ಓ ಮೈ ಲವ್-ಚಿತ್ರ ವಿಮರ್ಶೆ -ಸಿನಿಲೋಕ

 ಓ ಮೈ ಲವ್-ಚಿತ್ರ ವಿಮರ್ಶೆ -ಸಿನಿಲೋಕ


ಉತ್ತಮ ಸ್ನೇಹಿತರ ಮಧ್ಯೆ ಸಹೋದರಿಯ ಪ್ರೇಮ ಎಂಟ್ರಿ ಪಡೆದರೆ ಸ್ನೇಹ ಏನಾಗುತ್ತೆ ಅನ್ನೋದಕ್ಕೆ ಈಗಾಗ್ಲೆ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಸಿನಿಮಾಗಳು ಬಂದಿವೆ. ಅದೇ ಕಾನ್ಸೆಪ್ಟ್ ನಲ್ಲಿ ತೆರೆಗೆ ಬಂದಿರೋ ಮತ್ತೊಂದು ಸಿನಿಮಾವೇ ಓ ಮೈ ಲವ್.

ಕಾಲೇಜು ಕಾರಿಡಾರ್ ನಲ್ಲಿ ನಡೆಯುವ ಪ್ರೇಮ ಕಥೆಗೆ ಫ್ಯಾಮಿಲಿ ಸೆಂಟಿಮೆಂಟ್ ಸೇರಿಸಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ ನಿರ್ದೇಶಕ ಸ್ಮೈಲ್ ಶ್ರೀನು. ಸ್ಟಾರ್ ನಟರ ಮಕ್ಕಳಿರುವ ಸಿನಿಮಾದ ಮೇಲೆ ಯಾವಾಗಲು ಸಾಕಷ್ಟು ನಿರೀಕ್ಷೆ ಇರುತ್ತದೆ. ಆ ನಿರೀಕ್ಷೆಯಲ್ಲಿ ಥಿಯೇಟರ್ ಗೆ ಹೋದ ಪ್ರೇಕ್ಷಕರಿಗೆ ಓ ಮೈ ಲವ್ ಸಿನಿಮಾ ಸಮಾಧಾನಕರ ಬಹುಮಾನ ನೀಡುತ್ತದೆ.

ಇಬ್ಬರು ಆತ್ಮೀಯ ಗೆಳೆಯರಲ್ಲಿ ಒಬ್ಬರು ಇನ್ನೊಬ್ಬರ ತಂಗಿಯನ್ನು ಪ್ರೀತಿಸಿದಾಗ ಅವರ ನಡುವೆ ಹೇಗೆ ಬಿರುಕು ಮೂಡುತ್ತದೆ. ಒಂದು ಕಡೆ ಯುದ್ಧ ಮತ್ತೊಂದು ಕಡೆ ಪ್ರೇಮ- ಹೀಗೆ ಎರಡೆರಡು ಚಕ್ರವ್ಯೂಹದೊಳಗೆ ಸುತ್ತುವ ಹೀರೋ ಪ್ರೀತಿಯನ್ನು ದಕ್ಕಿಸಿಕೊಳ್ಳುತ್ತಾನಾ ಎಂಬುದು ಚಿತ್ರದ ಕಥಾ ವಸ್ತು.

ನಿರ್ದೇಶಕ ಶ್ರೀನು ಚಿತ್ರವನ್ನು ಫ್ಯಾಮಿಲೀ ಆಡಿಯನ್ಸ್ ಮತ್ತು ಯುವಕರನ್ನು ಮನಸಲ್ಲಿಟ್ಟುಕೊಂಡು ಚಿತ್ರಕಥೆ ಮಾಡಿದ್ದಾರೆ. ಕೆಲವೊಂದು ಕಡೆ ನರೇಷನ್ ನಿಧಾನ ಎನಿಸಿದ್ರು, ಸಾಧು ಕೋಕಿಲ ಕಾಮಿಡಿ ಕಚಕುಳಿಗೆ ಪ್ರೇಕ್ಷಕರು ಎಂಜಾಯ್ ಮಾಡಿದ್ದಾರೆ. ಅರ್ಥವಿಲ್ಲದ ಏರು ಧ್ವನಿಯ ಗಲಾಟೆಗಳು ವ್ಯರ್ಥ ಎನಿಸುತ್ತವೆ. ಚಿತ್ರದಲ್ಲಿ ಸ್ನೇಹ ಮುಖ್ಯನಾ, ಪ್ರೀತಿ ಮುಖ್ಯನಾ ಅಥವಾ ಸಂಬಂಧ ಮುಖ್ಯನಾ ಎಂಬುದನ್ನು ನಿರ್ದೇಶಕರು ತೋರಿಸಿದ್ದಾರೆ. ಸಿನಿಮಾದ ಛಾಯಾಗ್ರಹಣ ಚೆನ್ನಾಗಿದೆ,ಅಕ್ಷ್ಯನ್ ಸೀನ್ ಗಳನ್ನು ಬಹಳ ಅದ್ಧೂರಿಯಾಗಿ ಚಿತ್ರಿಸಿದ್ದಾರೆ. ಸಂಗೀತ ಅಷ್ಟಕ್ಕಷ್ಟೇ.

ಹದಿಹರೆಯ ಯುವ ಮನಸ್ಸುಗಳಿಗೆ ಓ ಮೈ ಲವ್ ಸಿನಿಮಾ ಇಷ್ಟ ಆಗುತ್ತದೆ. ಕೊಟ್ಟ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ ನಟ ಅಕ್ಷಿತ್ ಶಶಿಕುಮಾರ್. ಉತ್ತಮ ಕಥೆ, ನಿರ್ದೇಶಕರು ಸಿಕ್ಕಿದರೆ ಶಶಿಕುಮಾರ್ ಪುತ್ರ ಅಕ್ಷಿತ್ ಸ್ಯಾಂಡಲ್ ವುಡ್ ನಲ್ಲಿ ಭರವಸೆಯ ನಾಯಕ ಆಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ ಅನ್ನೋದಂತು ಕನ್ಪಾರ್ಮ್.

ರೇಟಿಂಗ್ -3/5


Digiqole ad

Sunil H C

Leave a Reply