2020 ಬೇಸಿಗೆಗೆ ದರ್ಶನ್ ‘ರಾಬರ್ಟ್’ ತೆರೆಗೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಸ್ತುತ “ಒಡೆಯ” ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆಯೇ ದರ್ಶನ್, ತರುಣ್ ಸುಧೀರ್ ಜತೆಯಾಗಿ ತಯಾರಿಸುತ್ತಿರುವ ಚಿತ್ರ “ರಾಬರ್ಟ್ ನಲ್ಲಿ ಸಹ ತಾವು ಅಭಿನಯಿಸುವುದು ಖಾತ್ರಿ ಪಡಿಸಿದ್ದಾರೆ. ಈ ಚಿತ್ರವು ಏಪ್ರಿಲ್ 19ರ ನಂತರ ಸೆಟ್ಟೇರಲಿದೆ ಎಂದು ನಿರ್ದೇಶಕ ತರುಣ್ ಸುಧೀರ್ ಹೇಳಿದ್ದಾರೆ. ಅಲ್ಲದೆ 2020ರ ಬೇಸಿಗೆಯಲ್ಲಿ ದರ್ಶನ್ “ರಾಬರ್ಟ್” ತೆರೆಕಾಣಲಿದೆ ಎಂದೂ ನಿರ್ದೇಶಕ ಭರವಸೆ ಇತ್ತಿದ್ದಾರೆ.Read More

ಪತ್ತೇದಾರಿ ‘ಶಿವಾಜಿ ಸುರತ್ಕಲ್’ ಆಗಿ ರಮೇಶ್ ಅರವಿಂದ್

ರಮೇಶ್ ಅರವಿಂದ್ ನಟನೆಯ ಆಕಾಶ್ ಶ್ರೀವತ್ಸ ನಿರ್ದೇಶನದ ಚಿತ್ರಕ್ಕೆ ಶಿವಾಜಿ ಸುರತ್ಕಲ್ ಎಂಬ ಶೀರ್ಷಿಕೆ ಅಂತಿಮವಾಗಿದೆ, ಚಿತ್ರದ ಶೇಕಡಾ 30ರಷ್ಟು ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. ಪತ್ತೇದಾರಿಯೊಬ್ಬನ ಪಾತ್ರದ ಹೆಸರು ಶಿವಾಜಿ ಸುರತ್ಕಲ್ ಆಗಿದ್ದು ಅದನ್ನು ರಮೇಶ್ ಅರವಿಂದ್ ನಿರ್ವಹಿಸುತ್ತಿದ್ದಾರೆ. ರಣಗಿರಿ ರಹಸ್ಯ ಎಂಬುದು ಇದರ ಟ್ಯಾಗ್ ಲೈನ್ ಆಗಿದೆ.Read More