“ನಟಸಾರ್ವಭೌಮ” ಮುಂಗಡ ಬುಕಿಂಗ್ಸ್ ತೆರೆದಿದೆ; ಮೊದಲ ಶೋ 4 ಗಂಟೆಗೆ

ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ್‌ ನಟನೆಯ ಬಹು ನಿರೀಕ್ಷಿತ “ನಟಸಾರ್ವಭೌಮ” ಸಿನಿಮಾ ಇದೇ ಫೆ.7ಕ್ಕೆ ಬಿಡುಗಡೆಯಾಗುತ್ತಿದೆ. ಚಿತ್ರದ ಬುಕಿಂಗ್ಸ್ ತೆರೆದಿದ್ದು, ಅಪ್ಪು ಅಭಿಮಾನಿಯೊಬ್ಬರು ಉರ್ವಶಿ ಚಿತ್ರದ ಬೆಳಗಿನ ಜಾವದ 4 ಗಂಟೆ ಶೋ ಸಂಪೂರ್ಣ ಟಿಕೇಟ್ಸ್ ಖರೀದಿಸಿದ್ದಾರೆ. . ಈ ಸಿನಿಮಾದಲ್ಲಿ ಪುನೀತ್‌ರಾಜ್‌ಕುಮಾರ್‌ ಪತ್ರಿಕೆಯೊಂದರ ಫೋಟೋಗ್ರಫರ್‌ ಆಗಿ ನಟಿಸುತ್ತಿದ್ದಾರೆ. ಸದ್ಯ ಬಿಡುಗಡೆಯಾಗಿರುವ ಟ್ರೇಲರ್‌ ಮತ್ತು ಪೋಸ್ಟರ್‌ಗಳಿಂದ ಇದು ಹಾರರ್‌ ಸಿನಿಮಾ ಎಂಬುದು ಗೊತ್ತಾಗಿದೆ. . ಆದರೆ ಇದರಲ್ಲಿ ಪುನೀತ್‌ ರಾಜ್‌ಕುಮಾರ್‌ ದೆವ್ವವಾಗಿ ಕಾಣಿಸಿಕೊಳ್ಳುತ್ತಿದ್ದಾರೋ ಇಲ್ಲವೋ ಎಂಬುದು ಗೊತ್ತಿಲ್ಲ. ಪುನೀತ್‌ಗೆ […]Read More

ಚಿತ್ರರಂಗದಲ್ಲಿ 23 ವಸಂತಗಳನ್ನು ಪೂರೈಸಿದ ಸಂಭ್ರಮದಲ್ಲಿ ಕಿಚ್ಚ ಸುದೀಪ್‌

ತಮ್ಮ ಮನೋಜ್ಞ ಅಭಿನಯದ ಮೂಲಕ ಕನ್ನಡ, ಹಿಂದಿ, ತೆಲುಗು,ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಇಂದಿಗೆ(ಜ.31) ಚಿತ್ರರಂಗಕ್ಕೆ ಬಂದು 23 ವರ್ಷ. . ಸೋಷಿಯಲ್‌ ಮಿಡಿಯಾದಲ್ಲಿ ತಮ್ಮ 23 ವರ್ಷಗಳ ತಮ್ಮ ಸಿನಿ ಜರ್ನಿಯನ್ನು ಕಿಚ್ಚ ನೆನಪಿಸಿಕೊಂಡಿದ್ದಾರೆ. ಜನವರಿ 31ರಂದು ಕಂಠೀರವ ಸ್ಟುಡಿಯೋದಲ್ಲಿ ಸೆಟ್ಟೇರಿದ ತಮ್ಮ ಮೊದಲ ಚಿತ್ರದ ನೆನಪಲ್ಲಿ ಸುದೀಪ್ ಟ್ವೀಟ್ ಮಾಡಿದ್ದು, ಈ ಬಗ್ಗೆ ಅವರಿಗೆ ಸ್ಯಾಂಡಲ್‌ವುಡ್‌ನ ಅನೇಕ ನಿರ್ದೇಶಕರು,ನಟರು ಟ್ವೀಟರ್‌ ಮೂಲಕ ಶುಭಾಶಯ ಕೋರಿದ್ದಾರೆ. . […]Read More

‘ಬಜಾರ್‌’ ಮೂಲಕ ಮಾಸ್‌ ಡೈರೆಕ್ಟರ್‌ ಆಗ್ತಾರ ಸಿಂಪಲ್ ಸುನಿ ?

ಗಣೇಶ್‌ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಚಮಕ್‌ ಸಿನಿಮಾದ ಯಶಸ್ಸಿನ ನಂತರ ನಿರ್ದೇಶಕ ಸುನಿ ಕೈಗೆತ್ತಿಕೊಂಡ ಚಿತ್ರ ‘ಬಜಾರ್‌’. ಈ ಸಿನಿಮಾದ ಮೂಲಕ ಅವರು ಮಾಸ್‌ ಡೈರೆಕ್ಟರ್‌ ಆಗುವುದು ಪಕ್ಕಾ ಎನ್ನುತ್ತಿದೆ ಸ್ಯಾಂಡಲ್‌ವುಡ್‌.   ಸದ್ಯ ಬಿಡುಗಡೆಯಾಗಿರುವ ಪೋಸ್ಟರ್, ಹಾಡುಗಳು ಹಾಗೂ ಟ್ರೈಲರ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿವೆ . ಹೌದು, “ಪಾರಿವಾಳ ಪ್ರೀತಿಯ ಸಂಕೇತ, ಪಾರಿವಾಳ ಶಾಂತಿಯ ಪ್ರತೀಕ. ಆದರೆ ನಿಮಗೆ ಗೊತ್ತಿಲ್ಲದ ಬೇರೆ ಪಾರಿವಾಳದ ಲೋಕವೊಂದಿದೆ’ ಎನ್ನುವ ಡೈಲಾಗ್ ಮೂಲಕ ಟ್ರೈಲರ್ ಆರಂಭವಾಗುತ್ತದೆ. […]Read More

`ರಾಜಣ್ಣನ ಮಗ` ಚಿತ್ರದ ನಾಯಕ ಹರೀಶ್ ಅವರ ಫಿಟ್ನೆಸ್ ಜಿಮ್‍ಗೆ ಚಾಲನೆ ಕೊಟ್ಟ

  `ರಾಜಣ್ಣನ ಮಗ` ಚಿತ್ರದ ನಾಯಕರಾಗಿ ನಟಿಸುತ್ತಿರುವ ಹರೀಶ್ ಜಲಗೆರೆ ಹಾಗೂ ಪ್ರಕಾಶ್ ಜಲಗೆರೆ ಅವರು ಜೆ.ಪಿ ನಗರದಲ್ಲಿ ನಿರ್ಮಿಸಿರುವ ಗೋಲ್ಡ್ ಕ್ರಾಫ್ಟ್ ಫಿಟ್ನೆಸ್ ಜಿಮ್ ಅನ್ನು ಇತ್ತೀಚೆಗೆ ನಟ ಕಿಚ್ಚ ಸುದೀಪ್ ಉದ್ಘಾಟಿಸಿದರು. . ಉದ್ಘಾಟನೆಯ ನಂತರ ಸುಸಜ್ಜಿತ ಈ ಜಿಮ್ ವೀಕ್ಷಿಸಿದ ಕಿಚ್ಚ ಸುದೀಪ್ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. ಜೆ.ಪಿ.ನಗರದಲ್ಲಿ ಆರಂಭವಾಗಿರುವ ಗೋಲ್ಡ್ ಕ್ರಾಫ್ಟ್ ಫಿಟ್ನೆಸ್ ಜಿಮ್ನಲ್ಲಿ ಪರ್ಸನಲ್ ಟ್ರೈನಿಂಗ್, ಕ್ರಾಸ್ ಫಿಟ್ ಟ್ರೈನಿಂಗ್, ಬಾಕ್ಸಿಂಗ್ ಟ್ರೈನಿಂಗ್, ಕಿಡ್ಸ್ ಟ್ರೈನಿಂಗ್ ಮುಂತಾದ ಸೌಲಭ್ಯಗಳು ಮತ್ತು […]Read More

ಬೆಂಕೂಶ್ರೀ ಪುತ್ರನ ಕ್ಯಾಲೆಂಡರ್‌ ಕಹಾನಿ

  ನಿರ್ಮಾಪಕ ಬಿ ಕೆ ಶ್ರೀನಿವಾಸ್‌ ಪುತ್ರ ಅಕ್ಷರ್‌ ಅವರನ್ನು ಬೆಳ್ಳಿತೆರೆಗೆ ಪರಿಚಯಿಸುವುದಾಗಿ ಹೇಳಿದ್ದರು. ಈಗ ಅದಕ್ಕೆ ಸಂಬಂಧಪಟ್ಟಂತೆ ಕ್ಯಾಲೆಂಡರ್‌ ಒಂದನ್ನು ಬಿಡುಗಡೆ ಮಾಡಲಾಗಿದೆ. . ಈ ಕ್ಯಾಲೆಡರ್‌ನಲ್ಲಿ ಅಕ್ಷರ್‌ ಅವರ ವಿವಿಧ ಫೋಟೋಗಳಿದ್ದು, ಅನಾಥ, ಹಳ್ಳಿಗೆ ಬರುವುದು, ಇಲ್ಲಿ ಬಂದು ಬದುಕು ಕಟ್ಟಿಕೊಳ್ಳುವುದು, ಆಮೇಲೆ ಲವ್‌ ಮಾಡುವುದು, ಅದು ಸೋತಾಗ ಚಟಕ್ಕೆ ದಾಸನಾಗುವುದು ಹೀಗೆ ಎಲ್ಲವನ್ನು ಪೋಟೋದ ಮೂಲಕ ಹೇಳಲಾಗಿದೆ. ಕಲಾವಿದನಾಗಬೇಕಾದವನು ಎಲ್ಲ ಪಾತ್ರಗಳನ್ನು ನಿರ್ವಹಿಸಬೇಕು ಎಂಬುದನ್ನು ಈ ಮೂಲಕ ತೋರಿಸಲು ಈ ಕ್ಯಾಲೆಂಡರ್‌ ಮಾಡಿದ್ದೇನೆ […]Read More

ಯೂಟ್ಯೂಬ್‌ನಲ್ಲಿ ಟ್ರೆಂಡ್‌ ಆದ ಸಸ್ಪೆನ್ಸ್ ಥ್ರಿಲ್ಲರ್ “ಅನುಕ್ತ” ಟ್ರೇಲರ್

ಸಂಗೀತಾ ಭಟ್‌,ಕಾರ್ತಿಕ್,ಸಂಪತ್ ರಾಜ್,ಅನುಪ್ರಭಾಕರ್‌ ನಟನೆಯ ‘ಅನುಕ್ತ’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿ ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ ಆಗಿದೆ. . ಕರಾವಳಿ ಪ್ರದೇಶದಲ್ಲಿ ನಡೆಯುವ ಕೊಲೆಯ ಹಿಂದೆ ನಡೆಯುವ ಕಥೆ ಎಂಬುದು ಈ ಬಿಡುಗಡೆಯಾಗಿರುವ ಟ್ರೇಲರ್‌ನಲ್ಲಿ ಗೊತ್ತಾಗುತ್ತದೆ. ಅಶ್ವತ್ಥ್ ಸ್ಯಾಮುಯಲ್ ನಿರ್ದೇಶನದ, ಹರೀಶ್ ಬಂಗೇರ ನಿರ್ಮಾಣ ಮಾಡಿರೋ ಈ ಸಿನಿಮಾದ ಇದೇ ಫೆ.1ಕ್ಕೆ ಬಿಡುಗಡೆಯಾಗಲಿದೆ. . ಚಿತ್ರದ ಟ್ರೇಲರ್ ಗೆ ಎಲ್ಲೆಡೆ ತುಂಬಾ ಪಾಸಿಟಿವ್ ರೆಸ್ಪಾನ್ಸ್ ದೊರೆತಿದ್ದು ಚಿತ್ರತಂಡಕ್ಕೆ ಉತ್ಸಾಹ ತಂದಿದೆ. ದಕ್ಷಿಣ ಭಾರತದ ಖ್ಯಾತ ನಟ ಸಂಪತ್‌ಕುಮಾರ್‌ ಸಹ ಮುಖ್ಯ […]Read More

ಭಾರತೀಯ ಚಿತ್ರರಂಗದ ಗಣ್ಯರ ಮೆಚ್ಚುಗೆಗೆ ಪಾತ್ರವಾದ ಬಾದ್‌ಷಾ ಕಿಚ್ಚ ಸುದೀಪರ “ಪೈಲ್ವಾನ್‌” ಟೀಸರ್‌

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ನಟನೆಯ ಪೈಲ್ವಾನ್‌ ಸಿನಿಮಾದ ಟೀಸರ್‌ ಬಿಡುಗಡೆಯಾಗಿ ವೈರಲ್‌ ಆಗಿದೆ, ವೈರಲ್‌ ಆಗುವುದರ ಜತೆಗೆ ಇದು ಟಾಲಿವುಡ್‌, ಬಾಲಿವುಡ್‌, ಕಾಲಿವುಡ್‌ನ್ನು ಮುಟ್ಟಿದ್ದು, ಅಲ್ಲಿಯೂ ಸಂಚಲನ ಎಬ್ಬಿಸಿದೆ. . ಹಿಂದಿಯ ಸಲ್ಮಾನ್‌ ಖಾನ್‌,ರಾಮ್ ಗೋಪಾಲ್ ವರ್ಮ,ರಿತೇಶ್ ದೇಶ್‌ಮುಖ್,ಸೋನು ಸೂದ್, ಸುನಿಲ್ ಶೆಟ್ಟಿ ತಮಿಳಿನ ಧನುಷ್‌,ಆರ್ಯ,ಸಿದ್ಧಾರ್ಥ್, ಪ್ರಭುದೇವ ತೆಲುಗಿನ ಪೂರಿ ಜಗನ್ನಾಥ್‌,ಕಾರ್ತಿಕೇಯ ಕನ್ನಡದ ಗೋಲ್ಡನ್ ಸ್ಟಾರ್ ಗಣೇಶ್,ಮಾಲಾಶ್ರೀ, ಶ್ರೀಮುರುಳಿ, ನಿರೂಪ್ ಭಂಡಾರಿ,ಪಾರುಲ್‌ ಯಾದವ್‌, ರಶ್ಮಕಾ ಮಂದಣ್ಣ, ಹರಿಪ್ರಿಯಾ,ಸಂತೋಷ್ ಆನಂದ್ ರಾಮ್ ಸೇರಿದಂತೆ ಬಹಳಷ್ಟು ಸೆಲೆಬ್ರಿಟಿಗಳು  […]Read More

‘ಸುವರ್ಣ ಸುಂದರಿ’ ಚಿತ್ರದ ಕ್ರಿಯೇಟಿವ್ ವಿಡಿಯೋ ಇನ್ವಿಟೇಶನ್‌

ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕ ಕಾಲಕ್ಕೆ ತಯಾರಾಗುತ್ತಿರುವ “ಸುವರ್ಣ ಸುಂದರಿ” ಸಿನಿಮಾದ ಟ್ರೇಲರ್‌ ಇದೇ 19ಕ್ಕೆ ಬಿಡುಗಡೆಯಾಗಲಿದೆ. ಈ ಟ್ರೇಲರ್‌ ಬಿಡುಗಡೆ ಸಮಾರಂಭಕ್ಕಾಗಿ ಚಿತ್ರತಂಡ ವಿಡಿಯೋ ಇನ್ವಿಟೇಶನ್‌ ಕಾರ್ಡ್‌ ಮಾಡಿಸಿದೆ. . ಹೌದು ಜಯಪ್ರದಾ,ಪೂರ್ಣ, ಸಾಕ್ಷಿ, ತಿಲಕ್, ಸಾಯಿ ಕುಮಾರ್, ಜೈ ಜಗದೀಶ್, ರಾಮ್, ಅವಿನಾಶ್, ಇಂದಿರಾ, ಸತ್ಯಪ್ರಕಾಶ್ ನಟನೆಯ ಸುವರ್ಣ ಸುಂದರಿ ಸಿನಿಮಾದಿಂದ ಈ ಹಿಂದೆ ಒಂದು ಟೀಸರ್‌ ಮತ್ತು ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಗಿತ್ತು. ಇವುಗಳು ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿ ಮಾಡಿದ್ದವು. ಈಗ […]Read More

“ಮಿಸ್ಸಿಂಗ್ ಬಾಯ್” ಚಿತ್ರ ವಿಮರ್ಶೆ

ಚಿತ್ರ: ಮಿಸ್ಸಿಂಗ್‌ ಬಾಯ್‌.  ನಿರ್ದೇಶಕ: ರಘುರಾಮ್‌.  ನಿರ್ಮಾಣ: ಕೊಲ್ಲ ಪ್ರವೀಣ್‌.  ಕಲಾವಿದರು: ಗುರುನಂದನ್‌, ಆರ್ಚನಾ, ರಂಗಾಯಣ ರಘು, ಭಾಗಿರಥಿ ಬಾಯಿ ಕದಂ ಮತ್ತಿತರರು. . ನೈಜ ಘಟನೆಗಳಿಗೆ ಸಿನಿಮಾ ರೂಪ ಆಗಾಗ ಸ್ಯಾಂಡಲ್‌ವುಡ್‌ನಲ್ಲಿ ನಡೆಯುತ್ತಲೇ ಇರುತ್ತದೆ. ಆದರೆ ಎಲ್ಲ ಸಿನಿಮಾಗಳಲ್ಲಿಯೂ ಕಥೆಗೆ ನ್ಯಾಯ ಸಲ್ಲಿಸಲು ಸಾಧ್ಯವಾಗಿಲ್ಲ. ಆದರೆ “ಮಿಸ್ಸಿಂಗ್‌ ಬಾಯ್‌” ವಿಚಾರದಲ್ಲಿ ಅದು ಸುಳ್ಳಾಗಿದೆ. ನಿರ್ದೇಶಕ ರಘುರಾಮ್‌ ಮಿಸ್ಸಿಂಗ್‌ ಬಾಯ್‌ ಸಿನಿಮಾಗೆ ಬರೀ ನಿರ್ದೇಶನ ಮಾಡಿಲ್ಲ ಜೀವ ತುಂಬಿದ್ದಾರೆ. . ಹಲವು ವರ್ಷಗಳ ಹಿಂದೆ ಉತ್ತರಕರ್ನಾಟಕದ ಒಬ್ಬ […]Read More

ಮಂಗಳೂರು ಭಾಷೆಯಲ್ಲಿ ನಕ್ಕು ನಗಿಸುವ ಡಿ ಕೆ ಬೋಸ್‌ – ಚಿತ್ರ ವಿಮರ್ಶೆ

  ಚಿತ್ರ: ಡಿ ಕೆ ಬೋಸ್‌.  ನಿರ್ದೇಶಕ: ಸಂದೀಪ್‌ ಮಹಾಂತೇಶ್‌.  ನಿರ್ಮಾಣ:ನರಸಿಂಹ ಮೂರ್ತಿ.  ತಾರಾಗಣ: ಪೃಥ್ವಿ, ರಘು ಪಾಂಡೇಶ್ವರ್‌, ರಿಷಾ,ಭೋಜರಾಜ್ ವಾಮೊಂಜೂರ್  ಮತ್ತಿತರರು.  – ಕರಾವಳಿ ಭಾಷೆಯಲ್ಲಿ ಸಿನಿಮಾ ಮಾಡಿದರೆ ಪಕ್ಕಾ ನಗಿಸಬಹುದು ಎಂದು ತಿಳಿದಿಕೊಂಡಿರುವ ಸಾಕಷ್ಟು ನಿರ್ದೇಶಕರು ಆ ಭಾಷೆಯನ್ನು ಬಳಸಿಕೊಂಡು ಒಂದಷ್ಟು ಸಂದೇಶಗಳನ್ನು ಜನರಿಗೆ ತಲುಪಿಸಲು ಪ್ರಯತ್ನ ಪಡುತ್ತಿದ್ದಾರೆ. ಅಂತಹ ಪ್ರಯತ್ನಗಳಲ್ಲಿ ಡಿ ಕೆ ಬೋಸ್‌ ಸಹ ಒಂದು.. ಹಿಂದೆ ಮುಂದೆ ಯಾರು ಇರದ ಇಬ್ಬರು ಹುಡುಗರು ಕಳ್ಳತನ ಮಾಡಿಕೊಂಡು ಜೀವನ ನಡೆಸುತ್ತಿರುತ್ತಾರೆ. ಇಂತಹವರ […]Read More