Sunil H C

‘ನನ್ನ ಪ್ರಕಾರ’ಕ್ಕೆ ಯು/ಎ ಪ್ರಮಾಣ ಪತ್ರ; ಜುಲೈ ನಲ್ಲಿ ತೆರೆಗೆ

ಪ್ರಿಯಾಮಣಿ ಮದುವೆಯಾದ ನಂತರ ಮೊದಲ ಬಾರಿಗೆ ನಟಿಸುತ್ತಿರುವ ನನ್ನ ಪ್ರಕಾರ ಸಿನಿಮಾ ಸೆನ್ಸಾರ್‌ ಆಗಿದ್ದು, ಅದಕ್ಕೆ ಮಂಡಳಿ ಯು/ ಅ ಪ್ರಮಾಣ ಪತ್ರ ನೀಡಿದೆ. ಪ್ರಿಯಾಮಣಿ, ಮಯೂರಿ, ಕಿಶೋರ್‌ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರ ಬರೀ ಟೀಸರ್‌ ಮತ್ತು ಪೋಸ್ಟರ್‌ನಿಂದಲೇ ಸದ್ದು ಮಾಡುತ್ತಿದೆ. ಸಸ್ಪೆನ್ಸ್‌ ಮಾದರಿಯ ಕಥೆ ಇರುವ ಸಿನಿಮಾದಲ್ಲಿ ಪಂಚತಂತ್ರ ಸಿನಿಮಾ ಖ್ಯಾತಿಯ ನಟ ವಿಹಾನ್‌ಗೌಡ ಸಹ ನಟಿಸಿದ್ದಾರೆ. ವಿನಯ್‌ ಬಾಲಾಜಿ ಆ್ಯಕ್ಷನ್‌ ಕಟ್‌ ಹೇಳಿರುವ ಈ ಚಿತ್ರ ಜುಲೈ ತಿಂಗಳಿನಲ್ಲಿ ತೆರೆಗೆ ಬರಬಹುದು ಎನ್ನುವ […]Read More

ಧಾರಾವಾಹಿಗಳ ಅಭಿಮಾನಿಗಳ ಕಥೆ “ಫ್ಯಾನ್”

ಪ್ರತಿನಿತ್ಯ ಹತ್ತಾರು ಟಿವಿ ಚಾನೆಲ್ ಗಳಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಇಂಥ ಧಾರಾವಾಹಿಗಳಿಗೆ ಅದರದ್ದೇ ಆದ ಅಭಿಮಾನಿಗಳ ವರ್ಗವಿದೆ, ಪ್ರತಿನಿತ್ಯ ನಡೆಯುವ ಧಾರಾವಾಹಿ ಸನ್ನಿವೇಶಗಳ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಅವರ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅಂತಹ ಕೆಲವು ಕಾಮೆಂಟ್ಸ್ ಗಳನ್ನು ಎತ್ತಿಕೊಂಡು ನಿರ್ದೇಶಕ ‘ಫ್ಯಾನ್’ ಚಿತ್ರದ ಕತೆಯನ್ನು ಹೆಣೆದಿದ್ದಾರೆ. ನಿರ್ದೇಶಕ ದರ್ಶಿತ್ ಭಟ್ ಬಲವಳ್ಳಿ ಸುಮಾರು ಹದಿನಾಲ್ಕು ವರ್ಷಗಳಿಂದ ಕನ್ನಡದ ಕೆಲವು ಮೆಗಾ ಧಾರಾವಾಹಿಗಳಿಗೆ ಸ್ಕಿಪ್ ಬರೆಯುತ್ತಿದ್ದವರು ಇಂದು ಚಿತ್ರ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಈ […]Read More

ಕಮರೊಟ್ಟು ಚೆಕ್‌ಪೋಸ್ಟ್‌ – ಚಿತ್ರ ವಿಮರ್ಶೆ

ಚಿತ್ರ: ಕಮರೊಟ್ಟು ಚೆಕ್‌ ಪೋಸ್ಟ್ ನಿರ್ದೇಶನ: ಪರಮೇಶ್‌ ನಿರ್ಮಾಣ: ಚೇತನ್‌ ರಾಜ್‌ ಸಂಗೀತ: ಎ ಟಿ ರವೀಶ್‌ ಕಲಾವಿದರು: ಸನತ್‌, ಉತ್ಪಲ್‌, ಸ್ವಾತಿ, ನಿಶಾ ವರ್ಮಾ, ಗಡ್ಡಪ್ಪ ಮತ್ತಿತರರು ಇತ್ತೀಚಿನ ದಿನಗಳಲ್ಲಿ ಹೊಸಬರ ತಂಡಗಳು ಹೊಸ ರೀತಿಯ ಕಥೆಗಳ ಮೂಲಕ ಪ್ರೇಕ್ಷಕರನ್ನು ತಲುಪುತ್ತಿದ್ದಾರೆ, ಆ ನಿಟ್ಟಿನಲ್ಲಿ ಈ ವಾರ ಬಿಡುಗಡೆಯಾಗಿರುವ ಕಮರೊಟ್ಟು ಚೆಕ್‌ಪೋಸ್ಟ್‌ ಸಿನಿಮಾ ಬಹಳ ವಿಶೇಷವಾಗಿ ಕಾಣುತ್ತದೆ. ಭಾರತೀಯ ಚಿತ್ರರಂಗದಲ್ಲಿಯೇ ಮೊದಲ ಬಾರಿಗೆ ಪ್ಯಾರ ನಾರ್ಮಲ್‌ ಎಂಬ ಫಾರ್ಮ್ಯಾಟ್‌ನ್ನು ಸ್ಯಾಂಡ್‌ಲವುಡ್‌ಗೆ ಪರಿಚಯಿಸಿದ್ದಾರೆ. ಮೂವರು ಸ್ನೇಹಿತರು ಕಮರೊಟ್ಟು […]Read More

ಟೆಕ್ಕಿಗಳ ನೈಜ ಬದುಕಿನ ಅನಾವರಣ – ಚಿತ್ರ ವಿಮರ್ಶೆ

ಚಿತ್ರ: ವೀಕೆಂಡ್‌ ನಿರ್ದೇಶಕ: ಶ್ರಿಂಗೇರಿ ಸುರೇಶ್‌ ನಿರ್ಮಾಪಕ: ಮಂಜುನಾಥ್‌ ಸಂಗೀತ: ಮನೋಜ್‌ ಎಸ್‌ ತಾರಾಗಣ: ಮಿಲಿಂದ್‌, ಸಂಜನಾ ಬುರ್ಲಿ, ಗೋಪಿನಾಥ್‌, ವೀಣಾ, ಗೋಪಿನಾಥ್‌ ಭಟ್‌, ಶಿವು, ರಘು ನೀನಾಸಂ, ಅನಂತನಾಗ್ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಕೆಲ ವರ್ಷಗಳ ಹಿಂದೆ ಸಾಫ್ಟ್‌ ವೇರ್‌ ಉದ್ಯಮ ಬಹಳ ದೊಡ್ಡದಾಗಿ ಬೂಮ್‌ ಆಯಿತು. ಆಗ ಸಾಕಷ್ಟು ಮಂದಿ ಟೆಕ್ಕಿಗಳು ಒಮ್ಮೇಲೆ ಶ್ರೀಮಂತರಾದರು,ಅವರ ಲೈಫ್‌ ಸ್ಟೈಲ್‌ಗಳು ಬದಲಾಯಿತು. ಹೆಚ್ಚಿನ ಖರ್ಚಿಗಾಗಿ ತಿಂಗಳ ಸಂಬಳ ನಂಬಿಕೊಂಡು ಅವರು ಲಕ್ಷಾಂತರ ಸಾಲ ಮಾಡತೊಡಗಿದರು. ಕೆಲ ದಿನಗಳ ಕಾಲ ಎಲ್ಲವೂ ಸರಿಯಾಗಿಯೇ ಇತ್ತು. ಆದರೆ ಯಾವಾಗ ರಿಸೇಶನ್‌ ಎಂಬುದು ಆರಂಭವಾಯಿತೋ ಆಗ ಎಲ್ಲವೂ […]Read More

ಖಡಕ್‌ ಪಾರ್ವತಮ್ಮನ ಮಗಳು – – ಚಿತ್ರ ವಿಮರ್ಶೆ

ಚಿತ್ರ: D/0 ಪಾರ್ವತಮ್ಮ ನಿರ್ದೇಶಕ: ಶಂಕರ್‌ ನಿರ್ಮಾಪಕ: ದಿಶ ಎಂಟರ್‌ಪ್ರೈಸಸ್‌ ಸಂಗೀತ: ಮಿದುನ್‌ ಮುಕುಂದನ್‌ ತಾರಾಗಣ: ಹರಿಪ್ರಿಯಾ, ಸುಮಲತಾ ,ಪ್ರಭು, ಸೂರಜ್‌ ಗೌಡ, ತರಂಗ ವಿಶ್ವ, ಕನ್ನಡದಲ್ಲಿ ಸಸ್ಪೆನ್ಸ್‌ ಥ್ರಿಲ್ಲರ್‌ ಮಾದರಿಯ ಸಿನಿಮಾಗಳು ಹೆಚ್ಚಾಗುತ್ತಿವೆ, ಅವುಗಳಲ್ಲಿ ಥ್ರಿಲ್‌ ಕೊಡುವಂತಹ ಚಿತ್ರಗಳು ಗೆಲ್ಲುತ್ತಿವೆ, ಆ ಸಾಲಿಗೆ ಈ ವಾರ ಬಿಡುಗಡೆಯಾಗಿರುವ ಡಾಟರ್‌ ಆಫ್‌ ಪಾರ್ವತಮ್ಮ ಸೇರುತ್ತದೆ.. ಸಾಮಾನ್ಯವಾಗಿ ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾಗಳಲ್ಲಿ ನಾಯಕ ನಟನ ಮೇಲೆ ಕೇಂದ್ರಿತವಾಗಿ ಕಥೆ ರಚನೆಯಾಗಿರುತ್ತದೆ. ಆದರೆ ಇಲ್ಲಿ ನಾಯಕಿ ಪ್ರಧಾನವನ್ನು ಇಟ್ಟುಕೊಂಡು ಕಥೆ […]Read More