ತೋತಾಪುರಿ, ಪ್ರೀಮಿಯರ್ ಪದ್ಮಿನಿ ಸಿನಿಮಾಗಳಲ್ಲಿ ಬಿಝಿ ಇರುವ ನಟ ಜಗ್ಗೇಶ್ ಈಗ ಕಾಳಿದಾಸನಾಗಲು ಹೊರಟಿದ್ದಾರೆ. ಈ ಸಿನಿಮಾವನ್ನು ಗೀತರಚನೆಕಾರ ಕವಿರಾಜ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಈ “ಕಾಳಿದಾಸ ಕನ್ನಡ ಮೇಷ್ಟ್ರು” ಎಂದು ಚಿತ್ರಕ್ಕೆ ಹೆಸರಿಡಲಾಗಿದೆ. . “ಕಾಳಿದಾಸ ಕನ್ನಡ ಮೇಷ್ಟ್ರು” ಸಿನಿಮಾದಲ್ಲಿ ಜಗ್ಗೇಶ್ ಕನ್ನಡ ಶಿಕ್ಷಕರಾಗಿ ನಟಿಸಲಿದ್ದಾರಂತೆ. ‘ಮದುವೆಯ ಮಮತೆಯ ಕರೆಯೋಲೆ’ ಸಿನಿಮಾ ಮಾಡಿದ್ದ ಕವಿರಾಜ್ ಎರಡನೇ ಸಿನಿಮಾದಲ್ಲಿ ಕನ್ನಡದ ಕಂಪನ್ನು ಹರಡಿಸಲು ಸಿದ್ಧರಾಗಿದ್ದಾರೆ. . ಈ ಚಿತ್ರದಲ್ಲಿ ಜಗ್ಗೇಶ್ಗೆ ಜೋಡಿಯಾಗಿ ಮೇಘನಾ ಗಾಂವ್ಕರ್ ನಟಿಸುತ್ತಿದ್ದಾರಂತೆ ಇದೇ 10ರಿಂದ ಚಿತ್ರೀಕರಣ […]Read More
ಡಾ.ಶಿವರಾಜ್ಕುಮಾರ್, ಕಿಚ್ಚ ಸುದೀಪ್ ನಟನೆಯ ಮಾಸ್ ಎಂಟರ್ಟೇನರ್ “ದಿ ವಿಲನ್” ಸಿನಿಮಾ ಪೈರಸಿ ಸೇರಿದಂತೆ ಒಂದಷ್ಟು ಅಡೆತಡೆಗಳನ್ನು ಎದುರಿಸಿದರೂ ಇಂದಿಗೆ ಚಿತ್ರವು ರಾಜ್ಯದ ಪ್ರಮುಖ ಕೇಂದ್ರಗಳಲ್ಲಿ ಯಶಸ್ವಿ 50 ದಿನಗಳ ಪ್ರದರ್ಶನ ಕಂಡಿದೆ. . ದಸರಾ ಹಬ್ಬಕ್ಕೆ ತೆರೆಕಂಡ ಈ ಚಿತ್ರ ಮೊದಲ ವಾರದಲ್ಲೇ ಸಾರ್ವಕಾಲಿಕ ಗಳಿಕೆ ದಾಖಲೆ ಮಾಡಿದ ಸಿನಿಮಾ ಇದಾಗಿದ್ದು,ಕರುನಾಡ ಚಕ್ರವರ್ತಿ ಡಾ. ಶಿವಣ್ಣ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪರ ನಟನೆಯ ಜೊತೆಗೆ ಚಿತ್ರದಲ್ಲಿನ ತಾಯಿ ಸೆಂಟಿಮೆಂಟ್ ಪ್ರೇಕ್ಷಕರಿಗೆ ಹಿಡಿಸಿತ್ತು. . ಇನ್ನು […]Read More
ಕಾಲಿವುಡ್ನಲ್ಲಿ ಸಾಕಷ್ಟು ಸುದ್ದಿ ಮಾಡಿದ ’96’ ಸಿನಿಮಾ ಕನ್ನಡಕ್ಕೆ ರಿಮೇಕ್ ಆಗಲಿದ್ದು, ಅದಕ್ಕೆ 99 ಎಂಬ ಟೈಟಲ್ ಫೈನಲ್ ಆಗಿದೆ..ಕನ್ನಡದ 99 ಸಿನಿಮಾವನ್ನು ಪ್ರೀತಂ ಗುಬ್ಬಿ ನಿರ್ದೇಶನ ಮಾಡಲಿದ್ದು, ವಿಜಯ್ ಸೇತುಪತಿ ನಟಿಸಿದ್ದ ಪಾತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಟಿಸುತ್ತಿದ್ದಾರೆ. ಈಗಾಗಲೇ ಮುಂಗಾರುಮಳೆ, ಮಳೆಯಲಿ ಜೊತೆಯಲಿ ಸಿನಿಮಾ ಮೂಲಕ ಭಾವನಾತ್ಮ ಪ್ರೇಮಕಥೆಯನ್ನು ಹೇಳಿರುವ ಪ್ರೀತಂ ಗುಬ್ಬಿ ಮತ್ತು ಗಣೇಶ್ ಈ ಬಾರಿ ಮತ್ತೊಂದು ಪ್ರೇಮ ಕಥೆ ಮೂಲಕ ಬರಲು ಸಜ್ಜಾಗಿದ್ದಾರೆ. ಈ ಚಿತ್ರವನ್ನು ರಾಮು ನಿರ್ಮಾಣ […]Read More
ಬಜಾರ್ ಸಿನಿಮಾ ನಿರ್ದೇಶನ ಮಾಡುತ್ತಿರುವ ಸಿಂಪಲ್ ಸುನಿ, ಇದಾದ ಮೇಲೆ ಶರಣ್ ಜತೆ ಸಿನಿಮಾ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. . ರೊಮ್ಯಾಂಟಿಕ್ ಕಾಮಿಡಿ ಸಿನಿಮಾಗಳನ್ನು ಮಾಡಿ ಯಶಸ್ಸು ಕಂಡಿರುವ ಸುನಿ ಅವರು ಕಾಮಿಡಿ ಕಿಂಗ್ ಶರಣ್ ಅವರಿಗೆ ನಿರ್ದೇಶನ ಮಾಡಲಿದ್ದಾರೆ ಎಂದರೆ ಸಹಜವಾಗಿಯೇ ಒಳ್ಳೆ ಸಿನಿಮಾವಾಗುತ್ತದೆ ಎಂಬ ಮಾತುಗಳು ಗಾಂಧಿನಗರದಲ್ಲಿ ಕೇಳಿಬರುತ್ತಿದೆ. ಮೂಲಗಳ ಪ್ರಕಾರ ಈ ಸಿನಿಮಾವನ್ನು ಪುಷ್ಕರ್ ಮಲ್ಲಿಕಾರ್ಜುನ್ ನಿರ್ಮಾಣ ಮಾಡಲಿದ್ದಾರೆ. . ಬಜಾರ್ ಬಿಡುಗಡೆಯ ನಂತರ ಈ ಚಿತ್ರದ ಕೆಲಸಗಳು ಶುರುವಾಗಲಿದೆ ಮತ್ತು ಚಿತ್ರದ […]Read More
ಸಿರಪ್ ಕ್ರಿಯೇಷನ್ಸ್ ಲಾಂಛನದಡಿಯಲ್ಲಿ ನಿರ್ಮಾಪಕ ಶ್ರೀ ಫಣಿಭೂಷಣ್ ನಿರ್ಮಿಸುತ್ತಿರುವ ಹಾಸ್ಯ ಪ್ರಧಾನ “ಮುಂದಿನ ಬದಲಾವಣೆ” ಚಿತ್ರವು ಈ ವಾರ 7 ರಂದು ರಾಜ್ಯಾದ್ಯಂತ ತೆರೆಕಾಣಲಿದೆ. . ಚಿತ್ರಕ್ಕೆ ಕೋಟಿಶ್ವರ್ ಛಾಯಾಗ್ರಹಣ, ಕಾರ್ತಿಕ್ ವೆಂಕಟೇಶ್ ಸಂಗೀತ, ರಮೇಶ್ಕುಮಾರ್ ಸಂಕಲನವಿದ್ದು, ಚಿತ್ರದಕಥೆ, ಚಿತ್ರಕಥೆ, ಚಿತ್ರಕಥೆ ಸಾಹಿತ್ಯ, ಸಂಭಾಷಣೆ ಮತ್ತು ನಿರ್ದೇಶನದ ಹೊಣೆಯನ್ನು ಪ್ರವೀಣ್ಭೂಷಣ್ ಹೊತ್ತಿದ್ದಾರೆ. . ತಾರಾಗಣದಲ್ಲಿ ಪ್ರವೀಣ್ ಭೂಷಣ್, ಸಂಗೀತ, ಸತೀಶ್, ಪಂಚಗೌರಿ, ಆರ್ಯನ್, ಮಾಲಾಶ್ರೀ, ಚಕ್ರವರ್ತಿ, ಲಕ್ಷ್ಮಣ್ಗೌಡ ಮುಂತಾದವರಿದ್ದಾರೆ . #MundinaBadalavane #CinelokaRead More
ಮಯೂರ ಮೋಷನ್ ಪಿಕ್ಚರ್ಸ್ ಲಾಂಛನದಲ್ಲಿ ಮಂಜುನಾಥ್ ಡಿ ಅವರು ನಿರ್ಮಿಸುತ್ತಿರುವ `ವೀಕೆಂಡ್` ಚಿತ್ರಕ್ಕೆ ಬೆಂಗಳೂರಿನ ವಸಂತಪುರದಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಖ್ಯಾತ ನಟ ಅನಂತನಾಗ್, ಗೋಪಿನಾಥ್ ಭಟ್ ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಬಾಗವಹಿಸಿದ್ದಾರೆ.. ಶೃಂಗೇರಿ ಸುರೇಶ್ ನಿರ್ದೇಶನದ ಈ ಚಿತ್ರಕ್ಕೆ ಶಶಿಧರ್ ಅವರ ಛಾಯಾಗ್ರಹಣವಿದೆ. ಮನೋಜ್ ಸಂಗೀತ ನಿರ್ದೇಶನ, ರುದ್ರೇಶ್ ಸಂಕಲನ, ಬಾಬು ಖಾನ್ ಕಲಾ ನಿರ್ದೇಶನ, ಮಂಜುನಾಥ್ ಜಂಬೆ ಸಹ ನಿರ್ದೇಶನ ಹಾಗೂ ರಾಮು, ಯೋಗಾನಂದ್ ನಿರ್ಮಾಣ ನಿರ್ವಹಣೆಯಿದೆ.. ಉತ್ತಮ ಕಥಾಹಂದರ ಹೊಂದಿರುವ ಈ […]Read More
ರಾಕಿಂಗ್ ಸ್ಟಾರ್ ಯಶ್ ನಟನೆಯ “ಕೆಜಿಎಫ್” ಟ್ರೇಲರ್ನಿಂದಾಗಿ ಈಗಾಗಲೇ ದೊಡ್ಡ ಮಟ್ಟದ ನಿರೀಕ್ಷೆಯನ್ನು ಹುಟ್ಟಿಸಿದೆ.ಚಿತ್ರ ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ, ಸಿನಿಮಾದ ಆಡಿಯೋ ಹಕ್ಕು 3.60 ಕೋಟಿಗೆ ಲಹರಿ ಸಂಸ್ಥೆಗೆ ಮಾರಾಟವಾಗಿದೆ. . ಹೌದು ಈ ಬಗ್ಗೆ ಸ್ವತಃ ಲಹರಿ ವೇಲು ಅವರೇ ಮಾಧ್ಯಮಗಳಿಗೆ ತಿಳಿಸಿದ್ದು, ಹಿಂದಿ ಭಾಷೆಯನ್ನು ಹೊರತುಪಡಿಸಿ ಕನ್ನಡ,ತೆಲುಗು,ತಮಿಳು, ಮಲಯಾಳಂ ಭಾಷೆಗಳ ಹಕ್ಕನ್ನು ಅವರು ಖರೀದಿಸಿದ್ದಾರೆ. ಈ ಮೊತ್ತಕ್ಕೆ ಕನ್ನಡ ಸಿನಿಮಾವೊಂದರ ಆಡಿಯೋ ಮಾರಾಟವಾಗಿರುವುದು ದಾಖಲೆಯಾಗಿದೆ. ಒಟ್ಟಿನಲ್ಲಿ ಯಶ್ ಕೆಜಿಎಫ್ ದಿನದಿಂದ ದಿನಕ್ಕೆ ಹೊಸ ದಾಖಲೆಗಳನ್ನು […]Read More
ಕನ್ನಡದ ಮೇರುನಟ ರೆಬೆಲ್ ಸ್ಟಾರ್ ಅಂಬರೀಶ್ ಇನ್ನು ನೆನಪು ಮಾತ್ರ. ಅವರ ಅಭಿಮಾನಿಗಳ ಸೃತಿಪಟಲದಲ್ಲಿ `ಅಂಬಿ ನಿಂಗೆ ವಯಸಾಯ್ತೋ’ ಪೂರ್ಣಪ್ರಮಾಣದ ನಾಯಕನಟರಾಗಿ ನಟಿಸಿದ ಕೊನೆಯ ಚಿತ್ರವಾಗಿ ಉಳಿದುಕೊಂಡಿದೆ. ಅನಾರೋಗ್ಯ ಕಾಡುತ್ತಿದ್ದರೂ ಅದರ ಸುಳಿವೂ ಸಿಗದಂತೆ ಅಂಬಿ ಈ ಚಿತ್ರದ ಪಾತ್ರಕ್ಕೆ ಜೀವ ತುಂಬಿದ್ದರು. ಇದೀಗ ಈ ಚಿತ್ರವನ್ನು ವಿದೇಶಗಳಲ್ಲಿ ಮತ್ತೆ ಬಿಡುಗಡೆ ಮಾಡಬೇಕೆಂದು ಅಲ್ಲಿನ ಅಂಬಿ ಅಭಿಮಾನಿಗಳು ಒತ್ತಾಯಿಸಿದ್ದಾರೆ. ನಿರ್ಮಾಪಕ ಜಾಕ್ ಮಂಜು ಅದಕ್ಕೆ ಮಣಿದು ಮರು ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.. `ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದ […]Read More
ಕಲರ್ ಫುಲ್ ಕ್ರಿಸ್ಟಲ್ ಕಂಬೈನ್ಸ್ ಲಾಂಛನದಲ್ಲಿ ಸರ್ವಶ್ರೀ ಅವರು ನರ್ಮಿಸಿರುವ ಒಂದು ಸಣ್ಣ ಬ್ರೇಕ್ ನ ನಂತರ ಚಿತ್ರವು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಹಳ್ಳಿಯಲ್ಲಿ ನಾಲ್ಕು ಜನ ಸ್ನೇಹಿತರು ಕಟ್ಟೆಯ ಮೇಲೆ ಕುಳಿತಾಗ ನಡೆಯುವ ಘಟನೆಯ ಆಧರಾವಾಗಿ ಇಟ್ಟು ಕೊಂಡು ಲವ್, ಸಸ್ಪೆನ್ಸ್ ಹಾಗೂ ಕಾಮಿಡಿ ಕಥಾನಕವೊಂದ್ದಿರುವ ಈ ಚಿತ್ರವನ್ನು ಅಭಿಲಾಷ್ ಗೌಡ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. . ಚಿತ್ರಕ್ಕೆ ಹಿತನ್ ಹಾಸನ್ ಕಥೆ ಮತ್ತು ಸಂಗೀತ, ನಾಗರಾಜ್ ಉಪ್ಪುಂದ ಛಾಯಾಗ್ರಹಣ, ಬೇಬಿನಾಗರಾಜ್ […]Read More
ವಿಜಯ್ ಪ್ರಸಾದ್ ಮತ್ತು ಜಗ್ಗೇಶ್ ಕಾಂಬಿನೇಶನ್ನ “ತೋತಾಪುರಿ”- ‘ತೊಟ್ ಕೀಳ್ಬೇಡಿ’ ಸಿನಿಮಾದಲ್ಲಿ ಡಾಲಿ ಧನಂಜಯ ವಿಶೇಷ ಪಾತ್ರದಲ್ಲಿ ನಟಿಸುತ್ತಿರುವುದು ಗೊತ್ತಿರುವ ವಿಚಾರ, ಈಗ ಆ ಸಿನಿಮಾದಲ್ಲಿ ಅವರ ಲುಕ್ ರೀವಿಲ್ ಆಗಿದ್ದು, ಡಾಲಿ ಸಖತ್ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ. ನಾರಾಯಣ ಪಿಳ್ಳೈ ಎಂಬ ವ್ಯಾಪಾರಿಯ ರೋಲ್ ಇದಾಗಿದ್ದು, ಧನಂಜಯ,ಸುಮನ್ ರಂಗನಾಥ್ ಜೋಡಿಯಾಗಿ ನಟಿಸುತ್ತಿದ್ದಾರೆ. ವಿಜಯ್ ಪ್ರಸಾದ್ ಅವರ ಕಾನ್ಸೆಪ್ಟ್ ಬಹಳ ಚೆನ್ನಾಗಿರುವ ಕಾರಣ ಅತಿಥಿ ಪಾತ್ರದಲ್ಲಿ ನಟಿಸಲು ಅವರು ಒಪ್ಪಿಕೊಂಡಿದ್ದಾರಂತೆ.Read More
Recent Comments