ಅಘೋರ – ಚಿತ್ರ ವಿಮರ್ಶೆ – ಸಿನಿಲೋಕ

ಚಿತ್ರ: ಅಘೋರನಿರ್ದೇಶನ:ಎನ್‌ ಎಸ್‌ ಪ್ರಮೋದ್‌ ರಾಜ್‌ನಿರ್ಮಾಣ: ಮೋಕ್ಷ ಸಿನಿಮಾಸ್‌ಸಂಗೀತ: ವಿ ನಾಗೇಂದ್ರ ಪ್ರಸಾದ್‌ಸಿನಿಮಾಟೋಗ್ರಫಿ: ಶರತ್‌ ಜಿ ಕುಮಾರ್‌ಕಲಾವಿದರು: ಪುನೀತ್‌ ಗೌಡ,ದಿವ್ಯಾ ಶೆಟ್ಟಿ, ರಚನಾ ದಶರಥ್‌, ಅವಿನಾಶ್‌, ಅಶೋಕ್‌ ರಾಜ್‌ ಮತ್ತಿತರರು. ಹಾರರ್‌ ಸಿನಿಮಾಗಳಲ್ಲಿ ಜನರನ್ನು ಬೆಚ್ಚಿ ಬೀಳಿಸಬೇಕು, ಸೀಟಿನ ತುದಿಗೆ ತರುವಂತಹ ದೃಶ್ಯಗಳನ್ನು ಕಟ್ಟಿಕೊಡಬೇಕು. ಆ ನಿಟ್ಟಿನಲ್ಲಿ ಈ ವಾರ ಬಿಡುಗಡೆಯಾಗಿರುವ ಅಘೋರ ಸಿನಿಮಾ ಪ್ರೇಕ್ಷಕರನ್ನು ಚಿತ್ರಮಂದಿರದಲ್ಲಿ ಹೆದರಿಸುವಲ್ಲಿ ತಕ್ಕ ಮಟ್ಟಿಗೆ ಗೆದ್ದಿದ್ದಾರೆ. ನಾಯಕ ಆಕಾಶ್‌ (ಪುನೀತ್‌ ಗೌಡ) ಆತನ ಪತ್ನಿ ಪ್ರಕೃತಿ (ದಿವ್ಯಾ ಶೆಟ್ಟಿ) , […]Read More

ಫೆಬ್ರವರಿ 25ಕ್ಕೆ ಥಿಯೇಟರ್‌ಗೆ ಬರುತ್ತಿದ್ದಾನೆ ಅಘೋರ. ರಿಲೀಸ್‌ಗೆ ಸಾಥ್ ನೀಡಿದ ಕೆ.ಆರ್.ಜಿ ಸ್ಟುಡಿಯೋ

ಈಗಾಗಲೇ ೧೬ಕ್ಕೂ ಹೆಚ್ಚು ಅಂತರಾಷ್ಟಿçÃಯ ಫಿಲ್ಮ ಫೆಸ್ಟಿವಲ್ ಗಳಲ್ಲಿ ಪ್ರದರ್ಶನ ಕಂಡು ೩೨ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ‘ಅಘೋರ’ ಎಂಬ ಸಿನಿಮಾ ಇದೀಗ ಥಿಯೇಟರ್‌ನಲ್ಲಿ ಬಿಡುಗಡೆಯಾಗಲು ತಯಾರಾಗಿದೆ. ಚಿತ್ರ ಇದೇ ಫೆಬ್ರವರಿ ೨೫ರಂದು ರಾಜ್ಯಾದ್ಯಂತ ಕೆ.ಆರ್.ಜಿ ಸ್ಟುಡಿಯೋ ಮುಖೇನ ತೆರೆಗೆ ಬರಲಿದೆ. ಈಗಾಗಲೇ ಟ್ರೇಲರ್‌ನಿಂದ ಕುತೂಹಲ ಮೂಡಿಸಿರುವ ಈ ಚಿತ್ರವನ್ನು ಕೆ.ಆರ್.ಜಿ ಸ್ಟುಡಿಯೋನ ಕಾರ್ತಿಕ್ ಗೌಡ ಯೋಗಿ ಜಿ ರಾಜ್ ವಿತರಣೆ ಮಾಡುತ್ತಿರುವುದು ತಂಡಕ್ಕೆ ಹೊಸ ಚೈತನ್ಯ ತುಂಬಿದೆ. ಚಂದನವನದಲ್ಲಿ ಸಾಕಷ್ಟು ಹಾರರ್, ಸಸ್ಪೆನ್ಸ್, ಥ್ರಿಲ್ಲರ್, ಬ್ಲ್ಯಾಕ್ ಮ್ಯಾಜಿಕ್ […]Read More

ಕನ್ನಡದಲ್ಲಿ ಸಿದ್ಧವಾಗಿದೆ ವಿಶೇಷವಾದ ‘ಅಘೋರ’ ಸಿನಿಮಾ

ಸ್ಯಾಂಡಲ್ ವುಡ್ ನಲ್ಲಿ ಈಗಾಗಲೇ ಹಾರರ್, ಮಾದರಿಯ ಸಸ್ಪೆನ್ಸ್, ಥ್ರಿಲ್ಲರ್, ಬ್ಲ್ಯಾಕ್ ಮ್ಯಾಜಿಕ್ ಮುಂತಾದ ಕಥೆ ಒಳಗೊಂಡ ಸಾಕಷ್ಟು ಸಿನಿಮಾಗಳು ಬಂದು ಹೋಗಿದ್ದು, ಇದೀಗ ಈ ಎಲ್ಲಕ್ಕಿಂತ ವಿಭಿನ್ನವಾದ ಸಿನಿಮಾವೊಂದು ಸದ್ದಿಲ್ಲದೆ ಸಿದ್ದವಾಗಿದೆ. ಹೌದು ಈ ವಿಶ್ವವು ನಮಗೆ ಭೂಮಿ, ಗಾಳಿ, ಬೆಂಕಿ, ನೀರು, ಆಕಾಶ ನೀಡಿದೆ. ಪ್ರಕೃತಿಯು ಪ್ರತಿ ಸಮಯ ಮತ್ತು ಋತುಗಳಲ್ಲಿ ತನ್ನದೇ ಆದ ಕೆಲವು ಬದಲಾವಣೆಗಳನ್ನು ನೀಡುತ್ತದೆ. ಆದರೆ ಈ ಪ್ರಕೃತಿಯ ಸೃಷ್ಟಿಕರ್ತ ಯಾರು ಮತ್ತು ರಕ್ಷಕ ಯಾರು? ಹಾಗೆಯೇ ಹಿಂತಿರುಗುವ ಶಕ್ತಿ […]Read More

ಸಖತ್ ನಗುವಿನಿಂದ ಕೂಡಿದ್ದ ಕೆವಿಎನ್ ಪ್ರೊಡಕ್ಷನ್ಸ್ ಮೊದಲ ನಿರ್ಮಾಣದ ಚಿತ್ರ “ಸಖತ್” ಪ್ರೀ

ನಿಶಾ ವೆಂಕಟ್ ಕೊಣಾಂಕಿ, ವೆಂಕಟ್ ನಾರಾಯಣ್ ಸಾರಥ್ಯದ “ಕೆವಿಎನ್ ಪ್ರೊಡಕ್ಷನ್” ಕನ್ನಡ ಚಿತ್ರರಂಗಕ್ಕೆ ದೊಡ್ಡ ಮಟ್ಟದಲ್ಲೇ ಪಾದಾರ್ಪಣೆ ಮಾಡುತ್ತಿದೆ. 4 ಚಿತ್ರಗಳನ್ನು ನಿರ್ಮಿಸುತ್ತಿರುವ ಈ ಸಂಸ್ಥೆಯ ಮೊದಲ ಚಿತ್ರ, ಗೋಲ್ಡನ್ ಸ್ಟಾರ್ ಗಣೇಶ್ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ‘ಸಖತ್’ ನ.26ಕ್ಕೆ ಅದ್ಧೂರಿಯಾಗಿ ತೆರೆಗೆ ಬರೋದಿಕ್ಕೆ ರೆಡಿಯಾಗಿದೆ. ಫಸ್ಟ್ ಲುಕ್, ಟೀಸರ್ ಹಾಗೂ ಸಾಂಗ್ಸ್ ಮೂಲಕ ಕುತೂಹಲದ ಚಿಟ್ಟೆಯಾಗಿರುವ ‘ಸಖತ್’ ಸಿನಿಮಾ ಬಳಗ ನಿನ್ನೆ ಸಖತ್ ಅದ್ಧೂರಿಯಾಗಿ ಪ್ರೀ-ರಿಲೀಸ್ ಇವೆಂಟ್ ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ಸಿನಿಮಾದ ನಾಯಕ ಗೋಲ್ಡನ್ […]Read More

“ಎರಡು ಸಾವಿರದ ಇಪ್ಪತ್ತು ಗೋಪಿಕೆಯರು ” ಚಿತ್ರ ಡಿಸೆಂಬರ್ 10 ರಂದು ಬಿಡುಗಡೆ

ವಿಭಿನ್ನ ಕಥಾಹಂದರ ಹೊಂದಿರುವ “ಎರಡುಸಾವಿರದ ಇಪ್ಪತ್ತು ಗೋಪಿಕೆಯರು ” ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು, ಡಿಸೆಂಬರ್ ‌ಹತ್ತರಂದು ಬಿಡುಗಡೆಯಾಗಲಿದೆ. ಈ ಕುರಿತು ಮಾಹಿತಿ ನೀಡಲು ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು. ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಪ್ರವೀಣ್ ಸೂದ್ ಮುಖ್ಯ ಅತಿಥಿಯಾಗಿ ಆಗಮಿಸಿ, ಹಾಡುಗಳನ್ನು ವೀಕ್ಷಿಸಿ ಶುಭ ಕೋರಿದರು. ಈ ಚಿತ್ರ ನನ್ನ ಗುರುಗಳಾದ ಕುಚ್ಚಣ್ಣ ಶ್ರೀನಿವಾಸ್ ಅವರ ಸಾರಥ್ಯದಲ್ಲಿ ನಿರ್ಮಾಣವಾಗಿದೆ. ಪೊಲೀಸ್ ವೃತ್ತಿಯಲ್ಲಿರುವವರಿಗೂ ಸಾಕಷ್ಟು ಆಸೆಗಳಿರುತ್ತದೆ. ಆದರೆ ಕಾರ್ಯದೊತ್ತಡದಿಂದ ಆಗಿರುವುದಿಲ್ಲ. ನಮ್ಮ ಗುರುಗಳಿಗೂ ಮೊದಲಿನಿಂದಲೂ ‌ಸಿನಿಮಾ‌ ಬಗ್ಗೆ ಆಸಕ್ತಿ ‌. […]Read More

ಕಾವ್ಯಾಂಜಲಿ “ಲವ್‌ ಇನ್‌ ಗೋವಾ”

ಉದಯ ಟಿವಿ ಅಂದ್ರೆ ಜನಮಾನಸದಲ್ಲಿ ಮನರಂಜನೆಗೆ ಇನ್ನೊಂದು ಹೆಸರು. ಸುಮಾರು ಎರಡೂವರೆ ದಶಕಗಳಿಂದ ತನ್ನ ವಿಭಿನ್ನ ಕಥೆಗಳೊಂದಿಗೆ ಕರುನಾಡ ಕಲಾರಸಿಕರ ಮನಸ್ಸು ಗೆದ್ದಿದೆ. ಕೌಟುಂಬಿಕ ಕಥಾವಸ್ತುವಿನ ಜೊತೆಜೊತೆ ವೀಕ್ಷಕರ ಹೃದಯ ಮಿಡಿವ ಭಾವಗಳ ಸರಿಮಿಶ್ರಣದ ರಸದೌತಣ ನೀಡುತ್ತಿರೊ ಉದಯ ಟಿವಿಯ ಯಶಸ್ವಿ ಧಾರಾವಾಹಿಗಳಲ್ಲಿ ಕಾವ್ಯಾಂಜಲಿ ಕೂಡ ಒಂದು. ಇದೀಗ ಕಾವ್ಯಾಂಜಲಿ ಧಾರಾವಾಹಿಯು ೧೫೦ ಸಂಚಿಕೆಗಳನ್ನು ಪೂರೈಸಿದೆ. ಫೆಬ್ರವರಿ ಅಂದ್ರೆ ಪ್ರಪಂಚದಾದ್ಯಂತ ಪ್ರೇಮಿಗಳ ಸಂಬ್ರಮ ಶುರುವಾಗುತ್ತೆ. ಕಾವ್ಯಾಂಜಲಿ ಧಾರಾವಾಹಿ ಅಂದ್ರೆ ಕಾವ್ಯ-ಸಿದ್ಧಾರ್ಥ್‌, ಅಂಜಲಿ-ಸುಶಾಂತ್ ಮುದ್ದಾದ ಜೋಡಿ ಕಣ್ಮುಂದೆ ಬರುತ್ತೆ. […]Read More

2021 ರಲ್ಲಿ ಬಿಗ್ ಬಜೆಟ್ ಪ್ಯಾನ್‌ ಇಂಡಿಯಾ ಸಿನಿಮಾ ನಿರ್ಮಿಸಲಿರುವ ಉದಯ್‌ ಮೆಹ್ತಾ

‘ಬಚ್ಚನ್’, ‘ಕೃಷ್ಣನ್ ಲವ್ ಸ್ಟೋರೀ’, ‘ಸಿಂಗ’, ‘ಬ್ರಹ್ಮಚಾರಿ’ ಸೇರಿದಂತೆ ಸಾಕಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಉದಯ್‌ ಮೆಹ್ತಾ ಈಗ ಹುಲಿಯನ್ನು ಆಧಾರವಾಗಿಟ್ಟುಕೊಂಡು ಪ್ಯಾನ್‌ ಇಂಡಿಯಾ ಸಿನಿಮಾ ಮಾಡುತ್ತಿದ್ದಾರೆ. ಮಹಾರಾಷ್ಟ್ರದ ಕಾಡೊಂದರಲ್ಲಿ ನರ ಭಕ್ಷಕಳಾಗಿ ಕಾಣಿಸಿಕೊಂಡಿದ್ದ ಅವನಿ ಹುಲಿಯನ್ನು ಆಧಾರವಾಗಿಟ್ಟುಕೊಂಡು ಉದಯ್‌ ಮೆಹ್ತಾ ಕಥೆ ಬರೆದಿದ್ದಾರೆ. ಈ ಹಿಂದೆ ಬ್ರಹ್ಮಚಾರಿ ಚಿತ್ರದಲ್ಲಿ ಕಥೆಗಾರರಾಗಿ ಬದಲಾಗಿದ್ದ ಅವರು ಈ ಚಿತ್ರಕ್ಕೂ ಕಥೆ ಬರೆದಿದ್ದಾರೆ. ವಿಶೇಷ ಎಂದರೆ ಈ ಚಿತ್ರದಲ್ಲಿ VFX ಹೆಚ್ಚಾಗಿರಲಿದ್ದು, ಬಜೆಟ್‌ ಕೂಡಾ ದೊಡ್ಡದಾಗಿರುತ್ತದೆ. ಉದಯ್‌ ಮೆಹ್ತಾ ಬರೆದ […]Read More

ತೆರೆ ಮೇಲೆ ‘ದಮಯಂತಿ’ಯ ಅಬ್ಬರ – ಚಿತ್ರ ವಿಮರ್ಶೆ

ಚಿತ್ರ: ದಮಯಂತಿ ನಿರ್ದೇಶನ: ನವರಸನ್‌ ನಿರ್ಮಾಣ: ನವರಸನ್‌ ಸಂಗೀತ: ಗಣೇಶ್‌ ನಾರಾಯಣ್‌ ಸಿನಿಮಾಟೋಗ್ರಫಿ: ಪಿ ಕೆ ಎಚ್‌ ದಾಸ್‌ ತಾರಗಣ: ರಾಧಿಕಾ ಕುಮಾರಸ್ವಾಮಿ, ಗಿರೀಶ್‌, ತಬಲಾ ನಾಣಿ,ಮತ್ತಿತರರು. ಹಾರರ್‌ ಸಿನಿಮಾಗಳೆಂದರೆ ಹೆಚ್ಚಾಗಿ ಭಯ ಹುಟ್ಟಿಸುವ ಸಿನಿಮಾಗಳೇ ಇರುತ್ತದೆ ಆದರೆ ಅವು ಒಂದೇ ವರ್ಗದ ಜನರಿಗೆ ಇಷ್ಟವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಹಾರರ್‌ ಜತೆಗೆ ಕಾಮಿಡಿಯನ್ನು ಬೆರೆಸಿ ಬೇರೆ ಬೇರೆ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯುತ್ತಿದೆ ಚಿತ್ರತಂಡ. ಆ ಸಾಲಿಗೆ ದಮಯಂತಿ ಸಹ ಸೇರುತ್ತದೆ. ಈ ಸಿನಿಮಾದಲ್ಲಿ ರಿಯಾಲಿಟಿ ಶೋದ ಕಾನ್ಸೆಪ್ಟ್‌ […]Read More

ಶಿಕ್ಷಣ ವ್ಯವಸ್ಥೆಯ ನೈಜ ಅನಾವರಣ “ಕಾಳಿದಾಸ ಕನ್ನಡ ಮೇಷ್ಟ್ರು” – ಚಿತ್ರ ವಿಮರ್ಶೆ

ಕನ್ನಡ ಚಿತ್ರ: ಕಾಳಿದಾಸ ಕನ್ನಡ ಮೇಷ್ಟ್ರು ನಿರ್ದೇಶನ: ಕವಿರಾಜ್‌ ನಿರ್ಮಾಣ: ಉದಯ್‌ ಕುಮಾರ್‌ ತಾರಾಗಣ: ಜಗ್ಗೇಶ್‌, ಮೇಘನಾ ಗಾಂವ್ಕರ್‌, ಅಂಬಿಕಾ, ತಬಲಾ ನಾಣಿ, ಯತಿರಾಜ್‌, ಉಷಾ ಭಂಡಾರಿ, ಬಾಲ ನಟ ಓಂ, ಆರ್ಯ ಇತರರು ಸಂಗೀತ: ಗುರು ಕಿರಣ್‌ ಛಾಯಾಗ್ರಹಣ: ಗುಂಡ್ಲುಪೇಟೆ ಸುರೇಶ್‌. ಜಗ್ಗೇಶ್‌ ಅವರಂಥ ನಟರನ್ನು ಇಟ್ಟುಕೊಂಡು ಗಂಭೀರ ವಿಷಯವನ್ನು ಹೇಳಬಹುದು ಎಂಬುದನ್ನು ನಿರ್ದೇಶಕರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಈ ವಾರ ಬಿಡುಗಡೆಯಾಗಿರುವ ಕಾಳಿದಾಸ ಕನ್ನಡ ಮೇಷ್ಟ್ರು ಸಿನಿಮಾದಲ್ಲಿಯೂ ಸಹ ನಿರ್ದೇಶಕ ಕವಿರಾಜ್‌ ಗಂಭಿರ ವಿಷಯವನ್ನು ಹೇಳಿದ್ದಾರೆ. ಜತೆಗೆ ಅದನ್ನು ಮನರಂಜನಾತ್ಮಕವಾಗಿ ಹೇಳಿ ಅದನ್ನು ಪ್ರೇಕ್ಷಕರಿಗೆ ತಲುಪಿಸಿದ್ದಾರೆ. ಈ ಸಿನಿಮಾದಲ್ಲಿ ಸರ್ಕಾರಿ ಶಾಲೆಯ ಕನ್ನಡ ಶಿಕ್ಷಕನೊಬ್ಬನ ಮನೆಯ ಕಥೆಯನ್ನು ಸಮಾಜದ ಕಥೆಯನ್ನಾಗಿ ಬಹಳ ವಿಶೇಷವಾಗಿ ಹೇಳಲಾಗಿದೆ. ತನ್ನ ಶಾಲೆಯ ಮಕ್ಕಳ ಅಚ್ಚುಮೆಚ್ಚಿನ […]Read More

ಹೊಸ ಮಾದರಿಯ ಕಥೆ ಹೇಳುವ ನ್ಯೂರಾನ್‌ – ಚಿತ್ರವಿಮರ್ಶೆ

ಕನ್ನಡ ಚಿತ್ರ: ನ್ಯೂರಾನ್‌ ನಿರ್ದೇಶಕ: ವಿಕಾಸ್‌ ಪುಷ್ಪಗಿರಿ ನಿರ್ಮಾಪಕ: ವಿನಯ್‌ಕುಮಾರ್‌ ಸಂಗೀತ:ಗುರುಕಿರಣ್‌ ಕ್ಯಾಮೆರಾ : ಶೋಯಬ್‌ ಅಹಮದ್‌ ತಾರಾಗಣ: ಯುವ, ನೇಹಾಪಾಟೀಲ್‌, ವೈಷ್ಣವಿ ಮೆನನ್‌, ಶಿಲ್ಪಾ ಶೆಟ್ಟಿ , ಜೈಜಗದೀಶ್‌, ಅರವಿಂದ್‌ ರಾವ್‌ ಮತ್ತಿತರರು ಹೊಸ ಹೊಸ ನಿರ್ದೇಶಕರು ಹೊಸ ರೀತಿಯ ಪ್ರಯತ್ನಗಳನ್ನು ಆಗಾಗ ಮಾಡುತ್ತಲೇ ಇರುತ್ತಾರೆ ಈ ವಾರ ಬಿಡುಗಡೆಯಾಗಿರುವ ನ್ಯೂರಾನ್‌ ಸಹ ಕನ್ನಡ ಚಿತ್ರರಂಗದ ಮಟ್ಟಿಗೆ ಹೊಸ ಪ್ರಯತ್ನ. ಆದರೆ ಅದಕ್ಕೆ ಬೇಕಾದ ಪೂರ್ವ ತಯಾರಿಯ ಕೊರತೆ ಸಿನಿಮಾದಲ್ಲಿ ಎದ್ದು ಕಾಣುತ್ತದೆ.  ಸೈಂಟಿಫಿಕ್‌ ಥ್ರಿಲ್ಲರ್‌ ಎಂಬ ಮಾದರಿಯೇ ಚಿತ್ರರಂಗಕ್ಕೆಹೊಸ ಅನುಭವ ಅದನ್ನು ಕಟ್ಟಿಕೊಡಬೇಕಾದರೆ ಅದು ರೋಚಕವಾಗಿದ್ದರೆ ಮಾತ್ರ ಜನ ಇಷ್ಟಪಡುತ್ತಾರೆ. ನ್ಯೂರಾನ್‌ ಕಥೆಯ ವಿಚಾರದಲ್ಲಿ, ಅದನ್ನು ಹೇಳುತ್ತಾ ಹೋಗುವ ವಿಚಾರದಲ್ಲಿ ಹೊಸತನ […]Read More