• All
  • Bhramhachari
  • Daanish Seth
  • Humble Politician Nograj
  • Nagendra Prasad
  • Pannagabharana
  • Saadh Khan
  • Sathish
  • Uday k Mehtha
  • Ughe Ughe Madheshwara

ಪ್ರಶ್ನೆ..? ಒಂದು ವಿಭಿನ್ನ ಕಿರುಚಿತ್ರ ತಪ್ಪದೇ ನೋಡಿ.

ನವರಸ ನಟನ ಚಲನಚಿತ್ರ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳಿಂದ ಒಂದು ವಿಭಿನ್ನ ಕಿರುಚಿತ್ರ ಮೂಡಿಬಂದಿದೆ. ಚಿತ್ರದ ಹೆಸರು ’ಪ್ರಶ್ನೆ’. ಹೌದು ಚಿತ್ರದ ಶೀರ್ಷಿಕೆಯಂತೆ ಚಿತ್ರವು ವಿಭಿನ್ನವಾಗಿರುವುದಂತು ಸತ್ಯ. ಕೆಲ ತಿಂಗಳುಗಳ ಹಿಂದೆ ಹೆಸರಾಂತ ದೇವಸ್ಥಾನದಲ್ಲಿ ಊಟಕ್ಕೆ ವಿಷ ಬೆರೆಸಿದ ಘಟನೆ ನಡೆದಿತ್ತು. ಇದರಲ್ಲಿ 10 ಜನರು ಪ್ರಾಣ ಕಳೆದುಕೊಂಡಿದ್ದು, 65 ಕ್ಕೂ ಹೆಚ್ಚು ಮಂದಿ ಆಸ್ಪತ್ರೆ ಸೇರಿದ್ದರು. ಇದನ್ನು ಕಥೆಯ ವಸ್ತುವಾಗಿ ಇಟ್ಟುಕೊಂಡು ಹೆಣೆದಿರುವ ಕಥೆಯು ನೋಡುಗರನ್ನು ಮಂತ್ರ ಮುಗ್ಧಗೊಳಿಸುವುದಂತು ಖಂಡಿತ. ಈ ಕಿರು ಚಿತ್ರದ ಕಥಾ ಸಂಭಾಷಣೆ […]

ಹಂಬಲ್‌ ಪೋಲಿಟಿಶಿಯನ್‌ ನೋಗರಾಜ್‌ ಸಿಕ್ವೇಲ್‌ ?

ಫ್ರಾಂಕ್‌ ಕಾಲ್‌ ಮತ್ತು ಆರ್‌ಸಿಬಿ ಇನ್‌ಸೈಡರ್‌ ಆಗಿ ಫೇಮಸ್‌ ಆಗಿದ್ದ ದಾನಿಶ್‌ ಸೇಠ್‌ ಕಳೆದ ವರ್ಷ ಹಂಬಲ್‌ ಪೋಲಿಟಿಶಿಯನ್‌ ನೋಗರಾಜ್‌ ಸಿನಿಮಾ ಮೂಲಕ ನಾಯಕರಾಗಿ ಎಂಟ್ರಿ ಕೊಟ್ಟಿದ್ದರು, ಆ ಸಿನಿಮಾದಿಂದ ಮತ್ತಷ್ಟು ಜನಪ್ರಿಯತೆ ಪಡೆದುಕೊಂಡಿದ್ದರು. ಈಗ ಅದರ ಮುಂದಿನ ಭಾಗವನ್ನು ಮಾಡುವುದಾಗಿ ಅವರು ತಮ್ಮ ಇನ್‌ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ ಹಾಕಿಕೊಂಡಿದ್ದಾರೆ. ಮೊದಲ ಸಿನಿಮಾವನ್ನು ದಾನಿಶ್‌ ಅವರ ಗೆಳೆಯ ಸಾದ್‌ಖಾನ್‌ ನಿರ್ದೇಶನ ಮಾಡಿದ್ದರು. ಈ ಸಿನಿಮಾವನ್ನು ಯಾರು ನಿರ್ದೇಶನ ಮಾಡುತ್ತಾರೆ ಎಂಬುದು ಇನ್ನೂ ರೀವಿಲ್‌ ಆಗಿಲ್ಲ. ಆದರೆ ಸಾದ್‌ ತಂಡದಲ್ಲಿ […]

ಬ್ರಹ್ಮಚಾರಿಯಾದ ಸತೀಶ್‌

ನೀನಾಸಂ ಸತೀಶ್‌ ಮತ್ತು ಉದಯ್‌ ಕೆ ಮೆಹ್ತಾ ಲವ್‌ ಇನ್‌ ಮಂಡ್ಯ ಸಿನಿಮಾದ ನಂತರ ಒಂದಾಗಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ವು. ಈಗ ಅವರ ಸಿನಿಮಾಗೆ ಬ್ರಹ್ಮಚಾರಿ ಎಂಬ ಟೈಟಲ್‌ ಇಡಲಾಗಿದೆ. ಈ ಹಿಂದೆ ಲವ್‌ ಇನ್‌ ಮಂಡ್ಯ ಸಿನಿಮಾದಲ್ಲಿ ಸತೀರ್ಶ್ ಕೇಬಲ್‌ ಕರ್ಣ ಎಂಬ ರೋಲ್‌ನಲ್ಲಿ ನಟಿಸಿದ್ದರು. ಅದನ್ನು ಉದಯ್‌ ಮೇಹ್ತಾ ನಿರ್ಮಾಣ ಮಾಡಿದ್ದರು. ಈಗ ಇಬ್ಬರೂ ಮತ್ತೆ ಒಂದಾಗಿದ್ದೇವೆ, ಸದ್ಯದಲ್ಲೇ ಹೊಸ ಸುದ್ದಿ ನೀಡುತ್ತೇವೆ ಎಂದಿದ್ದರು. ಸದ್ಯ ಟೈಟಲ್‌ ಮಾತ್ರ ಫೈನಲ್‌ ಆಗಿದ್ದು, ಉಳಿದ ವಿವರಗಳನ್ನು […]

‘ಉಘೇ ಉಘೇ ಮಾದೇಶ್ವರ’ ಧಾರಾವಾಹಿಯಲ್ಲಿ ನಾಗೇಂದ್ರ ಪ್ರಸಾದ್ !

ಖ್ಯಾತ ಗೀತರಚನೆಕಾರ, ನಿರ್ದೇಶಕ ನಾಗೇಂದ್ರ ಪ್ರಸಾದ್ ಜೀ ಕನ್ನಡ ವಾಹಿನಿಯಲ್ಲಿ ಪ್ರತಿ ಶನಿ-ಭಾನುವಾರ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿರುವ ‘ಉಘೇ ಉಘೇ ಮಾದೇಶ್ವರ’ ಧಾರಾವಾಹಿಯಲ್ಲಿ ಓಜಯ್ಯ ಎಂಬ ಪ್ರಮುಖ ಖಳ ಪಾತ್ರದಲ್ಲಿ ನಟಿಸುತ್ತಿದ್ದಾರೆ. ‘ಉಘೇ ಉಘೇ ಮಾದೇಶ್ವರ’ ಧಾರಾವಾಹಿ ಯಶಸ್ವಿ ಆರು ತಿಂಗಳು ಪೂರೈಸಿದ್ದು, ಈ ಹಂತದಲ್ಲಿ ಕಥೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈ ಪಯಣದಲ್ಲಿ ಬರುವುದೇ ‘ಓಜಯ್ಯನ ಸಾಲು’.  ಓಜಯ್ಯ ಎಂಬ ದುಷ್ಟ ಬುದ್ಧಿಯ ಶಿಕ್ಷಕ, ಶಿಷ್ಯಂದಿರಲ್ಲಿ ತಾರತಮ್ಯ ಮಾಡುತ್ತ ಜಾತಿ ಭೇದ ಮೆರೆಯುತ್ತಿರುತ್ತಾನೆ. ಸಿದ್ದಮ್ಮ […]

ಬದ್ರಿ ಒಬ್ಬ ದೇಶ ಭಕ್ತ

  ‘ಬದ್ರಿ ವರ್ಸಸ್‌ ಮಧುಮತಿ’ ಸಿನಿಮಾ ಸುಂದರ ಪ್ರೇಮ ಕಥೆಯನ್ನು ಹೊಂದಿದೆ. ಈ ಸಿನಿಮಾದ ನಾಯಕ ದೇಶ ಭಕ್ತನಾಗಿರುತ್ತಾನೆ..   ತೆಲುಗಿನಲ್ಲಿ 60ಕ್ಕೂ ಹೆಚ್ಚು ಸಿನಿಮಾಗಳಿಗೆ ಕಥೆ, ಚಿತ್ರಕಥೆ ಸಂಭಾಷಣೆ ಬರೆದಿರುವ ಶಂಕರನಾರಾಯಣರೆಡ್ಡಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ನಾಯಕ ದೇಶ ಭಕ್ತ ಎನ್ನುವ ಕಾರಣಕ್ಕೆ ಸಿನಿಮಾದಲ್ಲಿ ಪಾಕಿಸ್ತಾನದ ವಿರುದ್ಧ ನಡೆಯುವ ಯುದ್ಧ ಸನ್ನಿವೇಶಗಳನ್ನು ಚಿತ್ರೀಕರಿಸಲಾಗಿದೆ. ಸರ್ಜಿಕಲ್‌ ಸ್ಟ್ರೈಕ್‌ ಸಹ ಸಿನಿಮಾದಲ್ಲಿದೆ. . ಈ ಸಿನಿಮಾದಲ್ಲಿ ಉತ್ತಮ ಹಾಡುಗಳಿದ್ದು ಈಗಾಗಲೇ ಅವು ಹಿಟ್‌ ಆಗಿದೆ. ಪ್ರತಾಪವನ್‌ ಎಂಬ […]

ಹೊಸಬರ “ಅಲ್ಲೇ ಡ್ರಾ ಅಲ್ಲೇ ಬಹುಮಾನ” ಶುರು

ಜನನಿ ಫಿಲಂಸ್ ಲಾಂಛನದಡಿಯಲ್ಲಿ ನಿರ್ಮಾಪಕ ಬಿ.ಜೆ. ಪ್ರಶಾಂತ್ ನಿರ್ಮಿಸುತ್ತಿರುವ “ಅಲ್ಲೇ ಡ್ರಾ ಅಲ್ಲೇ ಬಹುಮಾನ” ಚಿತ್ರದ ಚಿತ್ರೀಕರಣವು ಇದೇ 14ರಂದು ನಗರದಲ್ಲಿ ಆರಂಭವಾಯಿತು. ಚಿತ್ರದ ಮುಹೂರ್ತ ದೃಶ್ಯವನ್ನು ತ್ರಿವೇಣಿ ಕೃಷ್ಣ, ಶೌರ್ಯ ದೇವಸ್ಥಾನಕ್ಕೆ ಬಂದು ದೇವರನ್ನು ಪ್ರಾರ್ಥಿಸುವ ಸನ್ನಿವೇಶವನ್ನು ಸತೀಶ್‍ ರಾಜೇಂದ್ರನ್‍ ಛಾಯಾಗ್ರಹಣದಲ್ಲಿ ನಿರ್ದೇಶಕ ರತನ್‍ತೀರ್ಥ ಚಿತ್ರಿಸಿಕೊಂಡರು..ಪ್ರಥಮ ಹಂತದ ಚಿತ್ರೀಕರಣವು 10 ದಿವಸಗಳ ಕಾಲ ನಗರದ ಸುತ್ತಮುತ್ತ ನಡೆಯಲಿದೆಎಂದು ನಿರ್ಮಾಪಕರು ತಿಳಿಸಿದ್ದಾರೆ.ಚಿತ್ರಕ್ಕೆ ಪ್ರಶಾಂತ್ ವೈ.ಎನ್. ಅಭಿನಂದನ್‍ ದೇಶಪ್ರಿಯ ಸಂಭಾಷಣೆ, ಸತೀಶ್‍ ರಾಜೇಂದ್ರನ್‍ ಛಾಯಾಗ್ರಹಣ, ನಾಗಭೂಷಣ್ ಸಾಹಿತ್ಯ, ವಿಜಯ್‍ರಾಜ್ […]

“ವೀಕೆಂಡ್” ಚಿತ್ರಕ್ಕೆ ಸಿಕ್ತು ಯು/ಎ ಸರ್ಟಿಫಿಕೇಟ್ ; ಏಪ್ರಿಲ್ ನಲ್ಲಿ ಬಿಡುಗಡೆ

ಮಯೂರ ಮೋಷನ್ ಪಿಕ್ಚರ್ಸ್ ಲಾಂಛನದಲ್ಲಿ ಮಂಜುನಾಥ್ ಡಿ ಅವರು ನಿರ್ಮಿಸುತ್ತಿರುವ `ವೀಕೆಂಡ್` ಚಿತ್ರಕ್ಕೆ ಸೆನ್ಸಾರ್ ಮುಗಿದಿದ್ದು, ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ಪಡೆದಿದೆ. .ಶೃಂಗೇರಿ ಸುರೇಶ್ ನಿರ್ದೇಶನದ ಈ ಚಿತ್ರಕ್ಕೆ ಶಶಿಧರ್ ಅವರ ಛಾಯಾಗ್ರಹಣವಿದೆ. ಮನೋಜ್ ಸಂಗೀತ ನಿರ್ದೇಶನ, ರುದ್ರೇಶ್ ಸಂಕಲನ, ಬಾಬು ಖಾನ್ ಕಲಾ ನಿರ್ದೇಶನ, ಮಂಜುನಾಥ್ ಜಂಬೆ ಸಹ ನಿರ್ದೇಶನ ಹಾಗೂ ರಾಮು, ಯೋಗಾನಂದ್ ನಿರ್ಮಾಣ ನಿರ್ವಹಣೆಯಿದೆ. .ಉತ್ತಮ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಮೂರು ಹಾಡುಗಳು, ಒಂದು ಸಾಹಸ ಸನ್ನಿವೇಶ ಹಾಗೂ ಒಂದು […]

‘ಕಲಾವಿಧ ಫಿಲಂ ಅಕಾಡೆಮಿ’ ಉದ್ಘಾಟನೆ ಮಾಡಿದ ಅಭಿನಯ ಚಕ್ರವರ್ತಿ ಸುದೀಪ್

ನಟ,ಪತ್ರಕರ್ತ,ನಿರೂಪಕ ಯತಿರಾಜ್‌ ಇತ್ತೀಚೆಗೆ ‘ಕಲಾವಿಧ ಫಿಲಂ ಅಕಾಡೆಮಿ’ ಎಂಬ ನಟನಾ ಶಾಲೆಯೊಂದನ್ನು ತೆರೆದಿದ್ದು, ಅದನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಉದ್ಘಾಟನೆ ಮಾಡಿದರು. . ಈ ನಟನಾ ಶಾಲೆಯ ಸಾರಥ್ಯವನ್ನು ರಂಗಿತರಂಗ ಖ್ಯಾತಿಯ ಅರವಿಂದ ವಹಿಸಿಕೊಂಡಿದ್ದಾರೆ. ಈ ಫಿಲಂ ಅಕಾಡೆಮಿಯನ್ನು ಉದ್ಘಾಟಿಸಿ ‘ತರಬೇತಿ ಶಾಲೆಯಲ್ಲಿ ಕಲಿತವರೆಲ್ಲರೂ ನಟರಾಗಲು ಸಾಧ್ಯವಿಲ್ಲ. ಕಲೆಯನ್ನು ಪ್ರೀತಿಸಿದರೆ ಅದು ನಮ್ಮನ್ನು ಪ್ರೀತಿಸುತ್ತದೆ. ಅದಕ್ಕಾಗಿ ಮೊದಲು ಪ್ರೀತಿಸುವುದನ್ನು ಕಲಿಯಿರಿ. ಅರವಿಂದ್‌ ಮತ್ತು ಯತಿರಾಜ್‌ ನನಗೆ ಬಹಳ ವರ್ಷಗಳಿಂದ ಪರಿಚಿತರು ಅವರ ಈ ಸಾಹಸ ಯಶಸ್ವಿಯಾಗಲಿ. […]

ಉಪ್ಪಿ ಶಿಷ್ಯನ ‘ಫೇಸ್‌ ಟು ಫೇಸ್’

ರಿಯಲ್‌ ಸ್ಟಾರ್‌ ಉಪೇಂದ್ರ ಜತೆ ನಾಲ್ಕೈದು ಸಿನಿಮಾಗಳಲ್ಲಿ ಕೆಲಸ ಮಾಡಿದ ಸಂದೀಪ್‌ ಜನಾರ್ಧನ್‌ ಆ್ಯಕ್ಷನ್‌ ಕಟ್‌ ಹೇಳಿರುವ ‘ಫೇಸ್‌ ಟು ಫೇಸ್‌’ ಸಿನಿಮಾ ಮಾರ್ಚ್‌ 15ಕ್ಕೆ ಬಿಡುಗಡೆಯಾಗುತ್ತಿದೆ. . ಇಬ್ಬರು ಹುಡುಗಿಯರ ಜತೆ ಒಬ್ಬ ಒಳ್ಳೆಯ ಹುಡುಗ ಸೇರಿಕೊಂಡ್ರೆ ಏನಾಗುತ್ತದೆ ಎಂಬುದೇ ಸಿನಿಮಾದ ಕಥೆ. ದೃಶ್ಯ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟ ರೋಹಿತ್‌ ಭಾನುಪ್ರಕಾಶ್‌ ಫೇಸ್‌ಟು ಫೇಸ್‌ ಸಿನಿಮಾದಲ್ಲಿ ನಾಯಕರಾಗಿದ್ದಾರೆ. ದಿವ್ಯ ಉರುಡುಗ, ಪೂರ್ವಿ ನಾಯಕಿಯರಾಗಿ ನಟಿಸಿದ್ದಾರೆ.   . ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್‌ […]

ಮಾರ್ಚ್ 4ರಿಂದ ಉದಯ ಟಿವಿಯಲ್ಲಿ ಹೊಸ ಧಾರಾವಾಹಿ “ಕ್ಷಮಾ”

  ಉದಯ ಟಿವಿ ಹೊಸ ಹೊಸ ಕಥೆಗಳ ಮುಖಾಂತರ ವೀಕ್ಷಕರ ಮನಗೆಲ್ಲುವಲ್ಲಿ ಸದಾ ಮುಂಚೂಣಿಯಲ್ಲಿರುತ್ತದೆ. ಈಗ ಮಹಿಳಾ ಪ್ರಧಾನ ಕಥೆಯೊಂದನ್ನು ನಿಮ್ಮ ಮುಂದೆತರಲು ಸಜ್ಜಾಗಿದೆ. ಮಹಿಳೆ ಇಂದು ಎಲ್ಲ ಕ್ಷೇತ್ರಗಳಲ್ಲೂ ಛಾಪನ್ನು ಮೂಡಿಸಿದ್ದಾಳೆ. ಮನೆಯನ್ನು ಸೌಹಾರ್ದಯುತವಾಗಿ ನಡೆಸುವುದರಿಂದ ಹಿಡಿದು ಕಾರ್ಯಕ್ಷೇತ್ರದಲ್ಲೂ ಅಗ್ರಸ್ಥಾನವನ್ನು ಸಾಧಿಸಬಲ್ಲಳು ಎಂಬುದನ್ನು ಸಾಬೀತುಪಡಿಸಿದ್ದಾಳೆ. ಹಾಗಾಗೀನೇ ಹೆಣ್ಣನ್ನು ಕ್ಷಮೆಗೆ ಮತ್ತೊಂದು ಹೆಸರು ಎನ್ನುತ್ತಾರೆ. ಭೂಮಿಗೆ ಮತ್ತೊಂದು ರೂಪಎನ್ನುತ್ತಾರೆ. ಇಂತಹ ಭೂಮಿತೂಕದ ಹೆಣ್ಣಿನಕಥೆ “ಕ್ಷಮಾ” ಉದಯಟಿವಿಯಲ್ಲಿ ಮಾರ್ಚ್ 4ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ 8ಕ್ಕೆ ಶುರುವಾಗಲಿದೆ. .ಮಧ್ಯಮ […]

“ಲಂಡನಲ್ಲಿ ಲಂಬೋಧರ” ಚಿತ್ರದ ಹಾಡಿಗೆ ಸಿಕ್ತು ಉತ್ತಮ ರೆಸ್ಪಾನ್ಸ್.

‘ಲಂಡನ್ ಸ್ಕ್ರೀನ್ಸ್’ ಸಂಸ್ಥೆಯಡಿ ನಿರ್ಮಾಣವಾಗುತ್ತಿರುವ ‘ಲಂಡನ್ನಲ್ಲಿ ಲಂಬೋದರ’ ಚಿತ್ರದ ಮೊದಲ ಲಿರಿಕಲ್ ವಿಡಿಯೋ ಮೊನ್ನೆ ಬಿಡುಗಡೆಗೊಂಡಿದೆ. ಆನಂದ್ ಆಡಿಯೋ ಮೂಲಕ ಬಿಡುಗಡೆ ಆಗಿರುವ ಈ ಹಾಡು ಪ್ರೇಕ್ಷಕರ ಮೆಚ್ಚುಗೆ ಪಡೆಯುತ್ತಿದೆ . . ಈಗ ಬಿಡುಗಡೆಯಾಗಿರುವ “ಟೇಕ್ಆಫ್” ಎನ್ನುವ ಹಾಡೂ ಸಹವೇಗವಾಗಿ ಜನರಮೆಚ್ಚುಗೆಯನ್ನುಪಡೆಯುತ್ತಿದೆ. ಪ್ರಸ್ತುತ ಈ ಹಾಡನ್ನು ಪ್ರಣವ್ ಅವರು ಸ್ವತಃ ಬರೆದಿದ್ದು ಹಾಡಿಗೆ ರಿನೋಸ್ಜಾರ್ಜ್ಅವರು ತಮ್ಮ ಕಂಠವನ್ನು ನೀಡಿದ್ದಾರೆ. ಹಾಡು ಕೇಳುವುದಕ್ಕೆ ಟ್ರೆಂಡಿ ಆಗಿದ್ದು, ಇಂಗ್ಲಿಷ್ಮತ್ತು ಕನ್ನಡದ ಒಳ್ಳೆಯ ಮಿಲನವು ಇದರಲ್ಲಿ ಕಾಣಿಸುತ್ತಿದೆ. ಎರಡೂ ಭಾಷೆಗಳ […]

ಉದಯ ಟಿವಿಯಲ್ಲಿ ಹೊಸ ಧಾರಾವಾಹಿ “ಸೇವಂತಿ”

ಕನ್ನಡದ ಮನರಂಜನಾ ಕ್ಷೇತ್ರದಲ್ಲಿ ಇಪ್ಪತ್ತೈದು ಯಶಸ್ವಿ ವರ್ಷಗಳನ್ನು ಸದ್ಯದಲ್ಲಿಯೇ ಪೂರೈಸುತ್ತಿರುವಉದಯ ಟಿವಿ ಧಾರಾವಾಹಿಗಳಿಂದಲೇ ಮನೆಮಾತಾಗಿದೆ. ಒಂದಕ್ಕಿಂತಒಂದು ವಿಭಿನ್ನ ಕಥೆಗಳನ್ನು ಕನ್ನಡದ ವೀಕ್ಷಕರಿಗೆ ನೀಡಿದೆ. ಈ ಸಾಲಿನಲ್ಲಿ ಈಗ ಹೊಸ ಸೇರ್ಪಡೆ“ಸೇವಂತಿ”. . ದಿನದಿಂದ ದಿನಕ್ಕೆ ವಿಸ್ತಾರವಾಗುತ್ತಿದೆಕನ್ನಡದ ಮನರಂಜನಾ ವಾಹಿನಿಗಳ ವ್ಯಾಪ್ತಿ. ಹೊಸ ತಂತ್ರಜ್ಞಾನ, ವಿನೂತನಕಥಾ ಹಂದರ, ನವಿರಾದ ನಿರೂಪಣೆಎಲ್ಲವನ್ನೂ ಒಳಗೊಂಡು ಕನ್ನಡದ ವೀಕ್ಷಕರಿಗೆ ಹೊಸ ಧಾರಾವಾಹಿಯನ್ನು ಉಣಬಡಿಸಲು ಸಿದ್ಧತೆ ನಡೆಸಿದೆಉದಯ ಟಿವಿ. ‘ಸೇವಂತಿ’ ಎಂಬ ಈ ಸುಂದರಧಾರಾವಾಹಿ ಫೆ. 25 ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7.30ಕ್ಕೆ […]

ಚಿತ್ರೀಕರಣ ಮುಗಿಸಿದ “ಪೈಲ್ವಾನ್”

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಪೈಲ್ವಾನ್ ಚಿತ್ರದ ಚಿತ್ರೀಕರಣ ಕಂಪ್ಲೀಟ್ ಆಗಿದೆ. . ಹೆಬ್ಬುಲಿ ಕೃಷ್ಣ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾ ಬರೀ ಟೀಸರ್ ನಿಂದಲೇ ಭಾರತೀಯ ಚಿತ್ರರಂಗದ ಗಣ್ಯರ ಗಮನ ಸೆಳೆದಿತ್ತು. ಇತ್ತೀಚೆಗೆ ಮುಂಬೈನಲ್ಲಿ ರೊಮ್ಯಾಂಟಿಕ್ ಹಾಡಿನ ಚಿತ್ರೀಕರಣ ಕಂಪ್ಲೀಟ್ ಮಾಡುವ ಮೂಲಕ ಸಿನಿಮಾವನ್ನು ಮುಗಿಸಿದ್ದಾರೆ ನಿರ್ದೇಶಕ ಕೃಷ್ಣ . . “ಏನು ಮಾಡ್ಲಿ ಹೊಡೀತು ಕಣ್ಣು ಚಪ್ಪಾಳೆ” ಎಂದು ಶುರುವಾಗುವ ಈ ಡ್ಯುಯೆಟ್ ಹಾಡನ್ನು ಬಾಲಿವುಡ್ ನ ಖ್ಯಾತ ನೃತ್ಯ ಸಂಯೋಜಕ […]

“ಡಿ. ಕೆ ಬೋಸ್” – ಫೆಬ್ರವರಿ 24ಕ್ಕೆ ಟ್ರೈಲರ್ ; ಮಾರ್ಚ್ 15ಕ್ಕೆ ಚಿತ್ರ ಬಿಡುಗಡೆ

  ಬ್ರೇಕ್ ಫ್ರೀ ಸಿನಿಮಾಸ್ ಲಾಂಛನದಲ್ಲಿ ಸಂತೋಷ್ ಮಹಂತೇಶ್ ಹಾಗೂ ನರಸಿಂಹಮೂರ್ತಿ ಅವರು ನಿರ್ಮಿಸಿರುವ `ಡಿ.ಕೆ.ಬೋಸ್` ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಮಾರ್ಚ್ 15 ರಂದು ಚಿತ್ರ ತೆರೆಗೆ ಬರಲಿದೆ. ಚಿತ್ರದ ಟ್ರೇಲರ್ ಫೆಬ್ರವರಿ 24 ರಂದು ಬಿಡುಗಡೆಯಾಗಲಿದೆ. . `ಡೈಮೆಂಡ್ ಹುಡುಕಿಕೊಂಡು ಮಂಗಳೂರಿಗೆ ಇಬ್ಬರು ಕಳ್ಳರು ಬರುತ್ತಾರೆ. ಅವರು ಬಂದ ಮೇಲೆ ಅಲ್ಲಿ ಏನೇನು ಘಟನೆಗಳು ನಡೆಯುತ್ತದೆ ಎನ್ನುವ ಕಥಾ ಹಂದರವುಳ್ಳ ಈ ಚಿತ್ರವನ್ನು ಚಿತ್ರದ ನಿರ್ಮಾಪಕರಲೊಬ್ಬರಾದ ಸಂತೋಷ್ ಮಹಂತೇಶ್ ಅವರ ಸಹೋದರ ಸಂದೀಪ್ ಮಹಂತೇಶ್ ನಿರ್ದೇಶಿಸಿದ್ದಾರೆ. […]

ಕರುನಾಡ ಚಕ್ರವರ್ತಿಗೆ 33 ರ ಸಂಭ್ರಮ

ವಯಸ್ಸು 50 ದಾಟಿದರೂ ಚಿರ ಯುವಕನಂತೆ ನಟಿಸುವ ಸ್ಯಾಂಡಲ್‌ವುಡ್‌ನ ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ಚಿತ್ರರಂಗಕ್ಕೆ ಕಾಲಿಟ್ಟು ಮಂಗಳವಾರಕ್ಕೆ 33 ವರ್ಷಗಳಾಗಿವೆ. ಫೆಬ್ರವರಿ 16 1986 ರಂದು ಶಿವಣ್ಣರ ಮೊದಲ ಸಿನಿಮಾ “ಆನಂದ್” ಬಿಡುಗಡೆಯಾಗಿತ್ತು. . ಆನಂದ್ ಸಿನಿಮಾದ ಮೂಲಕ ಬೆಳ್ಳಿತೆರೆ ಪ್ರವೇಶ ಮಾಡಿದ ಶಿವಣ್ಣ ನೂರಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆನಂದ್‌ ನಂತರ ರಥಸಪ್ತಮಿ, ಮನಮೆಚ್ಚಿದ ಹುಡುಗಿ ಸೂಪರ್‌ ಹಿಟ್‌ ಆದವು ಹಾಗಾಗಿ ಅವರಿಗೆ ಹ್ಯಾಟ್ರಿಕ್‌ ಹಿರೋ ಎಂಬ ಬಿರುದನ್ನು ಅಭಿಮಾನಿಗಳು ನೀಡಿದರು. ಜನುಮದ ಜೋಡಿ, ಓಂ,ಜೋಗಿ,ಟಗರು ಸೇರಿದಂತೆ […]

“ಸ್ಟ್ರೈಕರ್‌” ಹಿಡಿದ ಚೂರಿಕಟ್ಟೆ ಪ್ರವೀಣ್‌

  ಸಿಂಪಲ್ಲಾಗಿನ್ನೊಂದು ಲವ್‌ಸ್ಟೋರಿ ಚೂರಿಕಟ್ಟೆ ಮೂಲಕ ಗಮನ ಸೆಳೆದಿದ್ದ ನಟ ಪ್ರವೀಣ್‌ ತೇಜ್‌ ಈ ಸ್ಟ್ರೈಕರ್‌ ಸಿನಿಮಾ ಮೂಲಕ ತೆರೆ ಮೇಲೆ ಬರಲು ತಯಾರಿ ನಡಿಸಿದ್ದಾರೆ. ಪವನ್ ತ್ರಿವಿಕ್ರಮ ಎಂಬುವವರು ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಈ ಸಿನಿಮಾ ಸಸ್ಪೆನ್ಸ್‌ ಥ್ರ್ಲಿಲ್ಲರ್‌ ಸಬ್ಜೆಕ್ಟ್‌ ಅಂತೆ. . ಚೂರಿ ಕಟ್ಟೆ ಸಿನಿಮಾದದಂತಹ ಯಶಸ್ವಿ ಸಸ್ಪೆನ್ಸ್‌ ಥ್ರಿಲ್ಲರ್‌ ಸಬ್ಜೆಕ್ಟ್ ನಲ್ಲಿ ಕಾಣಿಸಿಕೊಂಡಿದ್ದು ಪ್ರವೀಣ್‌ ಮತ್ತೊಮ್ಮೆ ಅದೇ ಥರಹದ ಸಿನಿಮಾದಲ್ಲಿ ನಟಿಸಲು ಕಥೆಯೇ ಮುಖ್ಯ ಕಾರಣವಂತೆ. ಪ್ರವಣೀ ಜತೆ ಭಜರಂಗಿ ಸೌರವ್ ಲೋಕಿ, ಶಿಲ್ಪಾ ಮಂಜುನಾಥ್ , ಧರ್ಮಣ್ಣ ಕಡೂರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. […]

“ಬೆಲ್‌ ಬಾಟಮ್‌” ಚಿತ್ರದಲ್ಲಿ ದರೋಡೆಯೇ ಪ್ರಮುಖ ಅಂಶ

ರಿಷಬ್‌ ಶೆಟ್ಟಿ ನಟನೆಯ ಬೆಲ್‌ಬಾಟಮ್‌ ಚಿತ್ರಕ್ಕೆ ಹತ್ತು ವರ್ಷಗಳ ಹಿಂದೆ ಕೋಲಾರದಲ್ಲಿ ನಡೆದಿದ್ದ ದರೋಡೆಯೇ ಪ್ರೇರಣೆಯಂತೆ. . ಇದೇ ವಾರ ಅಂದರೆ 15ರಂದು ಬಿಡುಗಡೆಯಾಗುತ್ತಿರುವ ಈ ಸಿನಿಮಾದಲ್ಲಿ ರಿಷಬ್‌ ಶೆಟ್ಟಿ ಡಿಟೆಕ್ಟಿವ್‌ ದಿವಾಕರ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜಯತೀರ್ಥ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಹರಿಪ್ರಿಯಾ ರಿಷಬ್‌ ಶೆಟ್ಟಿಗೆ ಜೋಡಿಯಾಗಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್‌ ಮತ್ತು ಹಾಡುಗಳು ಸಿನಿಮಾದ ಬಗ್ಗೆ ಕುತೂಹಲ ಸೃಷ್ಟಿ ಮಾಡಿದೆ. . ಈಗ ಸಿನಿಮಾ ನೈಜ ಕಥೆಯನ್ನು ಆಧರಿಸಿದೆ ಎಂಬ ವಿಷಯ ಕೂಡಾ ಸೇರಿಕೊಂಡು […]

‘ಚಂಬಲ್’ ಚಿತ್ರದಲ್ಲಿದ್ಯಾ ಡಿಕೆ ರವಿ ಕಥೆ??

  ಅಯೋಗ್ಯ ಸಿನಿಮಾದ ಯಶಸ್ಸಿನ ನಂತರ ನಟ ಸತೀಶ್‌ ಅವರ ಚಂಬಲ್‌ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದ್ದು, ಅದನ್ನು ನೋಡಿದರೆ ಇದು ಐಎಎಸ್‌ ಅಧಿಕಾರಿ ಡಿ ಕೆ ರವಿ ಕಥೆ ಇದ್ದ ಹಾಗಿದೆ. . ಹೌದು ಚಂಬಲ್‌ ಸಿನಿಮಾದ ಟ್ರೇಲರ್ ನೋಡಿದ ತಕ್ಷಣ ಸಾಮಾನ್ಯರಿಗೆ ಬರುವ ಅಭಿಪ್ರಾಯ ಇದಾಗಿದೆ. ಈ ಸಿನಿಮಾವನ್ನು ಜೇಕಬ್‌ ವರ್ಗೀಸ್‌ ನಿರ್ದೇಶನ ಮಾಡಿದ್ದಾರೆ. . ಈ ಹಿಂದೆ ಜೇಕಬ್‌ ಪೃಥ್ವಿ, ಸವಾರಿ ಸಿನಿಮಾಗಳಿಗೆ ಆ್ಯಕ್ಷನ್‌ ಕಟ್ ಹೇಳಿದ್ದರು. ಚಂಬಲ್‌ನಲ್ಲಿ ಸತೀಶ್‌ […]

“ಉದ್ಘರ್ಷ” ಚಿತ್ರದ ಟ್ರೈಲರ್ಗೆ ‘ಕಿಚ್ಚ’ನ ಧ್ವನಿ

ಕನ್ನಡ ಸಿನಿ ಪ್ರೇಕ್ಷಕರಿಗೆ ಸಸ್ಪೆನ್ಸ್ ಥ್ರಿಲರ್ ಚಿತ್ರಗಳ ಹುಚ್ಚು ಹಿಡಿಸಿದ ಮಾಸ್ಟರ್ ಡೈರೆಕ್ಟರ್ ಸುನೀಲ್ ಕುಮಾರ್ ದೇಸಾಯಿ, ಉದ್ಘರ್ಷದ ಮೂಲಕ ಈಗ ಮತ್ತೆ ದೊಡ್ಡ ನಿರೀಕ್ಷೆ ಹುಟ್ಟುಹಾಕಿದ್ದಾರೆ. . ಈ ಬಾರಿ ಮತ್ತೊಂದು ಸರ್ಪ್ರೈಸ್ ನೀಡಿರೋ ದೇಸಾಯಿ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಂದ ‘ಉದ್ಘರ್ಷ’ ಚಿತ್ರದ ಟ್ರೇಲರ್ಗೆ ಸೈಲಂಟ್ ಆಗಿಯೇ ಡಬ್ಬಿಂಗ್ ಮಾಡಿಸಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂನಲ್ಲಿ ಮೂಡಿ ಬಂದಿರೋ ಈ ಚಿತ್ರದ ಟ್ರೇಲರ್ ಕಂಡು ಫುಲ್ ಇಂಪ್ರೆಸ್ ಆಗಿರೋ ಕಿಚ್ಚ ಸುದೀಪ್, ಅತ್ಯಂತ […]

ಫ್ಲಮಿಂಗೊ ಅವಾರ್ಡ್ಸ್ 2018

ಸಿನಿಮಾ ಪ್ರಿಯರಿಗೆ ಡ್ಯಾನ್ಸ್, ನಟನೆ, ನಿರ್ದೇಶನ ಮತ್ತು ಮಾಡಲಿಂಗ್ ಕಲಿಯಲು ‘ಫ್ಲೆಮಿಂಗೋ ಸೆಲಬ್ರಿಟಿಸ್ ವರ್ಡ್ ಪ್ರೈ. ಲಿಮಿಟೆಡ್’ ತರಭೇತಿ ಸಂಸ್ಥೆಯು ಧವನ್‌ ಸೋಹ ಸಾರಥ್ಯದಲ್ಲಿ 2013ರಲ್ಲಿ ಪ್ರಾರಂಭ ಮಾಡಿದ್ದಾರೆ. ಉತ್ತಮ ವಿದ್ಯಾರ್ಥಿಗಳನ್ನು ಅಡಿಷನ್ ಮಾಡಿ ಕಿರುತೆರೆ, ಹಿರಿತೆರೆಗೆ ಶಿಪಾರಸ್ಸು ಮಾಡಲಾಗುತ್ತಿದೆ. ಈಗಾಗಲೇ ಹಲವು ಪ್ರತಿಭೆಗಳು ಚಿತ್ರರಂಗ ಹಾಗೂ ಮಾಡಲಿಂಗ್ ಕ್ಷೇತ್ರದಲ್ಲಿ ಬ್ಯುಸಿ ಇದ್ದಾರೆ. ಪ್ರತಿ ವರ್ಷ ಸೆಲಬ್ರಿಟಿಸ್ ಕ್ಯಾಲೆಂಡರ್ ಹೊರತರಲಾಗುತ್ತಿದೆ. ಅಲ್ಲದೆ ಕಳೆದ ನಾಲ್ಕು ವರ್ಷಗಳಿಂದ ಫ್ಯಾಷನ್ ವೀಕ್, ಮಾಡಲಿಂಗ್, ಫಿಲಿಂ ಅವಾರ್ಡ್‌ಗಳನ್ನು ನೀಡುತ್ತಾ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಾ […]