವುದೇ ಕಥೆ. ಈ ಸೇಡು ತೀರಿಸಿಕೊಳ್ಳವ ಪ್ರಯಾಣದಲ್ಲಿ ಪ್ರೇಕ್ಷಕನಿಗೆ ವಿಭಿನ್ನ ಅನುಭವ ನೀಡುವ ಸಲುವಾಗಿ ನಿರ್ದೇಶಕ ಶಿವಗಣೇಶನ್‌ ಹೊಸ ರೀತಿಯ ಚಿತ್ರಕಥೆಯನ್ನು ತೋರಿಸುವ ಪ್ರಯತ್ನ ಮಾಡಿದ್ದಾರೆ.


ಫುಡ್‌ ಡೆಲವರಿ ಮಾಡುವಂತಹ ಯೂನಿಫಾರ್ಮ್‌ ಧರಿಸಿ ಸರಗಳ್ಳತನದಿಂದ ಆರಂಭವಾಗುವ ಸಿನಿಮಾದಲ್ಲಿ ಈ ಸರಗಳ್ಳತನದಿಂದ ಸಾಮಾನ್ಯರಿಗೆ ಆಗುವ ತೊಂದರೆಯ ಬಗ್ಗೆಯೂ ನಿರ್ದೇಶಕರು ಹೇಳಿದ್ದಾರೆ. ತಪ್ಪು ಮಾಡಿದವನು ಎಲ್ಲರ ಕಣ್ಣಿಂದ ಬಚವಾಗಬಹುದು. ಆದರೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಕ್ಲೈಮ್ಯಾಕ್ಸ್‌ನಲ್ಲಿ ನಿರ್ದೇಶಕರು ಸೂಚ್ಯಕವಾಗಿ ಹೇಳಿದ್ದಾರೆ. ವಿಶೇಷ ಎಂದರೆ ಸಿನಿಮಾದ ಕ್ಲೈಮ್ಯಾಕ್ಸ್‌ ಸಿನಿಮಾದ ಹೈಲೈಟ್‌ಗಳಲ್ಲಿ ಒಂದು.

 
ನಾಯಕ ಆರ್ಯನ್‌ ಸಂತೋಷ್‌ ತಮಗೆ ಸಿಕ್ಕಿರುವ ಅವಕಾಶವನ್ನು ಬಹಳ ಚೆನ್ನಾಗಿ ಬಳಸಿಕೊಂಡಿದ್ದು, ಗಮನ ಸೆಳೆಯುವ ನಟನೆ ಮಾಡಿದ್ದಾರೆ. ಆರ್ಚನಾ ಕೊಟ್ಟಿಗೆಗೆ ನಟನೆಗೆ ಅಷ್ಟು ಅವಕಾಶವಿಲ್ಲ ಆದರೂ ತಮಗೆ ಸಿಕ್ಕಿದ್ದನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಅಶ್ವಿನ್‌ ರಾವ್‌ ಪಲ್ಲಕ್ಕಿ, ಅರುಣಾ ಬಾಲರಾಜ್‌, ಅವರದ್ದು ಎಂದಿನ ನಟನೆ. ಅರವಿಂದ್‌ ಅವರದ್ದು ತಮ್ಮ ಧ್ವನಿಯಷ್ಟೇ ಖಡಕ್‌ ಅಭಿನಯ. ಶ್ರೀಧರ್‌ ಸಂಭ್ರಮ್‌ ಸಂಗೀತದಲ್ಲಿ ಉಪೇಂದ್ರ ಹಾಡಿರುವ ಹಾಡು ಗಮನ ಸೆಳೆಯುತ್ತದೆ. ಸಿನಿಮಾಟೋಗ್ರಫರ್‌ ವಿನೋದ ಭಾರತಿಯವರ ಕೆಲಸ ನಿರ್ದೇಶಕರ ಕಥೆಗೆ ತಕ್ಕಂತೆ ಇದೆ.

ನಾಯಕ ನಟ ಸಂತೋಷ್‌ರನ್ನು ಉಳಿದ ಚಿತ್ರಗಳಿಗಿಂತಲೂ ಬಹಳ ಚೆನ್ನಾಗಿ ಈ ಚಿತ್ರದಲ್ಲಿ ತೋರಿಸಲಾಗಿದೆ. ಕೆಲ ತಪ್ಪು ಒಪ್ಪುಗಳನ್ನು ಮನ್ನಿಸಿದರೆ ಇದು  ಮಾಸ್‌ ಎಂಟರ್‌ಟೇನರ್‌ ಆಗಿ ನಿಲ್ಲುತ್ತದೆ. 

ರೇಟಿಂಗ್ – 3/5


Digiqole ad

Sunil H C

Leave a Reply